ಇರಾನ್-ಇಸ್ರೇಲ್ ಸಮರ: ಸಣ್ಣ ದೇಶವಾದರೂ ಸೇನಾ ಬಲದಲ್ಲಿ ಇಸ್ರೇಲ್ ಅಧಿಪತಿ: ಹೇಗಿದೆ ಗೊತ್ತಾ ಐಡಿಎಫ್ ಶಕ್ತಿ
Iran-Israel War: ಮಧ್ಯಪ್ರಾಚ್ಯದ ಪ್ರಮುಖವಾಗಿರುವ ಇಸ್ರೇಲ್‌ನ ರಕ್ಷಣಾ ಪಡೆಗಳು ಇರಾನ್ ದೇಶದ ಪ್ರಮುಖ ಪದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ತನ್ನ ಮೇಲೆ ಇರಾನ್ ದಾಳಿಗೆ ಸಜ್ಜಾಗಿದೆ ಎಂಬ ಗುಪ್ತಚರ ಮೂಲಗಳಿಂದ ಅರಿತ ಇಸ್ರೇಲ್ ಇರಾನ್‌ನ ರಾಜಧಾನಿ ಟೆಹರಾನ್ ಮೇಲೆ ದಾಳಿ ನಡೆಸಿದ್ದಾಗಿ ವರದಿ ಆಗಿದೆ. ಹಾಗಾದರೆ ಇಸ್ರೇಲಿನ ಮಿಲಿಟರಿ, ವಾಯು, ಸೇನಾ ಬಲ ಎಷ್ಟಿದೆ? ಏನೆಲ್ಲ ಅತ್ಯಾಧುನಿಕ ಯುದ್ಧ ಸಾಮರ್ಥ್ಯವನ್ನು ಹೊಂದಿದೆ ಎಂಬ ಮಾಹಿತಿ ಇಲ್ಲಿದೆ.
ಇಸ್ರೇಲ್ ಭೌಗೋಳಿಕವಾಗಿ ಒಂದು ಸಣ್ಣ ದೇಶ. ಇದು ಅಮೆರಿಕದ ನ್ಯೂಜೆರ್ಸಿ ರಾಜ್ಯದ ಗಾತ್ರಕ್ಕೆ ಸಮನಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಮಾತಿನಂತೆ ಅತ್ಯಂತ ಪ್ರಬಲ ಸೇನಾಬಲವನ್ನು ಇಸ್ರೇಲ್ ಹೊಂದಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಮಧ್ಯ ಪ್ರಾಚ್ಯದಲ್ಲಿ ಪ್ರಮುಖ ಮಿಲಿಟರಿ ಶಕ್ತಿಯಾಗಿ ಗುರುತಿಸಿಕೊಂಡಿವೆ. ಆ ಮೂಲಕ ಇಸ್ರೇಲ್ ವಿಶ್ವದ 15-20 ದೇಶಗಳಲ್ಲಿ ಪ್ರಮುಖ ಸ್ಥಾನವನ್ನೂ ಪಡೆದಿದೆ.

ಇಸ್ರೇಲ್‌ನಲ್ಲಿ ಸರಿ ಸುಮಾರು 170,000 ಸಕ್ರಿಯ ಸಿಬ್ಬಂದಿ ಇದೆ. 4,00,000 ರಿಂದ 4,65,000 ಮೀಸಲು ಪಡೆಗಳಿವೆ. 600 ಕ್ಕೂ ಹೆಚ್ಚು ಯುದ್ಧಗಳ ವಿಮಾನಗಳಿದ್ದು, ಅದರಲ್ಲಿ ಎಫ್-35 ಗಳಂತಹ ಅತ್ಯಾಧುನಿಕ ವಿಮಾನಗಳು ಇರುವುದು ವಿಶೇಷ. ಅತ್ಯಂತ ಉತ್ತಮ ವಾಯುಪಡೆ ಹೊಂದಿದೆ. ಸುಧಾರಿತ ಗುಪ್ತಚರ ವ್ಯವಸ್ಥೆ ಹೊಂದಿದೆ. ಗುಪ್ತಚರ ನೀಡಿದ ಮಾಹಿತಿ ಮೇಲೆಯೇ ಇದೀಗ ಇರಾನ್ ಮೇಲೆ ದಾಳಿ ನಡೆಸಿದೆ. ಅಘೋಷಿತ ಪರಮಾಣು ನಿರೋಧಕವನ್ನು ಒಳಗೊಂಡಂತೆ ಮುಂದುವರಿದ, ತಂತ್ರಜ್ಞಾನ ಸಹಿತ ಉತ್ತಮ ಸೇನಾ ಸಾಮರ್ಥ್ಯವನ್ನು ಹೊಂದಿದೆ.
ಮೀಸಲು ಪಡೆಗಳ ದೊಡ್ಡ ಬಲ, ಎಫ್ 35 ಫೈಟರ್‌ಜೆಟ್
ತುರ್ತು ಸಂದರ್ಭಗಳಲ್ಲಿ ಸೇನಾ ಸಿಬ್ಬಂದಿಯನ್ನು ತ್ವರಿತವಾಗಿ ಸಜ್ಜುಗೊಳಿಸುವ ಜಾಣ್ಮೆ ಇಸ್ರೇಲ್‌ಗಿದೆ. 6,00,000 ಕ್ಕೂ ಅಧಿಕ ಸಕ್ರಿಯ ಮತ್ತು ಮೀಸಲು ಪಡೆಗಳ ದೊಡ್ಡ ಪಡೆ ಅಲ್ಲಿದೆ. ವಿಶೇಷವಾಗಿ ಎಫ್ 35 ಫೈಟರ್ ಜೆಟ್‌ಗಳು ಯುಎಸ್ ಮೂಲದವು. ಇವುಗಳು ಸೇರಿದಂತೆ ಸುಧಾರಿತ ಹೆಲಿಕಾಪ್ಟರ್‌ಗಳನ್ನು ಹೊಂದಿರುವ ಈ ಸಣ್ಣ ಇಸ್ರೇಲ್ ದೇಶದ ಯುದ್ಧ ವಿಮಾನಗಳ ಸಂಖ್ಯೆ 594ರ ಗಡಿ ದಾಟುತ್ತದೆ.
ಮಾತ್ರವಲ್ಲದೇ ಆಧುನಿಕ ಯುದ್ಧ ಟ್ಯಾಂಕ್‌ಗಳು (ಮರ್ಕಾವಾ), 3600 ಕ್ಕೂ ಹೆಚ್ಚು ಶಸ್ತ್ರಸಜ್ಜಿತ ವಾಹನಗಳು, ಅತ್ಯಂತ ಬಲವಾದ ಫಿರಂಗಿಗಳನ್ನು ಇಸ್ರೇಲ್ ಹೊಂದಿದೆ. ರಕ್ಷಣಾ ವ್ಯವಸ್ಥೆ ನೋಡುವುದಾದರೆ, ಎದುರಾಳಿ ದೇಶಗಳು ದಾಳಿ ನಡೆಸಿದರೆ ಅದನ್ನು ತಡೆಯಲು ವಿವಿಧ ಕ್ಷಿಪಣಿ ಪ್ರತಿಬಂಧಕಗಳು, ಐರನ್ ಡೋಮ್ ಡೇವಿಡ್‌ನ ಸ್ಲಿಂಗ್ ಹಾಗೂ ಇನ್ನಿತರ ದಾಳಿ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಈ ಮೂಲಕ ದಾಳಿ ಮಾಡುವುದಲ್ಲದೇ, ಎದುರಾಳಿ ಎದುರಿಸುವ ಶಕ್ತಿಯನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಇದೆ.
ಪರಮಾಣು ಶಸ್ತ್ರಾಗಾರ, ಜೆರಿಕೊ-3 ಕ್ಷಿಪಣಿಗಳು, ರಕ್ಷಣಾ ವ್ಯವಸ್ಥೆಗೆ ಒತ್ತು
ಆಧುನಿಕ ಡಾಲ್ಫಿನ್ ವಿಧದ ಜಲಾಂತರ್ಗಾಮಿ ನೌಕೆಗಳು ಇಸ್ರೇಲ್ ನೆಲದಲ್ಲಿವೆ. ಜೆರಿಕೊ-3 ಕ್ಷಿಪಣಿಗಳನ್ನು ಒಳಗೊಂಡಂತೆ ಪರಮಾಣು ಶಸ್ತ್ರಾಗಾರವನ್ನು ಇಸ್ರೇಲ್ ನಿರ್ವಹಿಸುತ್ತದೆ ಎಂದು ವರದಿಗಳು ಹೇಳುತ್ತವೆ. ಪ್ರತಿ ವರ್ಷ ಬಿಲಿಯನ್ ನಷ್ಟು ವಾರ್ಷಿಕ ಬಜೆಟ್ ಅನ್ನು ದೇಶೀಯ ರಕ್ಷಣಾ ಉದ್ಯಮ ಇಸ್ರೇಲ್ ಹಂಚಿಕೆ ಮಾಡುತ್ತದೆ. ಸುಧಾರಿತ ಡ್ರೋನ್‌ಗಳು, ಸೈಬರ್ ಸಾಮರ್ಥ್ಯಗಳು ಮತ್ತು ಎಐ- ಚಾಲಿತ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳುತ್ತಿದೆ. ಈ ಮೂಲಕ ರಕ್ಷಣಾ ವ್ಯವಸ್ಥೆಗೆ ಇಸ್ರೇಲ್ ಹೆಚ್ಚಿನ ಆದ್ಯತೆ ನೀಡುತ್ತಿದೆ ಎನ್ನಬಹುದು.
ಇದರೊಂದಿಗೆ ಅಮೆರಿಕ ಜೊತೆಗೆ ಇಸ್ರೇಲ್ ಉತ್ತಮ ಸಂಬಂಧ ಹೊಂದಿದೆ. ರಕ್ಷಣೆ ವಿಷಯದಲ್ಲಿ ಯುದ್ಧ ವಿಮಾನ ಹಾಗೂ ಇನ್ನಿತರ ವ್ಯವಹಾರಿಕ ಪಾಲುದಾರಿಕೆಯನ್ನು ಹೊಂದಿದೆ. ಇದಕ್ಕೆ ಪೂರಕವೆಂಬಂತೆ ಇಸ್ರೇಲ್ ಇರಾನ್ ಮೇಲೆ ಯುದ್ಧ ಸಾರಿದ ಬೆನ್ನಲ್ಲೆ ಇರಾನ್ ಪ್ರತಿದಾಳಿಗೆ ಮುಂದಾಗಿದೆ. ಇತ್ತೀಚೆಗೆ ಇರಾನ್ ಮೇಲೆ ಯುದ್ಧಕ್ಕೆ ಸಜ್ಜಾಗಿದ್ದ ಅಮೆರಿಕ ಇದೇ ವೇಳೆ ಇರಾನ್ ಮೇಲೆ ಯುದ್ಧ ನಡೆಸುವುದಾಗಿ ಘೋಷಿಸಿದೆ. ಈ ಮೂಲಕ ಇಸ್ರೇಲ್ ಬೆಂಬಲಕ್ಕೆ ನಿಂತಿದೆ ಎನ್ನಬಹುದು.












Click it and Unblock the Notifications