Israeli-Palestinian Conflict: ಮುಂದುವರೆದ ಯುದ್ಧ: ಇಸ್ರೇಲ್‌ನಲ್ಲಿ 600 ಮಂದಿ ಸಾವು

ಇಸ್ರೇಲ್ ಮತ್ತು ಪ್ಯಾಲೆಸ್ಟಿನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿದ ನಂತರ ಅಧಿಕೃತವಾಗಿ ಯುದ್ಧ ಆರಂಭವಾಗಿದೆ. ಎರಡೂ ಕಡೆಯಿಂದ ಗುಂಡು, ಬಾಂಬ್ ದಾಳಿ ನಡೆಯುತ್ತಿದ್ದು ಈವರೆಗೆ ಇಸ್ರೇಲಿನ್ 600 ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು "ದೀರ್ಘ ಮತ್ತು ಕಷ್ಟಕರವಾದ ಯುದ್ಧವನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಘೋಷಿಸುವ ಮೂಲಕ, ಇಸ್ರೇಲ್ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ಮಾಡಲು ಆರಂಭಿಸಿದೆ.

Israeli-Palestinian Conflict: 600 Killed as Clashes Intensify

ಹಮಾಸ ಗುಂಪು ಬೃಹತ್ ರಾಕೆಟ್ ದಾಳಿ ಮಾಡಿದ್ದಲ್ಲದೆ, ನೆಲ ಮತ್ತು ಸಮುದ್ರದ ಮಾರ್ಗವಾಗಿ ಕೂಡ ಇಸ್ರೇಲ್ ಮೇಲೆ ಆಕ್ರಮಣ ಮಾಡುತ್ತಿದೆ. ಮೂಲಗಳ ಪ್ರಕಾರ ಈವರೆಗೆ ಹಮಾಸ್ ಉಗ್ರರ ದಾಳಿಯಿಂದ 600 ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದು 1000 ಮಂದಿ ಗಾಯಗೊಂಡಿದ್ದಾರೆ.

ಪ್ಯಾಲೆಸ್ಟಿನ್‌ನಲ್ಲೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ

ಹಮಾಸ್ ದಾಳಯಾಗಿ ಪ್ರತಿಯಾಗಿ ಇಸ್ರೇಲ್ ಪಡೆಗಳು ಕೂಡ ಪ್ಯಾಲೆಸ್ಟಿನ್ ಪ್ರದೇಶಗಳ ಮೇಲೆ ರಾಕೆಟ್, ಬಾಂಬ್ ದಾಳಿ ನಡೆಸುತ್ತಿದ್ದು, ಕನಿಷ್ಠ 400 ಮಂದಿ ಪ್ಯಾಲೆಸ್ಟಿನ್ ಪ್ರಜೆಗಳು ಸಾವನ್ನಪ್ಪಿದ್ದು, 1700 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಲೆಬನಾನ್‌ನ ಇರಾನ್-ಬೆಂಬಲಿತ ಹೆಜ್ಬೊಲ್ಲಾಹ್ ಗಾಝಾ ಪಟ್ಟಿಯಿಂದ ಇಸ್ರೇಲ್‌ನ ಪ್ರದೇಶಗಳ ಮೇಲೆ ಭಾರಿ ಸಂಖ್ಯೆಯಲ್ಲಿ ಫಿರಂಗಿ ಶೆಲ್‌ ಮತ್ತು ಕ್ಷಿಪಣಿಗಳನ್ನು ಹಾಕಲಾಗಿದೆ ಎಂದು ಹೇಳಿದರು. ಹಮಾಸ್ ಜೊತೆಗೂಡಿ ಈ ದಾಳಿ ಮಾಡಲಾಗಿದೆ ಎಂದು ಅವರು ವರದಿಯಾಗಿದೆ.

ಇಸ್ರೇಲ್‌ನಿಂದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ

ಇಸ್ರೇಲ್ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ದಾಳಿಯನ್ನು ಇಸ್ರೇಲ್‌ಗೆ "ಕಪ್ಪು ದಿನ" ಎಂದು ಕರೆದಿದ್ದು, ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. "ಇಸ್ರೇಲ್ ಸೇನೆ ಹಮಾಸ್‌ನ ಸಾಮರ್ಥ್ಯಗಳನ್ನು ನಾಶಮಾಡಲು ತನ್ನ ಎಲ್ಲಾ ಬಲವನ್ನು ಬಳಸುತ್ತಿದೆ. ನಾವು ಅವರನ್ನು ನಾಶ ಮಾಡುವ ಮೂಲ, ಈ ಕರಾಳ ದಿನದ ಸೇಡು ತೀರಿಸಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಗಾಝಾದಲ್ಲಿನ ಹಮಾಸ್ ಅಡಗುತಾಣಗಳ ಬಳಿ ವಾಸಿಸುವ ಪ್ಯಾಲೆಸ್ಟೀನಿಯಾದವರಿಗೆ ಎಚ್ಚರಿಕೆ ನೀಡಿದ್ದು, ಜಾಗ ಖಾಲಿ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಹಮಾಸ್ ಅಡಗುತಾಣಗಳ ಮೇಲೆ ಬಲವಾದ ದಾಳಿ ಮಾಡುವುದರಿಂದ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಪ್ಯಾಲೆಸ್ಟಿನ್ ಜನಗಳಿಗೆ ಇಸ್ರೇಲ್ ಹೇಳಿದೆ.

ಸುಮಾರು 100 ಸೈನಿಕರು ಮತ್ತು ನಾಗರಿಕರನ್ನು ಹಮಾಸ್ ಅಪಹರಿಸಿದೆ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. "ಭಯೋತ್ಪಾದಕರು ಮನೆಗಳಿಗೆ ನುಗ್ಗಿ ನಾಗರಿಕರನ್ನು ಕಗ್ಗೊಲೆ ಮಾಡಿದರು. ನೂರಾರು ಹಮಾಸ್ ಭಯೋತ್ಪಾದಕರು ದೇಶವನ್ನು ಆಕ್ರಮಿಸಿದ್ದಾರೆ, ನೂರಾರು ಜನರು ಇಸ್ರೇಲ್‌ನೊಳಗೆ ಇನ್ನೂ ಹೋರಾಡುತ್ತಿದ್ದಾರೆ" ಎಂದು ಸೇನಾ ವಕ್ತಾರ ರಿಚರ್ಡ್ ಹೆಚ್ಟ್ ಹೇಳಿದರು.

ಹಮಾಸ್ ಬಂಧಿತ ಇಸ್ರೇಲಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಗಾಜಾ ಬಳಿಯ ಇಸ್ರೇಲಿ ಪಟ್ಟಣದ ಸ್ಡೆರೋಟ್‌ನ ಬೀದಿಗಳಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು ಮತ್ತು ಕಾರುಗಳ ಮೇಲೆ ಗುಂಡಿನ ಸುರಿಮಳೆಯಾಗಿದ್ದು, ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿವೆ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರನ್ನು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನಿಸಲು ಕೇಳಿಕೊಂಡಿದೆ. "ದಯವಿಟ್ಟು ಎಚ್ಚರಿಕೆಯಿಂದ ಇರಿ, ಅನಗತ್ಯ ಓಡಾಟವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಗಳ ಹತ್ತಿರ ಇರಿ" ಎಂದು ಅದು ಸಲಹೆಯಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+