ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಚೀನಾ, ಪಾಪಿ ದೇಶದ ಬಣ್ಣ ಬಯಲು ಮಾಡಿದ ಭಾರತ... Islamabad Incident
ಪಾಕಿಸ್ತಾನ ತನ್ನ ಬುದ್ಧಿ ಸರಿ ಮಾಡಿಕೊಳ್ಳುವ ಮಾತು ಬಿಡಿ, ಅಕ್ಕಪಕ್ಕದ ದೇಶಗಳಿಗೂ ನೆಮ್ಮದಿಯನ್ನ ನೀಡುತ್ತಿಲ್ಲ. ಒಂದು ಕಡೆ ಅಫ್ಘಾನಿಸ್ತಾನ ಪದೇ ಪದೇ ಪಾಕಿಸ್ತಾನ ವಿರುದ್ಧ ಗರಂ ಆಗುತ್ತಿದೆ, ಹೀಗಿದ್ದಾಗ ಭಾರತದ ಜೊತೆಗೆ ಕೂಡ ಪಾಕಿಸ್ತಾನ ಕಿರಿಕ್ ಮಾಡಲು ಕಾಯುತ್ತಲೇ ಇರುತ್ತದೆ. ಭಾರತ ಕೂಡ ಪಾಪಿ ಪಾಕಿಸ್ತಾನಕ್ಕೆ ಸರಿಯಾಗೇ ಬುದ್ಧಿ ಕಲಿಸುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ, ತನ್ನ ನೆಲದಲ್ಲಿ ತಾನೇ ಸಾಕಿರುವ ಉಗ್ರರ ಕೈಯಲ್ಲಿ ಮೊನ್ನೆ ಮೊನ್ನೆಯಷ್ಟೇ ಸರಿಯಾಗಿ ಕಚ್ಚಿಸಿಕೊಂಡಿದೆ ಪಾಕಿಸ್ತಾನ. ಆದರೆ ತನ್ನ ತಪ್ಪು ಒಪ್ಪಿಕೊಳ್ಳದೆ ಭಾರತದ ವಿರುದ್ಧ ಆರೋಪ ಮಾಡಿದ್ದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ಹೋಗಿದೆ. ಮತ್ತೊಂದು ಕಡೆ ಚೀನಾ ಹೇಳಿರುವುದು ಏನು ಗೊತ್ತಾ?
ಚೀನಾ ಮತ್ತು ಪಾಕಿಸ್ತಾನ ನಡುವೆ ಗಟ್ಟಿಯಾದ ಸ್ನೇಹ ಇದ್ದು, ಪಾಕಿಸ್ತಾನ ನೆಲವನ್ನು ಚೀನಾ ದೇಶ ತನಗೆ ಅಗತ್ಯ ಇರುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ಅದರಲ್ಲೂ ಚೀನಾ ಮತ್ತು ಪಾಕಿಸ್ತಾನ ಸಂಬಂಧ ಕಳೆದ 20 ವರ್ಷದಲ್ಲಿ ಮತ್ತಷ್ಟು ಗಟ್ಟಿ ಆಗುತ್ತಿದೆ. ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಚೀನಾ ಕೂಡ ಬೆಂಬಲ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಹೀಗಿದ್ದಾಗ ದಿಢೀರ್ ಪಾಕ್ ರಾಜಧಾನಿ ಇಸ್ಲಾಮಾಬಾದ್ ನಗರದಲ್ಲಿ ಘೋರ ಸ್ಫೋಟ ಸಂಭವಿಸಿ ನೂರಾರು ಜನ ಗಾಯಗೊಂಡು ಸುಮಾರು 35ಕ್ಕೂ ಹೆಚ್ಚು ಜನರು ಜೀವ ಬಿಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ಚೀನಾ ಇದೀಗ ಪ್ರತಿಕ್ರಿಯೆ ನೀಡಿದೆ.

ಉಗ್ರರಿಗೆ ಹೆದರುತ್ತಿರುವ ಪಾಕಿಸ್ತಾನ ಪ್ರಜೆಗಳು
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರದಲ್ಲಿ 2 ದಿನಗಳ ಹಿಂದೆ ಮಸೀದಿ ಒಂದರ ಮೇಲೆ ಉಗ್ರರ ದಾಳಿ ನಡೆದಿತ್ತು. ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ್ದ ದಾಳಿಯಲ್ಲಿ 35ಕ್ಕೂ ಹೆಚ್ಚು ಜನರು ಜೀವ ಬಿಟ್ಟು, 150ಕ್ಕೂ ಹೆಚ್ಚು ಜನರು ಗಾಯಗೊಂಡು ನರಳುತ್ತಿದ್ದಾರೆ. ಈ ಘಟನೆ ಬೆನ್ನಲ್ಲೇ ಪಾಕಿಸ್ತಾನದ ಸರ್ಕಾರ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಿದೆ. ಮತ್ತೊಂದು ಕಡೆ ಪಾಕಿಸ್ತಾನದ ಜನರು ಹೊರಗೆ ಬರಲು ಕೂಡ ಹೆದರುವ ವಾತಾವರಣ ನಿರ್ಮಾಣ ಆಗಿದೆ. ಇಷ್ಟಾದರೂ ಉಗ್ರರ ಬಿಡಾರಗಳನ್ನು ಪಾಕ್ ಸರ್ಕಾರ ಉಡಾಯಿಸಲು ಹಿಂದೆ ಮುಂದೆ ಯೋಚನೆ ಮಾಡುತ್ತಿದೆ.
ಚೀನಾ ಕಡೆಯಿಂದ ಬೆಂಬಲದ ಮಾತು
ಈಗ ಉಗ್ರರಿಗೆ ಹೆದರಿ ಮನೆಯಲ್ಲೇ ಕೂರುವ ಸ್ಥಿತಿ ಇದೆ. ಹೀಗಿದ್ದಾಗ ಇಸ್ಲಾಮಾಬಾದ್ ಬಾಂಬ್ ದಾಳಿ ವಿಚಾರದಲ್ಲಿ ಭಾರತದ ವಿರುದ್ಧ ದೂರನ್ನು ಹೇಳಲು ಮುಂದಾಗಿದ್ದ ಪಾಪಿ ಪಾಕಿಸ್ತಾನದ ರಾಜಕೀಯ ನಾಯಕರಿಗೆ ಈಗಾಗಲೇ ಭಾರತವು ಖಡಕ್ ಆಗಿ ಉತ್ತರ ಕೊಟ್ಟಿದೆ. ಮೊದಲು ನಿಮ್ಮ ಮನೆಯ ಹುಳುಕು ಸರಿ ಮಾಡಿಕೊಳ್ಳಿ ಎಂದಿದೆ. ಮತ್ತೊಂದು ಕಡೆ ಚೀನಾ ಇದೀಗ ಬಾಂಬ್ ಸ್ಫೋಟವಾದ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ. ಈ ದಾಳಿಯನ್ನ ಚೀನಾ ಬಲವಾಗಿ ಖಂಡಿಸುತ್ತೆ, ಯಾವುದೇ ರೀತಿ ಉಗ್ರವಾದವನ್ನ ವಿರೋಧಿಸುತ್ತೇವೆ ಹಾಗೂ ಇಂತಹ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರವನ್ನ ದೃಢವಾಗಿ ಬೆಂಬಲಿಸುತ್ತೇವೆ ಎಂದಿದೆ ಚೀನಾ.












Click it and Unblock the Notifications