ಭಾರತೀಯರಿಗೆ ಸಿಗಲಿದೆ ಬಂಪರ್.. ಅಮೆರಿಕ ವೀಸಾ ವಿಚಾರದಲ್ಲಿ ಲಾಟರಿ!
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಹೀಗೆ ಚುನಾವಣೆಗೆ ಸಜ್ಜಾಗಿರುವ ಅಮೆರಿಕದಲ್ಲಿ ಭಾರತೀಯರಿಗೆ ವಿಶೇಷ ಬೆಂಬಲ ಕೂಡ ಸಿಗ್ತಿದೆ. ಅದರಲ್ಲೂ ಭಾರತೀಯರಿಗೆ ವೀಸಾ ವಿಚಾರದಲ್ಲಿ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಈಗ ಅಲ್ಲಿ ಅಂದ್ರೆ ಅಮೆರಿಕದಲ್ಲಿ ಜಾರಿಗೆ ತಂದಿರುವ ಹೊಸ ನಿಯಮ ಭಾರತೀರಿಗೆ ಭರ್ಜರಿ ಲಾಭವನ್ನ ನೀಡಲಿದೆ. ಹಾಗಾದ್ರೆ, ಹೊಸ ವೀಸಾ ನಿಯಮ ಭಾರತೀಯರಿಗೆ ಹೇಗೆ ಸಹಾಯಕ? ಭಾರತ ಮೂಲದವರು ಇದರ ಲಾಭ ಹೇಗೆ ಪಡೆಯಬಹುದು? ಬನ್ನಿ ತಿಳಿಯೋಣ.
ಅಮೆರಿಕದಲ್ಲಿ ಕೆಲಸ ಮಾಡಬೇಕು, ಅಮೆರಿಕಗೆ ಹೋಗಿ ಜೀವನ ಕಟ್ಟಿಕೊಳ್ಳಬೇಕು ಎಂಬುದು ಕೋಟಿ ಕೋಟಿ ಜನರ ಕನಸು. ಆದರೆ ಅಮೆರಿಕಗೆ ಹೋಗಿ ಬದುಕು ಕಟ್ಟಿಕೊಳ್ಳುವ ಕೆಲಸವು ಸುಲಭ ಏನಲ್ಲ. ಯಾಕಂದ್ರೆ ಅಮೆರಿಕದಲ್ಲಿ ಹೋಗಿ ನೆಲೆಸಲು ಸಾಕಷ್ಟು ಸಮಸ್ಯೆ ಎದುರಿಸಿ & ಕಷ್ಟಪಟ್ಟು ಮುಂದೆ ನುಗ್ಗಬೇಕಿದೆ. ಹೀಗಿದ್ದರೂ ಅಮೆರಿಕದ ಕನಸು ಕಾಣುವ ಭಾರತೀಯರ ಸಂಖ್ಯೆ ಕಡಿಮೆ ಆಗಿಲ್ಲ. ಹಾಗೇ ಅಮೆರಿಕದ ಅಭಿವೃದ್ಧಿಯಲ್ಲಿ ಭಾರತೀಯರ ಶ್ರಮವು ಕೂಡ ಹೆಚ್ಚಾಗಿದೆ. ಇಂತಹ ಸಮಯದಲ್ಲೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಭಾರತೀಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ!

2.5 ಲಕ್ಷ ಭಾರತೀಯರಿಗೆ ಹೆಚ್ಚುವರಿ ವೀಸಾ?
ಅಂದಹಾಗೆ ಇದೀಗ ಭಾರತ ಮೂಲದ ಟೂರಿಸ್ಟ್, ಪರಿಣತಿ ಪಡೆದಿರುವ ಕೆಲಸಗಾರರು ಮತ್ತು ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಭಾರತೀಯರಿಗೆ ಅಮೆರಿಕವು ಹೆಚ್ಚುವರಿಯಾಗಿ ವೀಸಾ ನೀಡಲು ಮುಂದೆ ಬಂದಿದ್ದು, 2.5 ಲಕ್ಷ ಭಾರತೀಯರಿಗೆ ಹೆಚ್ಚುವರಿ ವೀಸಾ ವ್ಯವಸ್ಥೆ ಮಾಡಲು ಈಗ ಅಮೆರಿಕದ ಅಧಿಕಾರಿಗಳು ಮುಂದಾಗಿದ್ದಾರೆ. ಹಾಗೇ ಅಮೆರಿಕದಿಂದ ಇತ್ತೀಚೆಗೆ ರಿಲೀಸ್ ಮಾಡಿದ್ದ ವೀಸಾ ವಿತರಣೆಯ ಹೊಸ ಸ್ಲಾಟ್‌ಗಳು ಭಾರತೀಯರಿಗೆ ಪೂರಕವಾಗಿ ಇದೆ.
ಬೈಡನ್ ಜೊತೆ ಚರ್ಚಿಸಿದ್ದ ಪ್ರಧಾನಿ ಮೋದಿ
ಭಾರತೀಯ ಅರ್ಜಿದಾರರು ಸುಲಭವಾಗಿ ಸಂದರ್ಶನಕ್ಕೆ ಹಾಜರಾಗಲು ಇದೀಗ ಸಾಧ್ಯವಾಗಲಿದೆ. ಈ ಮೂಲಕ ಭಾರತ & ಅಮೆರಿಕ ನಡುವಿನ ಬಾಂಧವ್ಯ ವೃದ್ಧಿಗೆ ಕೂಡ ಈ ಕ್ರಮ ಬೆಂಬಲ ನೀಡಲಿದೆ ಎಂಬ ಅಭಿಪ್ರಾಯವನ್ನ ಅಮೆರಿಕ ರಾಯಭಾರ ಕಚೇರಿ ವ್ಯಕ್ತಪಡಿಸಿದೆ. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಜೊತೆ ಚರ್ಚೆ ನಡೆಸಿದ್ದರು. ಎರಡೂ ದೇಶಗಳ ನಡುವೆ ವೀಸಾ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲು ಅಗತ್ಯ ಕ್ರಮ ಕೈಗೊಳ್ಳಲು ಚರ್ಚೆ ನಡೆಸಿದ್ದರು. ಇದೀಗ ಚರ್ಚೆಯು ಕೂಡ ಫಲ ನೀಡಿದಂತೆ ಕಾಣುತ್ತಿದ್ದು, ಮತ್ತೊಂದು ಕಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲೇ ಹೀಗೆಲ್ಲ ಮಹತ್ವದ ನಿರ್ಧಾರ ಕೈಗೊಂಡಿರುವುದು ಗಮನ ಸೆಳೆದಿದೆ.












Click it and Unblock the Notifications