ನಿಮ್ಮ ಅಭಿಪ್ರಾಯವೇ ಸಾರ್ವತ್ರಿಕವಲ್ಲ: ಅಮೆರಿಕಗೆ ಜೈ ಶಂಕರ್ ತಿರುಗೇಟು!
ಭಾರತದ ಬಗ್ಗೆ ಕೆಲವು ದೇಶಗಳು ಆಗಾಗ ಕೊಂಕು ನುಡಿಯುವುದು ಇದೆ. ಭಾರತ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಕೆಲವು ದೇಶಗಳು ಭಾರತದ ಬಗ್ಗೆ ವ್ಯಂಗ್ಯ ನುಡಿಯುವುದು ಇದೆ. ಇದೀಗ ಈ ವಿಷಯದಲ್ಲಿ ಅಮೆರಿಕದ ಸರದಿ. ಅಮೆರಿಕ ಭಾರತವನ್ನು ಕೆಣಕಿದ್ದು, ಸಭೆಯಲ್ಲಿಯೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ತಿರುಗೇಟು ನೀಡಿದ್ದಾರೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಮಾಡಿದ್ದು ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿವೆ. ಆದರೆ, ಭಾರತದ ಬಗ್ಗೆ ವ್ಯಂಗ್ಯವಾಡುವುದಕ್ಕೆ ಬಂದ ಅಮೆರಿಕಗೆ ಸಭೆಯಲ್ಲೇ ಜೈ ಶಂಕರ್ ಅವರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಭಾರತ ಹಾಗೂ ಅಮೆರಿಕದ ನಡುವೆ ಸಂಬಂಧ ಸುಧಾರಿಸುತ್ತಿದೆ ಎನ್ನುವಾಗಲೇ ಅಮೆರಿಕ ತನ್ನ ಬುದ್ಧಿಯನ್ನು ಪ್ರದರ್ಶಿಸುತ್ತಿದೆ. ಭಾರತದೊಂದಿಗೆ ವ್ಯವಹಾರದಲ್ಲಿ ಹಾಗೂ ಸಂಬಂಧದಲ್ಲಿ ಉತ್ತಮ ಬಾಂಧವ್ಯವವನ್ನು ಹೊಂದಿದ್ದೇವೆ ಎಂದು ತೋರಿಸಿಕೊಳ್ಳುತ್ತಿರುವ ಅಮೆರಿಕವು ಇದರ ನಡುವೆಯೇ ಭಾರತದೊಂದಿಗೆ ಅಮಾನವೀಯವಾಗಿಯೂ ನಡೆದುಕೊಳ್ಳುತ್ತಿದೆ. ಭಾರತ ಹಾಗೂ ಅಮೆರಿಕದ ಸಂಬಂಧ ಉತ್ತಮವಾಗಿದೆ. ಅಮೆರಿಕದೊಂದಿಗೆ ಭಾರತ ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತಿದೆ. ಆದರೆ, ಅಮೆರಿಕ ಮಾತ್ರ ದೊಡ್ಡಣನ ಸಣ್ಣತನವನ್ನು ಮುಂದುವರಿಸಿದೆ.

ಜರ್ಮನಿಯ ಮ್ಯೂನಿಕ್ ಭದ್ರತಾ ಸಮಾವೇಶದಲ್ಲಿ ಭಾರತವನ್ನು ಅಮೆರಿಕ ಕೆಣಕಿದ್ದು, ಭಾರತವು ಇದಕ್ಕೆ ಸರಿಯಾಗಿಯೇ ಉತ್ತರಿಸಿದೆ. ಮ್ಯೂನಿಕ್‌ನಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಸಮಾವೇಶ ನಡೆದಿದ್ದು, ಈ ಸಮಾವೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಲ್ಲಿನ ಜನರಿಗೆ ಮೂಲಭೂತ ಸೇವೆಯನ್ನು ಸರಿಯಾಗಿ ಕೊಡುವುದಿಲ್ಲ ಅಥವಾ ಪೂರೈಸುವುದಿಲ್ಲ ಎಂದು ಅಮೆರಿಕದ ಸಂಸದೆ ಎಲಿಸಾ ಸ್ಲಾಟ್‌ಕಿನ್ ಅವರು ಹೇಳಿದ್ದಾರೆ. ಭಾರತದ ಪ್ರತಿನಿಧಿ ಸಹ ಇರುವ ಸಮಾವೇಶದಲ್ಲಿ ಈ ಮಾತನ್ನು ಹೇಳಲಾಗಿದ್ದು, ಇದು ಭಾರತದ ಕೆಂಗಣ್ಣಿಗೆ ಕಾರಣವಾಗಿದೆ.
ಇದಕ್ಕೆ ಅದೇ ಸಭೆಯಲ್ಲಿ ತಿರುಗೇಟು ನೀಡಿರುವ ಕೇಂದ್ರ ಸಚಿವ ಜೈ ಶಂಕರ್ ಅವರು, ಭಾರತವೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಇದೆ. ನಾವು 80 ಕೋಟಿ ಜನರಿಗೆ ಆಹಾರ ಭದ್ರತೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಿಮ್ಮ ಅಭಿಪ್ರಾಯವೇ ಸಾರ್ವತ್ರಿಕ ಎಂದುಕೊಳ್ಳಬೇಡಿ: ನಿಮ್ಮ ಅಭಿಪ್ರಾಯವೇ ಸಾರ್ವತ್ರಿಕ ಅಥವಾ ಎಲ್ಲರದ್ದೂ ಎಂದು ಕೊಳ್ಳಬೇಡಿ ಎಂದು ಅಮೆರಿಕಗೆ ಜೈಶಂಕರ್ ಅವರು ಹೇಳಿದ್ದಾರೆ. ವಿಶ್ವದಲ್ಲಿ ಹಲವು ಮಾದರಿಯ ಚರ್ಚೆಗಳು ನಡೆದಿವೆ. ಬೇರೆ ಬೇರೆ ದೇಶಗಳ ಅಭಿಪ್ರಾಯ ಭಿನ್ನವಾಗಿರುತ್ತವೆ. ನಿಮ್ಮ ಅಭಿಪ್ರಾಯವೇ ಅಂತಿಮ ಎಂದುಕೊಳ್ಳುವ ಅವಶ್ಯಕತೆ ಇಲ್ಲ ಎಂದೂ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಮುಂದುವರಿದು ಈ ಸಭೆಯಲ್ಲಿ ಜೈ ಶಂಕರ್ ಅವರು ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಮಾತನಾಡುವ ದೇಶಗಳು ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ನಿರ್ದಿಷ್ಟ ಹೇಳಿಕೆಯನ್ನು ಅಮೆರಿಕವನ್ನು ಉದ್ದೇಶಿಸಿಯೇ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಜಾತಂತ್ರದ ಬಗ್ಗೆ ಬೇರೆ ದೇಶಗಳಿಗೆ ಉಪದೇಶ ಕೊಡುವ ನೀವು ಸಹ (ಪಾಶ್ಚಿಮಾತ್ಯ ದೇಶಗಳು) ಆ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.












Click it and Unblock the Notifications