ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್‌ನಲ್ಲೊಂದು ವಿಚಿತ್ರ ಸಂಗತಿ; ತಾಯಿ ಶವವನ್ನು 10 ವರ್ಷ ಫ್ರೀಜರ್‌ನಲ್ಲಿಟ್ಟ ಮಹಿಳೆ

|
Google Oneindia Kannada News

ಟೋಕಿಯೋ, ಜನವರಿ 30: ಮಹಿಳೆಯೊಬ್ಬಳು ತನ್ನ ತಾಯಿಯ ಶವವನ್ನು ಸುಮಾರು ಹತ್ತು ವರ್ಷಗಳ ಕಾಲ ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದ ವಿಚಿತ್ರ ಸಂಗತಿ ಜಪಾನ್ ನಲ್ಲಿ ಬೆಳಕಿಗೆ ಬಂದಿದೆ.

ಟೋಕಿಯೋದ ಯೂಮಿ ಯೋಶಿನೋ ಎಂಬ 48 ವರ್ಷದ ಮಹಿಳೆಯನ್ನ, ಮೃತದೇಹವೊಂದನ್ನು ಅಪಾರ್ಟ್ ಮೆಂಟ್ ನಲ್ಲಿ ಅಡಗಿಸಿಟ್ಟ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ತಾಯಿ ಸತ್ತ ಸಂಗತಿ ಬೇರೆಯವರಿಗೆ ತಿಳಿದರೆ ತಾನು ಆ ಮನೆಯಿಂದ ಹೊರ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ತನ್ನ ಮನೆಯಲ್ಲಿಯೇ ಶವವನ್ನು ಫ್ರೀಜರ್ ನಲ್ಲಿಟ್ಟಿದ್ದಾಗಿ ಮಹಿಳೆ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ.

ಮೀರತ್: ಕಸ ಎಸೆಯುವ ಸ್ಥಳದಲ್ಲಿ ಶಿರಚ್ಛೇದಿಸಿದ ಮಹಿಳೆ ಮೃತದೇಹ ಮೀರತ್: ಕಸ ಎಸೆಯುವ ಸ್ಥಳದಲ್ಲಿ ಶಿರಚ್ಛೇದಿಸಿದ ಮಹಿಳೆ ಮೃತದೇಹ

ತನ್ನ ತಾಯಿಯೊಂದಿಗೆ ನೆನಪು ಹಂಚಿಕೊಂಡ ಈ ಮನೆಯಿಂದ ಹೊರ ಹೋಗಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ತಾಯಿ ಸತ್ತ ನಂತರವೂ ಆಕೆಯ ಶವವನ್ನು ಹತ್ತು ವರ್ಷಗಳಿಂದ ನಾನೇ ಫ್ರೀಜರ್ ನಲ್ಲಿಟ್ಟು ಕಾಪಾಡಿಕೊಂಡೆ. ಅವರು ಸಾಯುವಾಗ ಸುಮಾರು 60 ವರ್ಷ ವಯಸ್ಸಾಗಿತ್ತು ಎಂದು ಮಹಿಳೆ ತಿಳಿಸಿದ್ದಾರೆ.

Japan Woman Hid Mothers Corpse For 10 Years In Freezer

ಟೋಕಿಯೋದ ಮುನಿಸಿಪಾಲ್ ಹೌಸಿಂಗ್ ಕಾಂಪ್ಲೆಕ್ಸ್ ನ ಅಪಾರ್ಟ್ ಮೆಂಟ್ ನಲ್ಲಿ ತಾಯಿ, ಮಗಳು ವಾಸವಿದ್ದರು. ಇದೇ ಜನವರಿ ತಿಂಗಳಲ್ಲಿ ಬಾಡಿಗೆ ಕಟ್ಟುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಅಪಾರ್ಟ್ ಮೆಂಟ್ ನಿಂದ ಒತ್ತಾಯವಾಗಿ ಕಳುಹಿಸಲಾಗಿತ್ತು. ಆನಂತರ ಮನೆ ಕ್ಲೀನ್ ಮಾಡಲು ಬಂದ ವ್ಯಕ್ತಿಗೆ ಬಚ್ಚಲ ಮನೆಯಲ್ಲಿಟ್ಟಿದ್ದ ಫ್ರೀಜರ್ ನಲ್ಲಿ ಶವ ಕಂಡುಬಂದಿತ್ತು. ಪೊಲೀಸರು ತನಿಖೆ ಕೈಗೊಂಡು ಮಹಿಳೆಯನ್ನು ಬಂಧಿಸಿದ್ದಾರೆ.

ಅಟಾಪ್ಸಿ ವರದಿಯಲ್ಲಿ ಆಕೆ ಸತ್ತ ಅವಧಿ ಹಾಗೂ ಕಾರಣ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

English summary
Japanese woman hid her mother's corpse in a freezer in her apartment for a decade,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X