ಇಂಡೋನೇಶ್ಯಾದ ಪೊಲೀಸ್ ಕಚೇರಿಯಲ್ಲಿ ಬಾಂಬ್ ದಾಳಿ: 7 ಮಂದಿ ಬಲಿ
ಸುರಬಯ(ಇಂಡೋನೇಶ್ಯಾ), ಮೇ 14: ಇಂಡೋನೇಶ್ಯಾದ ಸುರಬಯದ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಇಂದು(ಮೇ 14) ಬೆಳಿಗ್ಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತರಾಗಿದ್ದಾರೆಂದು ಇಂಡೋನೇಶ್ಯಾ ಮಾಧ್ಯಮಗಳು ವರದಿ ಮಾಡಿವೆ.
ದ್ವಿಚಕ್ರವಾಹನದಲ್ಲಿ ಬಂದ ಆತ್ಮಹತ್ಯಾ ಬಾಂಬರ್ ತನ್ನನ್ನೇ ತಾನು ಸ್ಫೋಟಿಸಿಕೊಂಡ ಪರಿಣಾಮ ಈ ಘಟನೆ ನಡೆದಿದ್ದು, 44 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಿಗ್ಗೆ 8.50 ರ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮೃತರಾದವರಲ್ಲಿ ಬಹುತೇಕ ಎಲ್ಲರೂ ಪೊಲೀಸ್ ಅಧಿಕಾರಿಗಳು ಎನ್ನಲಾಗಿದ್ದು ಹೆಚ ಹೆಚ್ಚಿ ತನಿಖೆ ನಡೆಯುತ್ತಿದೆ.

'ಇದೊಂದು ಹೇಡಿಗಳ ಕೃತ್ಯ. ಅವರಿಗೆ ಯಾವುದೇ ಘನತೆ ಎನ್ನುವುದಿಲ್ಲ. ಇಂಥ ಬರ್ಬರ ಹತ್ಯೆಗಳನ್ನು ನಾನು ಖಂಡಿಸುತ್ತೇನೆ. ಭಯೋತ್ಪಾದನೆಯ ದಮನಕ್ಕೆ ನಾವು ಬದ್ಧರಾಗಿದ್ದೇವೆ' ಎಂದು ಇಂಡೋನೇಶ್ಯಾ ಅಧ್ಯಕ್ಷ ಜೋಕೋ ವಿಡೊಡೊ ಹೇಳಿದ್ದಾರೆ.












Click it and Unblock the Notifications