Israel-Hamas War: ಒಂದು ವರ್ಷ ಮುಗಿಸಿದ ಭೀಕರ ಕದನ.. ಎಲ್ಲಿ ನೋಡಿದರು ಶವಗಳ ರಾಶಿ...

ಗಾಜಾ ಈಗ ಥೇಟ್ ಸ್ಮಶಾನದ ರೀತಿ ಕಾಣುತ್ತಿದೆ, ಅಲ್ಲಿ ಈಗ ಎಲ್ಲಿ ನೋಡಿದರೂ ಕಟ್ಟಡದ ಅವಶೇಷ ಕಾಣುತ್ತಿವೆ. ಹಾಗೇ ಶವಗಳ ರಾಶಿ ಕೂಡ ಅಲ್ಲಿನ ವಾತಾವರಣದ ಸೂಕ್ಷ್ಮತೆಯನ್ನ ತಿಳಿಸುತ್ತದೆ. ನೋಡ ನೋಡುತ್ತಲೇ ಗಾಜಾ ಪಟ್ಟಿ ಇದೀಗ ನರಕವಾಗಿದೆ, ಸರಿಯಾಗಿ ಕಳೆದ ತಿಂಗಳು ಆರಂಭವಾದ ಭೀಕರ ಕದನ ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಹಾಗಾದ್ರೆ ಈ ಯುದ್ಧ ನಿಲ್ಲುವುದು ಯಾವಾಗ? ಹಮಾಸ್ & ಇಸ್ರೇಲ್ ನಡುವಿನ ಕದನದಿಂದ ಜೀವಬಿಟ್ಟ ಜನರ ಸಂಖ್ಯೆ ಎಷ್ಟು? ಬನ್ನಿ ತಿಳಿಯೋಣ.

ಜಗತ್ತು ಶಾಂತವಾಗಿತ್ತು, ಅತ್ತ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಡೆಯುತ್ತಿತ್ತು. ಹೀಗಿದ್ದಾಗ ಅಕ್ಟೋಬರ್ 7, 2023 ರಂದು ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಮತ್ತು ಹಮಾಸ್ ದಿಢೀರ್ ಯುದ್ಧದ ಬೆಂಕಿ ಹೊತ್ತಿಸಿದ್ದವು. ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ, ಯುದ್ಧ ನಿಲ್ಲಿಸುವ ಯತ್ನ ಕೂಡ ಫ್ಲಾಪ್ ಆಗುತ್ತಿವೆ. ಹಾಗಾದರೆ ಈ ಯುದ್ಧ ನಿಲ್ಲುವುದು ಯಾವಾಗ?

Israel And Hamas War In Gaza Has Been Completed 1 Year

ಯುದ್ಧ ನಿಲ್ಲಿಸುವ ನಿರೀಕ್ಷೆ ಹುಸಿ!

ಆಧುನಿಕ ಜಗತ್ತಿನಲ್ಲಿ ಯುದ್ಧಗಳ ಅಗತ್ಯತೆ ಇಲ್ಲ, ಆದರೂ ಯುದ್ಧವನ್ನು ಮನುಷ್ಯ ಇದೀಗ ಬಯಸುತ್ತಿರುವ ಕಾರಣಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಹೀಗಿದ್ದಾಗಲೇ, ಇಸ್ರೇಲ್ & ಗಾಜಾ ಮಧ್ಯೆ ಕೂಡ ಘೋರ ಯುದ್ಧ ಆರಂಭವಾಗಿ ನೋಡ ನೋಡುತ್ತಲೇ 1 ವರ್ಷ ಕಳೆದು ಹೋಗಿದೆ.

ಈ ಯುದ್ಧ ಆರಂಭವಾದ ಸಮಯದಲ್ಲಿ ಕೆಲವೇ ದಿನಗಳಲ್ಲಿ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದೆಲ್ಲಾ ಇದೀಗ ಹುಸಿಯಾಗಿದ್ದು, ಇನ್ನೂ ಹಲವು ವರ್ಷಗಳ ಕಾಲ ಇಸ್ರೇಲ್ ಸೇನೆ ಈ ಯುದ್ಧವನ್ನು ಮುಂದುವರಿಸುವ ಸಾಧ್ಯತೆ ಇದೀಗ ದಟ್ಟವಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಇರಾನ್, ಲೆಬನಾನ್ & ಸಿರಿಯಾ ದೇಶಗಳು ಕೂಡ ಇಸ್ರೇಲ್ ವಿರುದ್ಧ ತಿರುಗಿಬಿದ್ದು ಯುದ್ಧ ನಡೆಸುತ್ತಿವೆ.

3ನೇ ಮಹಾಯುದ್ಧದ ಭಯ.. ಭಯ...

ಒಟ್ನಲ್ಲಿ ಮನುಷ್ಯರು ಬುದ್ಧಿ ಕಲಿಯೋದಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ದು, ಭವಿಷ್ಯದಲ್ಲಿ ಇದೆಲ್ಲವೂ ಭೂಮಿಗೆ ದೊಡ್ಡ ಕಂಟಕ ತರಲಿದೆ. ಹೀಗಾಗಿ ಮುನಷ್ಯರ ಭವಿಷ್ಯ ಕೂಡ ಡೋಲಾಯಮಾನ ಸ್ಥಿತಿಗೆ ತಲುಪಿದ್ದು, ಯುದ್ಧ ನಿಲ್ಲಿಸಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೋಳಿ ಜಗಳವೇ 3ನೇ ಮಹಾಯುದ್ಧಕ್ಕೆ ಪ್ರೋತ್ಸಾಹ ನೀಡಿದರೂ ಅಚ್ಚರಿ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+