ಜಪಾನಿನಲ್ಲಿ ಜಲ ಪ್ರಳಯ 11 ಮಂದಿ ಸಾವು, 21 ಮಂದಿ ನಾಪತ್ತೆ!

Posted By:
Subscribe to Oneindia Kannada

ಟೋಕಿಯೊ, ಸೆಪ್ಟೆಂಬರ್ 01: ಲಯನ್ ರಾಕ್ ಚಂಡಮಾರುತದ ಆರ್ಭಟಕ್ಕೆ ಜಪಾನ್ ತತ್ತರಿಸುತ್ತಿದೆ. ಇಲ್ಲಿ ತನಕ 11 ಜನರನ್ನು ಬಲಿ ತೆಗೆದುಕೊಡಿದ್ದು, 21 ಜನ ನಾಪತ್ತೆಯಾಗಿದ್ದಾರೆ.

ಇವಾತೆ ಪ್ರಾಂತ್ಯದ ಇವಾಯಿಜುಮಿ ಅತ್ಯಂತ ಹೆಚ್ಚಿನ ಹಾನಿಗೊಳಗಾಗಿದ್ದು, ಸುಮಾರು 9 ಮಂದಿ ಸಾವನ್ನಪ್ಪಿದ್ದಾರೆ. ಚಂಡಮಾರುತ ಭೀತಿಯಿಂದ ನಿರಾಶ್ರಿತರ ಕೇಂದ್ರದಲ್ಲಿ ನೆಲೆ ಕಂಡಿದ್ದ ಇವರೆಲ್ಲರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನದಿ ನೀರಿಗೆ 18 ಜನ ನಾಪತ್ತೆಯಾಗಿದ್ದಾರೆ.[ನ್ಯೂಜಿಲೆಂಡ್ ನಲ್ಲಿ ಭೀಕರ ಭೂಕಂಪ, ಸುನಾಮಿ ಭೀತಿ?]

Japan: 21 missing, 11 killed in typhoon

ಹೊಕೈಡೊ ದ್ವೀಪದ ಉತ್ತರಭಾಗದಿಂದ ಮೂವರು ನಾಪತ್ತೆಯಾಗಿದ್ದಾರೆ. ಇಎಫ್ಇ ನ್ಯೂಸ್ ವರದಿಯಂತೆ ಕಾರಿನೊಳಗೆ ಕುಳಿತ್ತಿದ್ದ 29 ವರ್ಷದ ವ್ಯಕ್ತಿಯೊಬ್ಬ ಸೇತುವೆಯೊಂದರ ಮೇಲೆ ತೆರಳುವಾಗ, ಸೇತುವೆ ಕುಸಿತ ಬಿದ್ದಿದ್ದಾರೆ.

ಇಷ್ಟೇ ಸಾಲದೆಂಬಂತೆ ಲಯನ್ ರಾಕ್ ನಂತರ ನಾಥೆಯುನ್ ಎಂಬ ಮತ್ತೊಂದು ಚಂಡಮಾರುತದ ಭೀತಿಯ ಎಚ್ಚರಿಕೆ ಎದುರಿಸಿ ಎಂದು ಜಪಾನ್ ಹವಾಮಾನ ಇಲಾಖೆ ಹೇಳಿದೆ.ಈ ವರ್ಷದ 12ನೇ ಚಂಡಮಾರುತ ಇದ್ದಾಗಿದ್ದು, ಸದ್ಯದಲ್ಲಿ ಓಕಿನಾವಾದ ದಕ್ಷಿಣ ಭಾಗದಲ್ಲಿ ಶಾಂತ ಸ್ಥಿತಿಯಲ್ಲಿದ್ದು ನಂತರ 920 ಕಿ.ಮೀ ಪ್ರತಿ ಗಂಟೆ ವೇಗದ ಗಾಳಿಯೊಂದಿಗೆ ಅಲೆಗಳು ಆಗಸವನ್ನು ಚುಂಬಿಸುವ ಭರದಲ್ಲಿ ಸಾಗಲಿವೆ ಎಂಬ ಎಚ್ಚರಿಕೆ ಹೊರಡಿಸಾಗಿದೆ.

ಶನಿವಾರ ಹಾಗೂ ಭಾನುವಾರದ ವೇಳೆಗೆ ಕ್ಯುಶು ದ್ವೀಪಕ್ಕೆ ನಂತರ ಹೊನ್ಶು ದ್ವೀಪ ಮತ್ತು ಚೀನಾದ ಉತ್ತರ ಭಾಗಕ್ಕೆ ಚಂಡಮಾರುತ ಹರಡುವ ಸಾಧ್ಯತೆಯಿದೆ.(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The number of people missing in Japan in the wake of typhoon Lionrock rose to 21 after the storm left at least 11 dead and caused severe flooding due to torrential rain.
Please Wait while comments are loading...