ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಾದಲ್ಲಿದೆ ಆರಂಕಿ ಸಂಬಳದ ಆಸಕ್ತಿಕರ ಕೆಲಸ, ಏನದು ಗೊತ್ತಾ?

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 3: ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಹೊಸ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಿದೆ. 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ಎಂಬುದು ಹುದ್ದೆಯ ಹೆಸರು. ಅನ್ಯಗ್ರಹ ಕಲ್ಮಶದಿಂದ ಭೂಮಿಯನ್ನು ರಕ್ಷಣೆ ಮಾಡುವುದು, ಜತೆಗೆ ಬೇರೆ ಗ್ರಹಗಳನ್ನು ಭೂಮಿಯಲ್ಲಿ ವಾಸಿಸುವವರಿಂದ ರಕ್ಷಿಸುವುದು ಆ ಅಧಿಕಾರಿಯ ಜವಾಬ್ದಾರಿಯಾಗುತ್ತದೆ.

ಕರ್ನಾಟಕದ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಹುದ್ದೆಗಳು ಖಾಲಿ ಇವೆಕರ್ನಾಟಕದ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಹುದ್ದೆಗಳು ಖಾಲಿ ಇವೆ

ಅಮೆರಿಕ ಸರಕಾರದ ಅಧಿಕೃತ ಉದ್ಯೋಗ ವೆಬ್ ಸೈಟ್ ನಲ್ಲಿ ಈ ಬಗ್ಗೆ ಜಾಹೀರಾತು ಕೂಡ ಪ್ರಕಟವಾಗಿದೆ. ಅಮೆರಿಕದ ವಾಸಿಗಳು ಇದಕ್ಕೆ ಅರ್ಜಿ ಹಾಕಿಕೊಳ್ಳಬಹುದು. ಆಗಸ್ಟ್ ಹದಿನಾಲ್ಕನೇ ತಾರೀಕು ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನವಾಗಿದೆ.

Interesting job offer from NASA

ಗ್ರಹದ ರಕ್ಷಣೆ ಅಂದರೆ ಜೈವಿಕ ಮತ್ತಿತರ ಕಲ್ಮಶಗಳಿಂದ ಭೂಮಿಗೆ ಯಾವುದೇ ತೊಂದರೆ ಆಗದಂತೆ ತಡೆಯುವುದು. ಅಂದಹಾಗೆ ಈ ಕೆಲಸಕ್ಕೆ ಆರಂಕಿಯ ಸಂಬಳ ನಿಗದಿ ಮಾಡಲಾಗಿದೆ. ವಾರ್ಷಿಕ 124,406ರಿಂದ 187,000 ಅಮೆರಿಕನ್ ಡಾಲರ್ ನಷ್ಟು ಸಂಬಳ ನಿಗದಿ ಮಾಡಲಾಗಿದೆ.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗೆ ಗೂಗಲ್ ನಿಂದ ಭರ್ಜರಿ ಆಫರ್ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗೆ ಗೂಗಲ್ ನಿಂದ ಭರ್ಜರಿ ಆಫರ್

ಭೂಮಿಯ ಹೊರ ಜಗತ್ತಿನಿಂದ ಎದುರಾಗಬಹುದಾದ ಕಲ್ಮಶ ತಡೆಯುವುದು ಅಥವಾ ಭೂಮಿಯನ್ನು ರಕ್ಷಿಸಿಕೊಳ್ಳುವುದು ಖಂಡಿತಾ ಸವಾಲಿನ ಕೆಲಸ. ಮೂರರಿಂದ ಐದು ವರ್ಷದ ಅವಧಿಗೆ ಈ ಕೆಲಸ ಮಾಡಬೇಕಾಗುತ್ತದೆ. ಅತಿ ಬುದ್ಧಿವಂತರ ಜತೆಗೆ ಸೇರಿ ಕೆಲಸ ನಿರ್ವಹಿಸಬೇಕಾಗುತ್ತದೆ.

English summary
Planetary Protection Officer -A new job offer from America NASA. Good salary for the job. Here is the job details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X