ಮತ ಎಣಿಕೆ ಮಾಡಿ ಸುಸ್ತಾಗಿ 270 ಜನರ ದುರ್ಮರಣ

ಜಕಾರ್ತಾ, ಏಪ್ರಿಲ್ 29: ಇಂಡೋನೇಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ನಂತರ ಮತ ಎಣಿಕೆ ಸಮಯದಲ್ಲಿ ಒತ್ತಡ ತಾಳಲಾರದೆ 270 ಕ್ಕೂ ಹೆಚ್ಚು ಜನ ಮೃತರಾದ ದುರಂತ ಸಂಭವಿಸಿದೆ.

ಬ್ಯಾಲೆಟ್ ಪೇಪರ್ ಗಳನ್ನು ನಿರಂತರವಾಗಿ ಸುದೀರ್ಘ ಗಂಟೆಗಳ ಕಾಲ ಕೈಯಲ್ಲೇ ಲೆಕ್ಕ ಮಾಡಿದ ಕಾರಣ ಒತ್ತಡ ಮತ್ತು ದಣಿವು ತಾಳಲಾರದೆ 270 ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿ ಅಸುನೀಗಿದ್ದು, ಇದೊಂದು ದಾರುಣ ಘಟನೆ ಎನ್ನಿಸಿದೆ.

ಏಪ್ರಿಲ್ 17 ರಂದು ಇಂಡೋನೇಷ್ಯಾದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಚುನಾವಣೆಗಳು ಒಂದೇ ಹಂತದಲ್ಲಿ ನಡೆದಿದ್ದವು. ವೆಚ್ಚ ಕಡಿತ ಮಾಡದುವ ಸಲುವಾಗಿ ಏಕಕಾಲದಲ್ಲಿ ಚುನಾವಣೆ ನಡೆಸಲಾಗಿತ್ತು. ಸುಮಾರು 260 ದಶಲಕ್ಷ ಜನರು ಮತದಾನ ಮಾಡಿದ್ದರು.

Indonesia: More than 270 people died after counting ballot paper by hand

ಸುಮಾರು 1,878 ಜನ ಅನಾರೋಗ್ಯದಿಂದ ಬಳಲುತತಿದ್ದು, ಇವರೆಲ್ಲರಿಗೂ ತುರ್ತು ಆರೋಗ್ಯ ಸೇವೆ ಒದಗಿಸುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಏಪ್ರಿಲ್ 17 ರಂದು ನಡೆದ ಚುನಾವಣೆಯ ಫಲಿತಾಂಶ ಮೇ 22 ರಂಡು ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+