ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷಿಯಾದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಏರಿಕೆ

|
Google Oneindia Kannada News

ಜಾವಾ, ಏಪ್ರಿಲ್ 12: ಜಾವಾ, ಬಾಲಿ ದ್ವೀಪಗಳಿಗೆ ಕಳೆದ ಎರಡು ದಿನಗಳಿಂದ ಭೂಕಂಪ ಅಪ್ಪಳಿಸುತ್ತಿದೆ. ರಿಕ್ಟರ್ ಮಾಪಕದಲ್ಲಿ 6.0 ರಿಂದ 6.1ರಂತೆ ಸತತವಾಗಿ ವಿವಿಧೆಡೆ ಭೂಕಂಪನದ ಅನುಭವಗಳಾಗುತ್ತಿವೆ. ಭೂಕಂಪದ ಹೊಡೆತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕಳೆದ ವಾರವಷ್ಟೇ ಪೂರ್ವ ಭಾಗದಲ್ಲಿ ಭಾರಿ ಮಳೆ, ಭೂ ಕುಸಿತ, ಪ್ರವಾಹಕ್ಕೆ ಸಿಲುಕಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಸಾವಿರಾರು ಮಂದಿ ಮನೆ ಇಲ್ಲದೆ ಬೀದಿಗೆ ಬಿದ್ದಿದ್ದರು. ಈ ವಾರಾಂತ್ಯದಲ್ಲಿ ಭೂಕಂಪದ ಹಾವಳಿಗೆ ದ್ವೀಪ ರಾಷ್ಟ್ರ ಬೆಚ್ಚಿದೆ.

ಭಾರಿ ಮಳೆ, ಭೂ ಕುಸಿತ, ಪ್ರವಾಹಕ್ಕೆ ಸಿಲುಕಿ 44 ಮಂದಿ ಸಾವು ಭಾರಿ ಮಳೆ, ಭೂ ಕುಸಿತ, ಪ್ರವಾಹಕ್ಕೆ ಸಿಲುಕಿ 44 ಮಂದಿ ಸಾವು

ಮೊದಲಿಗೆ ಜಾವಾದ ಪೂರ್ವ ಭಾಗದ ಮಲಾಂಗ್ ನಗರದಲ್ಲಿ ಕಂಪನವಾಗಿದ್ದು, ಮನೆ, ಶಾಲೆ, ಕಚೇರಿಗಳು ಧ್ವಂಸವಾಗಿವೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಸದ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಿಲ್ಲ, ಆದರೆ, ಸತತ ಹವಾಮಾನ ವೈಪರೀತ್ಯಕ್ಕೆ ಈಡಾಗಬೇಕಾಗುತ್ತದೆ ಎಂಬ ಸೂಚನೆ ನೀಡಲಾಗಿದೆ.

Indonesia: At Least 8 Killed, Over 30 Injured After 6.0 Earthquake Strikes Java, Bali

ಲುಮಾಜಾಂಗ್, ಮಲಾಂಗ್, ಬ್ಲಿಟಾರ್, ಝೆಂಬರ್, ಟ್ರೆಂಗಾಲೆಕ್ ಪ್ರಾಂತ್ಯಗಳಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಸುಮಾರು 1,189 ಮನೆಗಳು ಸಂಪೂರ್ಣ ನಾಶವಾಗಿವೆ, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು, ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಗತ್ಯ ಆಹಾರ, ಔಷಧಿ, ಉಪಚಾರ ನೆರವು ಒದಗಿಸಲಾಗಿದೆ. ಎಂದು ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ರಾದಿತ್ಯಾ ಜಾತಿ ಹೇಳಿದ್ದಾರೆ.

Indonesia: At Least 8 Killed, Over 30 Injured After 6.0 Earthquake Strikes Java, Bali

ಇತ್ತೀಚೆಗೆ ಪೂರ್ವ ನೂಸಾ ತೆಂಗ್ಗಾರ ಪ್ರಾಂತ್ಯದಲ್ಲಿ ಸಂಭವಿಸಿದ ಭೂ ಕುಸಿತ, ಪ್ರವಾಹದಿಂದ 167 ಮಂದಿ ಮೃತಪಟ್ಟಿದ್ದರೆ, 40 ಮಂದಿ ನಾಪತ್ತೆಯಾಗಿದ್ದಾರೆ.

English summary
At least eight people have been killed after an earthquake of 6.0 magnitude struck off the coast of Indonesia’s Java island and tourism hotspot Bali on April 10
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X