ಜಪಾನ್‌ನ ಕನಸಿನ ಯೋಜನೆ ತೇಲುವ ಸೌರ ಸ್ಥಾವರಕ್ಕೆ 'ಟೈಫೂನ್' ಶಾಕ್, ಎಲ್ಲವೂ ಸರ್ವನಾಶ!

ತಂತ್ರಜ್ಞಾನದಲ್ಲಿ ಜಪಾನ್ ದೇಶವನ್ನು ಸಾಕಷ್ಟು ಮುಂದಿದೆ. ಗಾಳಿ, ನೀರಿನಿಂದ ಹಾಗೂ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಜಪಾನ್ ದೇಶವು ಮುಂದುವರಿದು ಖಾಲಿ ಅಣೆಕಟ್ಟುಗಳು ಮತ್ತು ಜಲಾಶಯಗಳ ಮೇಲ್ಮೈಯಲ್ಲಿ ನೀರಿನಲ್ಲಿ ತೆಲುವ ಸೌರ ವಿದ್ಯುತ್ ಉತ್ಪಾದಣಾ ಘಟಕ ನಿರ್ಮಿಸಿತ್ತು. ಈ ಮುಲಕ ಕಡಿಮೆ ಭೂಮಿ ಇರುವ ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗವಿದೆ ಎಂದೂ ತೋರಿಸಿಕೊಟ್ಟಿತು. ಆದರೆ ಹವಾಮಾನದ ತೀವ್ರ ಸವಾಲಿನ ಕಡೆಗೆ ಗಮನಹರಿಸದಿದ್ದ ಕಾರಣ ಯೋಜನೆ ಬುಡಮೇಲು ಆಗಿತ್ತು. ಮರಳಿ ಕಟ್ಟುವಲ್ಲಿ ಜಪಾನಿಯರು ಯಶಸ್ವಿಯಾದ ಕಥೆ ಇಲ್ಲಿದೆ.

ಭೌಗೋಳಿಕವಾಗಿ ಕಡಿಮೆ ಭೂಮಿ ಹೊಂದಿರುವ ದೇಶಗಳಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದಿಸುವುದು ದೊಡ್ಡ ಸವಾಲು. ಇಂತಹ ಸಮಸ್ಯೆ, ಸವಾಲನ್ನು ದಿಟ್ಟವಾಗಿ ಎದುರಿಸಿದ ಜಪಾನ್ ಅದ್ಭುತ ತಾಂತ್ರಿಕ ಕಲ್ಪನೆ ಜಾರಿಗೊಳಿಸಿತು. ಖಾಲಿ ಅಣೆಕಟ್ಟುಗಳು ಮತ್ತು ಜಲಾಶಯಗಳ ಮೇಲ್ಮೈ ಮೇಲೆ ಸಾವಿರಾರು ಸೌರ ಫಲಕಗಳನ್ನು ಜೋಡಿಸಿತು. ಹಡಗಿನಂತೆ ತೇಲುವ ವಿದ್ಯುತ್ ಸ್ಥಾವರವನ್ನು ನಿರ್ಮಿಸಿತು.

Japan Floating Solar Plant Destroyed by Typhoon Engineers is How Rebuilt It Stronger than before

2018ರ ಮಾರ್ಚ್ ಹೊತ್ತಿಗೆ ಜಪಾನಿನ ಚಿಬಾ ಪ್ರಿಫೆಕ್ಚರ್‌ನಲ್ಲಿರುವ ಯಮಕುರಾ ಅಣೆಕಟ್ಟು ಜಲಾಶಯದಲ್ಲಿ ಈ ಬೃಹತ್ ಸೌರ ಸ್ಥಾವರದ ಸ್ಥಾಪನೆ ಮಾಡಿತ್ತು. ಜಪಾನ್ ತಂತ್ರಜ್ಞರು 'ಕ್ಯೋಸೆರಾ ಟಿಸಿಎಲ್ ಸೋಲಾರ್' ಜಂಟಿ ಉದ್ಯಮದೊಂದಿಗೆ ಒಟ್ಟು ಸುಮಾರು 44 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದರು. ನಿತ್ಯ ಸುಮಾರು 13.7 ಮೆಗಾವ್ಯಾಟ್‌ಗಳ ವಿದ್ಯುತ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಈ ಸ್ಥಾವರಕ್ಕಿತ್ತು.

16,170 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

ಜಪಾನ್‌ನಿನಲ್ಲೇ ಅತೀ ದೊಡ್ಡ ಸೌರ ಸ್ಥಾವರ ಇದಾಗಿದ್ದು, 50,904 ಸೌರ ಮಾಡ್ಯೂಲ್‌ಗಳನ್ನು ನೀರಿನ ಮೇಲೆ ಸ್ಥಾಪಿಸಲಾಗಿತ್ತು. ಇದರಿಂದ ವಾರ್ಷಿಕವಾಗಿ ಅಂದಾಜು 16,170 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಅಂದರೆ ಒಟ್ಟು ಸುಮಾರು 4,970 ಮನೆಗಳಿಗೆ ವಿದ್ಯುತ್ ಪೂರೈಸಬಹುದಿತ್ತು. ವ್ಯವಸಾಯ, ನಗರದಲ್ಲಿ ದೈನಂದಿನ ಬಳಕೆಗೆ ವಿದ್ಯುತ್ ಬಳಕೆ ಮಾಡಬಹುದಿತ್ತು. ಯೋಜನೆಗೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಚಂಡಮಾರುತಕ್ಕೆ ವಿದ್ಯುತ್ ಸ್ಥಾವರ ನಾಶ

ಆದರೆ, ತಂತ್ರಜ್ಞರ ಒಂದೂವರೆ ವರ್ಷದ ಶ್ರಮವು ನೈಸರ್ಗಿಕ ಸವಾಲು ಎದುರಿಸುವಲ್ಲಿ ವಿಫಲವಾಯಿತು. ಈ ತೇಲುವ ವಿದ್ಯುತ್ ಸ್ಥಾವರವು ಚಂಡಮಾರುತದ (ಟೈಫೂನ್) ಅಬ್ಬರಕ್ಕೆ ನಾಶವಾಯಿತು. ವಿಶ್ವದ ಗಮನ ಸೆಳೆದಿದ್ದ ಜಪಾನ್ ವಿದ್ಯುತ್ ಉತ್ಪಾದನಾ ತಂತ್ರಜ್ಞಾನವು ಕ್ಷಣಮಾತ್ರದಲ್ಲಿ ಹಾಳಾಗಿತ್ತು. ಸೆಪ್ಟೆಂಬರ್ 2019 ರಲ್ಲಿ ಉಂಟಾದ ತೀವ್ರ ಚಂಡಮಾರುತ 200 ಕಿಲೋ ಮೀಟರ್ ವೇಗದ ಗಾಳಿಯು ವಿದ್ಯುತ್ ಸ್ಥಾವರವನ್ನು ಅಲ್ಲೋಕಲ್ಲೋಲ ಮಾಡಿತ್ತು. ಗಾಳಿಯ ಹೊಡೆತಕ್ಕೆ ಸೌರ ವಿದ್ಯುತ್ ಪ್ಲೇಟ್‌ಗಳು, ಸ್ಥಾವರದ ಉಪಕರಣಗಳು ಹಾನಿಗೊಳಗಾದವು. ಸ್ಥಾವರವು ತೀವ್ರ ಹೊಡೆತ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರಲಿಲ್ಲ. ಅಲ್ಲದೇ ಅದೇ ವೇಳೆ ಪ್ರವಾಹದಂತಹ ವಾತಾವರಣ ನಿರ್ಮಾಣವಾಗಿತ್ತು, ಶಾರ್ಟ್ ಸರ್ಕ್ಯೂಟ್ ನೀರಿನ ಮೇಲೆ ಬೆಂಕಿ ಹೊತ್ತಿಕೊಂಡಿತು. 50 ಫಲಕಗಳು ಸುಟ್ಟು ಭಸ್ಮವಾದವು. ಜಪಾನಿನ ಮಹತ್ವದ ಯೋಜನೆ ಹವಾಮಾನಕ್ಕೆ ಸಿಕ್ಕು ನಾಶವಾಯಿತು.

ಜಪಾನಿನ ಸಚಿವಾಲಯವು ಈ ದುರಂತದ ಕುರಿತು ಸೂಕ್ತ ತನಿಖೆ ನಡೆಸಿತು. ನೀರಿನ ಮೇಲೆ ಒಂದು ಹಂತದವರೆಗಿನ ವೈಪರೀತ್ಯ ತಡೆಯಲು ಸಾಧ್ಯವಾಗುವಂತಹ ಸ್ಥಿರವಾಗಿ ನಿಲ್ಲಲು ಸಾಧ್ಯವಾಗುವಂತಹ 420 ಆಂಕರ್‌ಗಳು ಮತ್ತು 823 ಮೂರಿಂಗ್ ಲೈನ್ ಬಳಸಲಾಗಿತ್ತು. ಗಾಳಿಯ ಅತೀ ವೇಗದಲ್ಲಿ ಬೀಸಿದ್ದರಿಂದ ದಕ್ಷಿಣ-ಮಧ್ಯ ಭಾಗದಲ್ಲಿರುವ 7 ಪ್ರಮುಖ ಆಂಕರ್‌ಗಳು ಹಾರಿಹೋದವು. ಇನ್ನೂ ಅನೇಕ ಅಂಶಗಳು ತನಿಖೆಯಿಂದ ಬೆಳಕಿಗೆ ಬಂದವು.

ಕೈ ಚೆಲ್ಲದ ಎಂಜಿನಿಯರ್, ಪುನರ್ ನಿರ್ಮಾಣ

ಇಷ್ಟಕ್ಕೆ ಸುಮ್ಮನಾಗದ ಜಪಾನಿ ಇಂಜಿನಿಯರ್‍‌ಗಳು, ತಜ್ಞರು ಯೋಜನೆಯಿಂದ ಹಿಂದೆ ಸರಿಯಲಿಲ್ಲ. ಹವಾಮಾನ ವೈಪರೀತ್ಯವನ್ನು ಸವಾಲಾಗಿ ಸ್ವೀಕರಿಸಿದರು. ಆದ ದೋಷಗಳನ್ನು ಸರಿಪಡಿಸಿಕೊಂಡರು. ಯೋಜನೆ ಮರು-ವಿನ್ಯಾಸಗೊಳಿಸಿದರು. ಭಿನ್ನವಾದ ಹೆಚ್ಚು ಒತ್ತಡವನ್ನು ತಡೆದುಕೊಳ್ಳಲು ಸ್ಥಾವರ ಸ್ಥಾಪನೆಗೆ ಪ್ಲ್ಯಾನ್ ಮಾಡಿದರು. ಸಣ್ಣ ಚದರ ಆಕಾರದ ದ್ವೀಪಗಳಾಗಿ ವಿಂಗಡಿಸುವ ಮೂಲಕ ಸ್ಥಾವರ್ ಪುನರ್ ನಿರ್ಮಿಸಲಾಯಿತು. 2021ರ ಅಕ್ಟೋಬರ್ ಹೊತ್ತಿಗೆ, ಈ 14 ಮೆಗಾವ್ಯಾಟ್ ಸ್ಥಾವರವನ್ನು ಯಶಸ್ವಿಯಾಗಿ ಪುನರ್ ಸ್ಥಾಪಿಸಲಾಯಿತು. ಅಲ್ಲಿಂದ ದೇಶವೇ ಬೆರಗಾಗುವಂತೆ ಸೌರ ವಿದ್ಯುತ್ ಉತ್ಪಾದನೆ ಪುನರ್ ಆರಂಭವಾಯಿತು.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪರಿಸರ, ಪ್ರಕೃತಿ ಮುಂದೆ ಯಾರು ನಿಲ್ಲಲಾಗದು ಎಂಬುದು ಒಂದೆಡೆಯಾದರೆ ಅದೇನೇ ಬಂದರೂ ಮರಳಿ ಎದ್ದು ನಿಲ್ಲುವ ಶಕ್ತಿ ನಮ್ಮಲ್ಲಿದೆ ಎಂದು ಜಪಾನ್ ಈ ಹಿಂದಿನಿಂದಲೂ ಅನೇಕ ಬಾರಿ ಸಾಬೀತು ಮಾಡುತ್ತಲೇ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+