ಇಂಟರ್ನೆಟ್ ಸೆನ್ಸೇಷನ್ ಕಿಲಿ ಪೌಲ್ ಮೇಲೆ ಮಾರಣಾಂತಿಕ ದಾಳಿ

ತಾಂಜೇನಿಯಾದ ಸಾಮಾಜಿಕ ಮಾಧ್ಯಮದ ತಾರೆ ಕಿಲಿ ಪೌಲ್ ಮೇಲೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆದಿದೆ. ಅವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಲಾಗಿದೆ. ಆದರೆ, ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ಬಗ್ಗೆ ಕಿಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಇದರೊಂದಿಗೆ ಅವರು ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗಾಯಗೊಂಡಿರುವುದು ಕಂಡುಬಂದಿದೆ.

ಕಿಲಿ ಪೌಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಮೇಲಿನ ದಾಳಿಯ ಬಗ್ಗೆ ಬರೆದಿದ್ದಾರೆ. 'ನನ್ನ ಮೇಲೆ 5 ಜನರು ದಾಳಿ ಮಾಡಿದರು. ನನ್ನ ಬಲಗೈಯ ಬೆರಳಿಗೆ ಚಾಕು ತಗುಲಿ ಗಾಯವಾಗಿದೆ ಮತ್ತು 5 ಹೊಲಿಗೆ ಹಾಕಲಾಗಿದೆ. ಇದಲ್ಲದೇ ನನಗೆ ದೊಣ್ಣೆಗಳಿಂದ ಥಳಿಸಲಾಗಿದೆ. ಆದರೂ ದೇವರನ್ನು ನೆನೆದು ಇಬ್ಬರನ್ನು ಹೊಡೆದು ನನ್ನನ್ನು ರಕ್ಷಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದೇನೆ. ನನಗಾಗಿ ಪ್ರಾರ್ಥಿಸಿ' ಎಂದು ಈ ಘಟನೆಯ ಬಗ್ಗೆ ಏಪ್ರಿಲ್ 29 ರಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಾಂಜೇನಿಯಾದ ಸಾಮಾಜಿಕ ಮಾಧ್ಯಮದ ಕಿಲಿ ಪೌಲ್ ಮತ್ತು ಆತನ ಸಹೋದರಿಯನ್ನು ಹೊಗಳಿದ್ದರು. ಕಿಲಿ ಪೌಲ್ ಮತ್ತು ಆತನ ಸಹೋದರಿ ನೀಮಾ ಪೌಲ್ ಅವರ ಲಿಪ್ ಸಿಂಕ್ ಮಾಡುವ ಕಲೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಇಬ್ಬರಿಗೂ ಭಾರತೀಯ ಸಂಗೀತದ ಬಗ್ಗೆ ಒಲವು, ಕ್ರೇಜ್ ಇದೆ ಮತ್ತು ಅದಕ್ಕಾಗಿಯೇ ಅವರು ಸಾಕಷ್ಟು ಜನಪ್ರಿಯರಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದರು. ಪ್ರಧಾನಿಯವರ ಈ ಹೊಗಳಿಕೆಯ ನಂತರ, ಇಬ್ಬರ ಜನಪ್ರಿಯತೆ ಬಹಳ ವೇಗವಾಗಿ ಹೆಚ್ಚಾಯಿತು.

Internet Sensation Kili Paul attacked with knife, beaten with sticks

ಭಾರತದಲ್ಲಿ ಜನಪ್ರಿಯರಾದ ಕಿಲಿ ಪೌಲ್

ಕಿಲಿ ಪೌಲ್ ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ 36 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಅವರ ಜನಪ್ರಿಯತೆಗೆ ಕಾರಣ ಬಾಲಿವುಡ್ ಹಾಡುಗಳಲ್ಲಿನ ಲಿಪ್ ಸಿಂಕ್ ಕಾರಣ. ಕಿಲಿ ಪೌಲ್ ಮತ್ತು ನೀಮಾ ಪೌಲ್ ಇಬ್ಬರೂ ಒಡಹುಟ್ಟಿದವರು. ಇವರಿಬ್ಬರೂ ಬಾಲಿವುಡ್ ಹಾಡುಗಳು ಮತ್ತು ಡೈಲಾಗ್‌ಗಳನ್ನು ಲಿಪ್ ಸಿಂಕ್ ಮಾಡುವ ಮೂಲಕ ಭಾರತೀಯರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.ಅಷ್ಟೇ ಅಲ್ಲ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳೂ ಕೂಡ ಕಿಲಿ ಪೌಲ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಾರೆ. ಕಿಲಿ ಪೌಲ್ ಅವರನ್ನು ಸಂದರ್ಶನವೊಂದರಲ್ಲಿ ನೀವು ಬಾಲಿವುಡ್ ಹಾಡುಗಳಲ್ಲಿ ಹೇಗೆ ಲಿಪ್ ಸಿಂಕ್ ಮಾಡುತ್ತೀರಿ ಎಂದು ಕೇಳಿದಾಗ, ಆಗ ಕಿಲಿ ಪೌಲ್ ನೀವು ಏನನ್ನಾದರೂ ಪ್ರೀತಿಸಿದರೆ ಅದು ನಮಗೇ ಗೊತ್ತಿಲ್ಲದೇ ಸುಲಭವಾಗಿಬಿಡುತ್ತದೆ ಎಂದು ಅವರು ಹೇಳಿದ್ದರು. ಹೀಗೆ ಅವರು ಬಾಲಿವುಡ್ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರ ವಿಭಿನ್ನ ಕೌಶಲ್ಯಕ್ಕೆ ಸಾಕಷ್ಟು ಅಭಿಮಾನಿ ಬಳಗವೇ ಇದೆ.

ಮಾತ್ರವಲ್ಲದೇ ಇತ್ತೀಚೆಗಷ್ಟೇ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಹಾಗೂ ಭಾರತೀಯ ಚಲನಚಿತ್ರಗಳ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಲು Instagram ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧರಾಗಿರುವ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪೌಲ್ ಅವರನ್ನು ಭಾರತೀಯ ಹೈಕಮಿಷನ್ ಗೌರವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+