100 ದಿನ ಮುಗಿಸಿದ ಯುದ್ಧ, ಸತ್ತವರ ಸಂಖ್ಯೆ ತಲೆ ತಿರುಗಿಸುತ್ತೆ!

ಯುದ್ಧ ಬೇಡ ಬೇಡ ಅಂದ್ರೂ ಆಧುನಿಕ ಮಾನವ ಪ್ರತಿ ಕ್ಷಣವೂ ಯುದ್ಧದ ಬಗ್ಗೆಯೇ ಯೋಚನೆ ಮಾಡ್ತಿದ್ದಾನೆ. ಅಲ್ಲದೆ ಒಂದು ದೇಶವನ್ನು ಮತ್ತೊಂದು ದೇಶ ಸರ್ವನಾಶ ಮಾಡೋದಕ್ಕಾಗಿ ಏನು ಬೇಕೋ, ಅದನ್ನೆಲ್ಲಾ ಅಚ್ಚುಕಟ್ಟಾಗಿ ಸಿದ್ಧ ಮಾಡಿಕೊಳ್ಳುತ್ತಿದ್ದಾನೆ ಮನುಷ್ಯ. ಹೀಗೆ ಶುರುವಾದ ತಿಕ್ಕಾಟ ಈಗ ಜಗತ್ತಿನಾದ್ಯಂತ 2 ಭೀಕರ ಯುದ್ಧಗಳಿಗೆ ನಾಂದಿ ಹಾಡಿದೆ. ಇದೇ ಸಮಯದಲ್ಲಿ ಭೀಕರ ಹಿಂಸಾಚಾರ ಬರೋಬ್ಬರಿ 100 ದಿನಗಳನ್ನ ಕೂಡ ಪೂರೈಸಿದೆ.

ಅಕ್ಟೋಬರ್ 7, 2023ರಂದು ಯಾರೂ ಅಂದುಕೊಳ್ಳದ ಘಟನೆ ನಡೆದೆ ಹೋಗಿತ್ತು. ಆ ಎರಡು ದೇಶಗಳ ನಡುವೆ ಯುದ್ಧ ಬೆಂಕಿ ಹೊತ್ತಿಕೊಂಡು, ಬಡಿದಾಟವು ಶುರುವಾಗಿತ್ತು. ಹೀಗೆ ಅಲ್ಲಿ, ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 3 ತಿಂಗಳು ಕಳೆದು ಹೋಗಿದೆ. ರಷ್ಯಾ VS ಉಕ್ರೇನ್ ಯುದ್ಧದ ರೀತಿಯೇ ಹಮಾಸ್ & ಇಸ್ರೇಲ್ ವಾರ್ ಕೂಡ ಈಗ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಈ ಯುದ್ಧ ಬರೋಬ್ಬರಿ 100 ದಿನ ಪೂರೈಸಿ ಸೆಂಚ್ಯುರಿ ಬಾರಿಸಿದ್ರೆ, ಇಸ್ರೇಲ್ ಸೇನೆಯಿಂದ ದಾಳಿ ಮತ್ತಷ್ಟು ತೀವ್ರಗೊಂಡಿದೆ. ಹಾಗೇ ಸಾವಿನ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ.

Israel & Hamas War Has Been Completed 100 Days

24 ಲಕ್ಷ ಜನರಿಗೆ ಸಂಕಷ್ಟ?

ಇಸ್ರೇಲ್ ಸೇನೆ VS ಹಮಾಸ್ ಉಗ್ರರ ನಡುವೆ ನಿರಂತರ ದಾಳಿ ನಡೆಯುತ್ತಿದೆ. ಹೀಗೆ ಹಿಂಸಾಚಾರ ಜೋರಾಗುತ್ತಿದೆ. ಇಬ್ಬರ ಮಧ್ಯೆ ಯುದ್ಧ ಶುರುವಾಗಿ ಬರೋಬ್ಬರಿ 100 ದಿನ ಕಳೆದು ಹೋಗಿದ್ದು ಹೀಗಿದ್ದಾಗ ಇಸ್ರೇಲ್ ಮಾತ್ರ ಹಿಂದೆ ಮುಂದೆ ಯೋಚಿಸದೆ. ನಿರಂತರ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಸ್ರೇಲ್ ನಡೆ ದಾಳಿಗೆ 24 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮತ್ತೊಂದ್ಕಡೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇಸ್ರೇಲ್ ಸೇನೆ ತನ್ನ ಶತ್ರುಗಳಾದ ಹಮಾಸ್ ಉಗ್ರರನ್ನ ಹತ್ಯೆ ಮಾಡಲು ಮುನ್ನುಗ್ಗುತ್ತಿದೆ.

ಕಾರ್ಯಾಚರಣೆ ನಿಲ್ಲೋದಿಲ್ಲ ಗ್ಯಾರಂಟಿ!

ಅಷ್ಟಕ್ಕೂ ಹಮಾಸ್‌ ಉಗ್ರರನ್ನ ಹತ್ತಿಕ್ಕುವ ಒನ್ ಲೈನ್ ಅಜೆಂಡಾ ಜೊತೆಗೆ ಇಸ್ರೇಲ್‌ ನಿರಂತರ ದಾಳಿ ನಡೆಸುತ್ತಿದೆ. ಆದರೆ ಹೀಗೆ ಉಗ್ರರ ಮೇಲೆ ದಾಳಿ ನಡೆಸುವಾಗ ಅಮಾಯಕರ ಜೀವವು ಹೋಗುತ್ತಿರುವುದು, ಇಸ್ರೇಲ್ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಇಸ್ರೇಲ್‌ ಪ್ರಧಾನಿ, ಬೆಂಜಮಿನ್ ನೆತನ್ಯಾಹು ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಿದ್ರೂ ಹಮಾಸ್‌ ಸರ್ವನಾಶಕ್ಕೆ ಇದು ಅತ್ಯಗತ್ಯ, ಹೀಗಾಗಿ ನಮ್ಮ ಕಾರ್ಯಾಚರಣೆ ನಿಲ್ಲಿಸಲು ಆಗಲ್ಲ ಎಂದು ಇಸ್ರೇಲ್ ಈಗ ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದೆ.

Israel & Hamas War Has Been Completed 100 Days

25 ಸಾವಿರಕ್ಕೂ ಹೆಚ್ಚು ಜನ ಸಾವು?

ಸಂಘರ್ಷ ಶುರು ಆದ ನಂತರ ಇಲ್ಲಿಯವರೆಗೂ ಇಸ್ರೇಲ್‌ನಲ್ಲಿ ಬಹುತೇಕ ನಾಗರಿಕರು ಸೇರಿದಂತೆ 1,140 ಜನ ಮೃತಪಟ್ಟಿದ್ದಾರೆ. ಹಮಾಸ್ 250 ಜನರನ್ನ ಒತ್ತೆಯಾಳಾಗಿ ಇರಿಸಿಕೊಂಡಿದೆ ಇನ್ನ ಇವ್ರಲ್ಲಿ 132 ಜನ ಈಗ್ಲೂ ಹಮಾಸ್‌ ವಶದಲ್ಲಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಪ್ಯಾಲೆಸ್ತಿನ್ ವಲಯದಲ್ಲಿ ಮಹಿಳೆಯರು & ಮಕ್ಕಳು ಸೇರಿ ಈವರೆಗೆ ಸುಮಾರು 23,843 ಜನ ಜೀವಿಬಿಟ್ಟು ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಹೀಗೆ ಹಮಾಸ್ & ಇಸ್ರೇಲ್ ನಡುವಿನ ಸಮರವು ದಿನದಿಂದ ದಿನಕ್ಕೆ ರಕ್ತಮಯ ಆಗ್ತಿದ್ದು ಒಂದು ಕಡೆ ವಿಶ್ವಸಂಸ್ಥೆ ಈ ಯುದ್ಧ ನಿಲ್ಲಿಸಲು ಪ್ರಯತ್ನ ಮುಂದುವರಿಸಿದೆ. ಆದ್ರೂ ಅದೇ ಸಮಯಕ್ಕೆ ಅಮೆರಿಕ ಅಡ್ಡಗಾಲು ಹಾಕುತ್ತಿರುವ ಆರೋಪ ಕೇಳಿಬರುತ್ತಿದೆ. ಇದರ ಜತೆ ರಷ್ಯಾ VS ಉಕ್ರೇನ್ ವಾರ್ ಕೂಡ ತಲ್ಲಣ ಸೃಷ್ಟಿ ಮಾಡಿದೆ. ಹೀಗಾಗಿ ಈ ಬೆಳವಣಿಗೆಗಳು ಎಲ್ಲಿ 3ನೆ ಮಹಾಯುದ್ಧಕ್ಕೆ ನಾಂದಿ ಹಾಡುತ್ತೋ? ಅನ್ನೋ ಭಯ ಕೂಡ ಜಗತ್ತಿನಾದ್ಯಂತ ಆವರಿಸಿದೆ. ಆದ್ರೆ ಈ ರೀತಿಯ ವಿನಾಶಕಾರಿ ಬೆಳವಣಿಗೆ ನಡೆಯಬಾರದು ಎಂಬುದು ನಾಗರಿಕ ಸಮಾಜದ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+