8 ಸೈನಿಕರನ್ನು ಕಳೆದುಕೊಂಡ ಇಸ್ರೇಲ್ ಸೇನೆ?
ಹಮಾಸ್ & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಭೀಕರವಾಗುತ್ತಿದೆ. ಈಗಾಗಲೇ ಸುಮಾರು 37 ಸಾವಿರಕ್ಕೂ ಹೆಚ್ಚು ಜನರು ಈ ತಿಕ್ಕಾಟದಲ್ಲಿ ಜೀವವನ್ನೇ ಬಿಟ್ಟಿದ್ದಾರೆ. ಇದು ಪರಿಸ್ಥಿತಿಯನ್ನು ಕೈಮೀರಿ ಹೋಗುವಂತೆ ಮಾಡಿದೆ. ಇಂತಹ ಪರಿಸ್ಥಿತಿ ಇರುವಾಗಲೇ ಇಸ್ರೇಲ್ ಸೇನೆಗೆ ಕೂಡ ಭಾರಿ ದೊಡ್ಡ ಆಘಾತ ಎದುರಾಗಿದೆ. ಹಾಗಾದ್ರೆ ಏನದು ಆಘಾತ? ಮುಂದೆ ಓದಿ.
ಇಸ್ರೇಲ್ ತನ್ನ ಶತ್ರು ಹಮಾಸ್ ಮತ್ತು ಪ್ಯಾಲೆಸ್ತೀನ್ ನಾಶಕ್ಕೆ ತೊಡೆತಟ್ಟಿದೆ. ಹೀಗಾಗಿಯೇ, ಮನಸ್ಸಿಗೆ ಬಂದ ರಿತಿ ದಾಳಿ ಮಾಡುತ್ತಿದೆ. ಹೀಗೆ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಅಮಾಯಕರ ಜೀವ ಕೂಡ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದ್ರಲ್ಲೂ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಸುಮಾರು 37 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಎಲ್ಲಾ ರೀತಿಯಲ್ಲಿ, ಯುದ್ಧ ಆರ್ಭಟಿಸಿದೆ. ಆದ್ರೆ ಈ ಯುದ್ಧದಲ್ಲಿ ಇಸ್ರೇಲ್ ಈಗ ಭಾರಿ ಹಿನ್ನಡೆ ಉಂಟಾಗಿದೆ.

8 ಇಸ್ರೇಲಿ ಸೈನಿಕರು ಬಲಿ
ಹೌದು ಗಾಜಾ ಪಟ್ಟಿಯಲ್ಲಿ ಯುದ್ಧ ನಡೆಸುತ್ತಿದ್ದ 8 ಇಸ್ರೇಲಿ ಯೋಧರು ಈಗ ಬಲಿಯಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಇಸ್ರೇಲ್ ಸೇನೆ ರೊಚ್ಚಿಗೇಳುವಂತೆ ಮಾಡಿದೆ ಈ ಘಟನೆ. ರಫಾ ಸುತ್ತಮುತ್ತ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸುತ್ತಿದೆ. ಈ ಸಮಯದಲ್ಲಿ ಇಸ್ರೇಲ್ ಸೈನಿಕರು ಬಲಿಯಾಗಿದ್ದು, ಭಾರಿ ಗೊಂದಲ ಸೃಷ್ಟಿ ಮಾಡಿದೆ. ಇದೇ ಘಟನೆ ನೆಪವಾಗಿ ಇಟ್ಟುಕೊಂಡು, ಇಸ್ರೇಲ್ ಮತ್ತಷ್ಟು ಭೀಕರ ದಾಳಿ ನಡೆಸುತ್ತಾ? ಎಂಬ ಆತಂಕ ಕೂಡ ಆವರಿಸಿದೆ.
ಇಸ್ರೇಲ್ ಸೈನಿಕರ ಸಾವಿನ ನಂತರ, ತನ್ನ ದಾಳಿಯ ಮಾರ್ಗದಲ್ಲಿ ಇಸ್ರೇಲ್ ಬದಲಾವಣೆ ಕೂಡ ಮಾಡಿದೆ ಎನ್ನಲಾಗಿದ್ದು. ಮತ್ತೊಂದ್ಕಡೆ, 19 ಪ್ಯಾಲೆಸ್ತೀನ್ ನಾಗರಿಕರು ಇಸ್ರೇಲ್ ದಾಳಿಗೆ ಜೀವ ಬಿಟ್ಟಿದ್ದಾರೆ. ಇಸ್ರೇಲ್ ಶಸ್ತ್ರಸಜ್ಜಿತ ಯೋಧರ ಮೇಲೆ ಹಮಾಸ್ ದಾಳಿ ವೇಳೆ ಈ ಘಟನೆ ನಡೆದಿದ್ದು, ಮತ್ತಷ್ಟು ಯೋಧರನ್ನ ಗಾಜಾಪಟ್ಟಿ ಭಾಗಕ್ಕೆ ಕಳುಹಿಸಲು ಇಸ್ರೇಲ್ ಸಜ್ಜಾಗಿದೆ.
ಯುದ್ಧ ಶುರುವಾಗಿದ್ದು ಯಾವಾಗ?
2023ರ ಅಕ್ಟೋಬರ್ 7 ರಂದು ಶುರುವಾದ ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಗಾಜಾ ಭಾಗಶಃ ಪೀಸ್ ಪೀಸ್ ಆಗಿ ಹೋಗಿ, ಜನಗಳು ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದಾರೆ. ಇಸ್ರೇಲ್ ದಾಳಿ ಪರಿಣಾಮ ಗಾಜಾ ಪಟ್ಟಿ ಭಾಗದಲ್ಲಿರುವ ಶೇ 35 ರಷ್ಟು ಕಟ್ಟಡಗಳಿಗೆ ಹಾನಿಯಾಗಿದೆ. ಹಾಗೇ ಗಾಜಾದಲ್ಲಿ 88,868 ಕಟ್ಟಡ ಪೂರ್ಣ ಅಥವಾ ಭಾಗಶಃ ಹಾನಿ ಆಗಿವೆಯಂತೆ ಇದು ಸಾಲದೆಂಬಂತೆ ಸಾವಿರಾರು ಜನ ಜೀವ ಬಿಟ್ಟಿದ್ದಾರೆ. ಹೀಗಿದ್ದರೂ ಇಬ್ಬರ ನಡುವೆ ಫೈಟಿಂಗ್ ಮುಂದುವರಿದು ಭಯ ಹುಟ್ಟುಹಾಕಿದೆ.












Click it and Unblock the Notifications