ಇರಾನ್ ಸೇನೆಗೆ ಹೃದಯಾಘಾತ, ಹೊಸದಾಗಿ ನೇಮಕವಾಗಿದ್ದ ಸೇನಾ ಮುಖ್ಯಸ್ಥ ಹತ್ಯೆ Israel And Iran

ಇಸ್ರೇಲ್ ಹೆಂಗೆ ರೊಚ್ಚಿಗೆದ್ದು ಕೂತಿದೆ ಅಂದ್ರೆ ತನ್ನ ಕೈಗೆ ಸಿಗುವ ಇರಾನ್ ದೇಶದ ಯಾರನ್ನೂ ಬಿಡುತ್ತಿಲ್ಲ, ಹಂಗೆ ಹುಡುಕಿ ಹುಡುಕಿ ಹೊಡೆಯುತ್ತಿದೆ. ಅದರಲ್ಲೂ ಇರಾನ್ ದೇಶದ ಸೇನೆ ಮುಖ್ಯಸ್ಥರು & ರಾಜಕೀಯ ನಾಯಕರನ್ನ ಮುಲಾಜು ನೋಡದೆಯೇ ಮುಗಿಸುತ್ತಿದೆ. ಇಂತಹ ಸಮಯದಲ್ಲೇ ಇತ್ತೀಚೆಗೆ ಹೊಸದಾಗಿ ನೇಮಕವಾಗಿದ್ದ ಇರಾನ್ ಸೇನಾ ಮುಖ್ಯಸ್ಥನನ್ನೂ ಹತ್ಯೆ ಮಾಡಿಬಿಟ್ಟಿದೆ. ಹಾಗಾದ್ರೆ, ಇದೀಗ ಮೃತಪಟ್ಟ ಇರಾನ್ ಸೇನಾ ಮುಖ್ಯಸ್ಥ ಯಾರು? ಮುಂದೆ ಓದಿ.

ಇರಾನ್ & ಇಸ್ರೇಲ್ ನಡುವೆ ಘನಘೋರ ಯುದ್ಧ ನಡೆಯುತ್ತಿದ್ದು, ಇಬ್ಬರೂ ತಮ್ಮ ತಮ್ಮ ಬಳಿ ಇರುವ ಕಿಲೋ ಮೀಟರ್ ಉದ್ದಗಲದ ಭೂಮಿಯನ್ನ ಕೆಲವೇ ಕ್ಷಣಗಳಲ್ಲಿ ಉಡಾಯಿಸುವ ಅಸ್ತ್ರ ಬಳಸುತ್ತಿದ್ದಾರೆ. ಇಸ್ರೇಲ್ ಸೇನೆ ಇರಾನ್ ಮೇಲೆ ಭೀಕರ ದಾಳಿ ನಡೆಸುತ್ತಿರುವ ವಿಡಿಯೋ & ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತಿವೆ. ಇದೇ ವೇಳೆ, ಮತ್ತೊಂದು ಭರ್ಜರಿ ಸಂಚಲನ ಸೃಷ್ಟಿ ಮಾಡುವ ಸುದ್ದಿ ಹಬ್ಬಿದೆ. ಹಾಗಿದ್ರೆ ಇದೀಗ ಮೃತಪಟ್ಟ ಇರಾನ್ ಸೇನಾ ಮುಖ್ಯಸ್ಥ ಯಾರು?

Israel Kills Newly Appointed Iran Military Chief General Ali Shadmani in Airstrike

ಇರಾನ್ ಸೇನಾ ಮುಖ್ಯಸ್ಥ ಇನ್ನಿಲ್ಲ

ಅಂದಹಾಗೆ ಕೇವಲ 4 ದಿನಗಳ ಹಿಂದೆ ಇರಾನ್ ದೇಶದ ಐಆರ್‌ಜಿಸಿಯ ಕಮಾಂಡರ್ ಆಗಿದ್ದ ಘೋಲಮ್ ಅಲಿ ರಶೀದ್ ಹತ್ಯೆ ಮಾಡಿತ್ತು ಇಸ್ರೇಲ್ ಸೇನೆ. ಜೂನ್ 13 ಶುಕ್ರವಾರ ವೈಮಾನಿಕ ದಾಳಿ ನಡೆಸಿ ಐಆರ್‌ಜಿಸಿ ಕಮಾಂಡರ್ ಘೋಲಮ್ ಅಲಿ ರಶೀದ್ ಹತ್ಯೆಯನ್ನು ಮಾಡಿತ್ತು ಇದೇ ಇಸ್ರೇಲ್. ಆ ನಂತರ ಅಂದ್ರೆ 4 ದಿನಗಳ ಹಿಂದಷ್ಟೇ ಅಲಿ ಶನ್ಮಾನಿ ನೇಮಕ ಮಾಡಿತ್ತು ಇರಾನ್ ಸೇನೆ.

ಆದರೆ ಇದೀಗ ಮತ್ತೆ ಇಸ್ರೇಲ್ ಸೇನೆ ನಡೆಸಿದ ಭೀಕರ ದಾಳಿಯಲ್ಲಿ ಶನ್ಮಾನಿ ಕೂಡ ಜೀವವನ್ನೇ ಕಳೆದುಕೊಂಡಿದ್ದು, ಇರಾನ್ ಎದೆ ನಡುಗಿ ಹೋಗಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಮತ್ತಷ್ಟು ಘೋರ ದಾಳಿಯನ್ನ ಇರಾನ್ ನಡೆಸುವ ಸಾಧ್ಯತೆ ದಟ್ಟವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಮತ್ತೊಂದು ದೊಡ್ಡ ಚರ್ಚೆಗೆ ಕೂಡ ವೇದಿಕೆ ಒದಗಿಸಿದ್ದು, ಮುಂದೆ ಏನಾಗುತ್ತೋ? ಎಂಬ ಆತಂಕ ಕೂಡ ಇದೀಗ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+