ಉತ್ತರ ಕೊರಿಯಾ ವಿರುದ್ಧ ಯುದ್ಧಕ್ಕೆ ಸಿದ್ಧವಾಯ್ತಾ ಜಪಾನ್?
ಟೋಕಿಯೋ: ಉತ್ತರ ಕೊರಿಯಾ ವಿರುದ್ಧ ಜಪಾನ್ ರೊಚ್ಚಿಗೆದ್ದಿದೆ, ಅದರಲ್ಲೂ ಶತ್ರುಗಳ ಮೇಲೆ ಕಣ್ಣಿಡಲು ಮಿಲಿಟರಿ ಉಪಗ್ರಹ ಉಡಾವಣೆ ಮಾಡುತ್ತಿರುವ ಕಿಮ್ ಜಾಂಗ್ ಉನ್ ವಿರುದ್ಧ ಜಪಾನ್ ಯುದ್ಧಕ್ಕೆ ಸಿದ್ಧವಾಗಿದೆ. ಮತ್ತೊಂದ್ಕಡೆ ಏನೇ ಮಾಡಿದ್ರೂ ಮಿಲಿಟರಿ ಉಪಗ್ರಹ ಉಡಾಯಿಸಿಯೇ ಸಿದ್ಧ ಅಂತಾ ಕಿಮ್ ಜಾಂಗ್ ಉನ್ ನಿರ್ಧಾರ ಮಾಡಿದ್ದಾನೆ. ಹಾಗಾದ್ರೆ ಮುಂದಿನ ಪರಿಸ್ಥಿತಿ ಏನು? ತಿಳಿಯೋಣ ಬನ್ನಿ.
ಮೇ 31ರಿಂದ ಜೂನ್ 11 ರ ನಡುವೆ ಉತ್ತರ ಕೊರಿಯಾ ಮಿಲಿಟರಿ ಉಪಗ್ರಹ ಉಡಾವಣೆ ಮಾಡುವ ಬಗ್ಗೆ ಕಿಮ್ ಜಾಂಗ್ ಉನ್ ತಿಳಿಸಿದ್ದ. ಹೀಗಾಗಿ ಹೆಚ್ಚು ಟೆನ್ಷನ್ ಮಾಡಿಕೊಂಡಿರುವ ಜಪಾನ್, ತನ್ನ ಖಂಡಾಂತರ ಕ್ಷಿಪಣಿ ವ್ಯವಸ್ಥೆ ಅಲರ್ಟ್ ಮಾಡಿದೆ. ಅಕಸ್ಮಾತ್ ಉತ್ತರ ಕೊರಿಯಾ ಉಪಗ್ರಹ ತನ್ನ ವಾಯುಗಡಿ ಒಳಗೆ ಬಂದರೆ, ಅಲ್ಲೇ ಛಿದ್ರ ಮಾಡುವುದಾಗಿ ವಾರ್ನಿಂಗ್ ಕೊಟ್ಟಿದೆ ಜಪಾನ್. ಮತ್ತೊಂದ್ಕಡೆ ಕಿಮ್ ಜಾಂಗ್ ಉನ್ ಕೂಡ ಜಪಾನ್ ವಿರುದ್ಧ ತೊಡೆತಟ್ಟಿದ್ದಾನೆ (Kim Jong Un).

ಏನಿದು ಕೊರಿಯಾ & ಜಪಾನ್ ಜಗಳ?
ಅಷ್ಟಕ್ಕೂ ಅಲ್ಲಿ ಅವನದ್ದೇ ರೂಲ್ಸ್.. ಅವನು ಹೇಳಿದ ಮಾತೇ ಫೈನಲ್.. ಹೆಚ್ಚು ಕಮ್ಮಿ ಮಾತನಾಡಿದ್ರೆ ಹೆಣ ಕೂಡ ಸಿಗಲ್ಲ. ಮಹಾಶಯ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾಗೆ ಸರ್ವಾಧಿಕಾರಿ ಆಗಿ ಬಂದ ನಂತರ ಜಪಾನ್, ಅಮೆರಿಕ ಹಾಗೂ ತನ್ನ ಪರಮ ಶತ್ರು ದಕ್ಷಿಣ ಕೊರಿಯಾ ವಿರುದ್ಧ ಕೆಂಡ ಕಾರುತ್ತಿದ್ದಾನೆ. ಈ ರೀತಿ ತನ್ನ ಎಲ್ಲಾ ಶತ್ರು ರಾಷ್ಟ್ರಗಳ ಮೇಲೆ ಬಾಹ್ಯಾಕಾಶದಿಂದ ಕಣ್ಣು ಇಡಲು ಉಪಗ್ರಹ ಉಡಾವಣೆಗೆ ಸಜ್ಜಾಗಿದ್ದಾನೆ. ಈ ವಿಚಾರ ಈಗ ಬೆಂಕಿ ಹಚ್ಚುತ್ತಿದೆ.
ಒಂದೇ ವರ್ಷ, 100 ಮಿಸೈಲ್!
ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ. ಕಳೆದ ತಿಂಗಳಷ್ಟೇ ತನ್ನ ದೇಶ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಮಾಡುತ್ತಿದೆ ಎಂದು ತಿಳಿಸಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಉ.ಕೊರಿಯಾ ತಯಾರಿಸಿರುವ ಮಿಲಿಟರಿ ಉಪಗ್ರಹ ಉಡಾಯಿಸಲು ಕಿಮ್ ಸಜ್ಜಾಗಿದ್ದಾನೆ. ಇದು ಜಪಾನ್‌ಗೆ ಭಯ ತರಿಸಿದ್ದು, ಯುದ್ಧಕ್ಕೆ ಸಜ್ಜಾಗಿದೆ.

ಸುದ್ದಿ ಕೇಳುತ್ತಿದ್ದಂತೆ ಬೆಚ್ಚಿಬಿದ್ದಿತ್ತು ಜಪಾನ್
ಈಗಾಗಲೇ ಪರಮಾಣು ಕ್ಷಿಪಣಿಗಳ ಮೂಲಕ ಹೆಸರು ಮಾಡಿರುವ ಕಿಮ್ ಜಾಂಗ್ ಉನ್, ಈಗ ಗುಪ್ತಚರ ಉಪಗ್ರಹದ ಮೂಲಕ ಶತ್ರುಗಳ ಎದೆ ನಡುಗಿಸಲು ಸಜ್ಜಾಗಿದ್ದಾನೆ. ಮಾಹಿತಿ ಸಿಕ್ಕ ತಕ್ಷಣ ದಕ್ಷಿಣ ಕೊರಿಯಾ, ಜಪಾನ್ ಸೇರಿ ಅಮೆರಿಕ ಬೆಚ್ಚಿಬಿದ್ದಿದ್ದವು. ಯಾಕಂದ್ರೆ ಈ ದೇಶಗಳೇ ಕಿಮ್‌ಗೆ ಮೊದಲ ಟಾರ್ಗೆಟ್. ಹೀಗೆ ಶತ್ರುಗಳ ಆಳ ಅರಿಯಲು ಕಿಮ್ ಮಾಡಿಕೊಳ್ಳುತ್ತಿರುವ ಸಿದ್ಧತೆ & ಮಿಲಿಟರಿ ಉಪಗ್ರಹ ಉಡಾವಣೆ ಆಗುತ್ತಿರುವ ಬಗ್ಗೆ ಜಪಾನ್ ನೇರ ಎಚ್ಚರಿಕೆ ನೀಡಿದೆ.
ಆಗ ಕ್ಷಿಪಣಿ, ಈಗ ಉಪಗ್ರಹ!
ಕಿಮ್ ಜಾಂಗ್ ಉನ್ ಕಳೆದ ತಿಂಗಳು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿತ್ತು. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್.

ಒಟ್ನಲ್ಲಿ ಜಪಾನ್ ಬುಡಕ್ಕೆ ಮತ್ತೊಮ್ಮೆ ಬತ್ತಿ ಇಡಲು ಕಿಮ್ ಜಾಂಗ್ ಉನ್ ಸಜ್ಜಾಗಿದ್ದಾನೆ. ಕಳೆದ ತಿಂಗಳು ಕಿಮ್ ಜಾಂಗ್ ಉನ್ ಉಡಾಯಿಸಿದ್ದ ಕ್ಷಿಪಣಿ ನೇರ ಜಪಾನ್‌ನ ಪ್ರಮುಖ ನಗರದ ಮೇಲೆ ಬೀಳುವ ಸಂಭವ ಸೃಷ್ಟಿಯಾಗಿತ್ತು. ಈ ಎಲ್ಲಾ ಘಟನೆಗಳ ಬಳಿಕ ಜಪಾನ್ ಕೂಡ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮವನ್ನ ಕೈಗೊಳ್ಳುವುದಾಗಿ ಹೇಳಿದೆ. ಇದೇ ಕಾರಣಕ್ಕೆ ತನ್ನ ಕ್ಷಿಪಣಿ ವ್ಯವಸ್ಥೆ ಸಜ್ಜಾಗಿ ಇಟ್ಟುಕೊಂಡು, ಕಿಮ್ ಉಡಾಯಿಸುವ ಉಪಗ್ರಹ ನೆಲಕ್ಕೆ ಕೆಡವಲು ಸ್ಕೆಚ್ ಹಾಕಿದೆ.












Click it and Unblock the Notifications