• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಪಿಎನ್ ಬ್ಲಾಕ್ : ಭಾರತದ ವೆಬ್ಸೈಟ್ ಚೀನಾದಲ್ಲಿ ಓಪನ್ ಆಗಲ್ಲ

|
Google Oneindia Kannada News

ಬೀಜಿಂಗ್, ಜೂನ್ 30: ಚೀನಾದ 59 ಆಪ್ ಗಳ ಮೇಲೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ, ಭಾರತದ ವೆಬ್ಸೈಟ್ ಅನ್ನು ಚೀನಾದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ, ವಿಪಿಎನ್ (ವರ್ಚುಯಲ್ ಪ್ರೈವೇಟ್ ನೆಟ್ವರ್ಕ್) ಅನ್ನು ಬ್ಲಾಕ್ ಮಾಡಿದೆ.

   Siddaramaiah questioned to CM BSY |ಸರಕಾರದ ಮುಂದೆ ಸಿದ್ದರಾಮಯ್ಯ ಇಟ್ಟ ಹೊಸ ಡಿಮಾಂಡ್ | Oneindia Kannada

   ಆಪ್ ನಿಷೇಧ ಹೇರುವ ಭಾರತ ಸರಕಾರದ ನಿರ್ಧಾರಕ್ಕೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಚೀನಾ, "ಮುಂದಿನ ದಿನಗಳಲ್ಲಿ ಭಾರತ ತನ್ನ ನಿರ್ಧಾರವನ್ನು ಮರುಪರಿಶೀಲಿಸುತ್ತದೆ ಎನ್ನುವ ವಿಶ್ವಾಸವನ್ನು ನಾವು ಇಟ್ಟುಕೊಂಡಿದ್ದೇವೆ" ಎನ್ನುವ ಹೇಳಿಕೆಯನ್ನೇನೋ ನೀಡಿದೆ.

   ಗಾಲ್ವಾನ್ ಸಂಘರ್ಷ: ಚೀನಾ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿಗಾಲ್ವಾನ್ ಸಂಘರ್ಷ: ಚೀನಾ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ

   ವಿಪಿಎನ್ ಬ್ಲಾಕ್ ಮಾಡಿರುವುದರಿಂದ, ಭಾರತೀಯ ಆನ್ಲೈನ್ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳನ್ನು ಚೀನಾದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ಟಿವಿ ವಾಹಿನಿಗಳನ್ನು, ಈಗಿನಂತೆ ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿದೆ.

   ಆದಾಗ್ಯೂ, ಎಕ್ಸ್‌ಪ್ರೆಸ್‌ ವಿಪಿಎನ್ ಕಳೆದ ಎರಡು ದಿನಗಳಿಂದ ಐಫೋನ್ ಮತ್ತು ಡೆಸ್ಕ್‌ ಟಾಪ್‌ಗಳಲ್ಲಿ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಚೀನಾ ತಾಂತ್ರಿಕವಾಗಿ ಸುಧಾರಿತ ಫೈರ್‌ ವಾಲ್ ಅನ್ನು ರಚಿಸಿದ್ದು ಅದು ವಿಪಿಎನ್‌ ಗಳನ್ನು ಸಹ ನಿರ್ಬಂಧಿಸುತ್ತದೆ.

   ಲಡಾಖ್ ಗಡಿ ಸಮಸ್ಯೆ ಉಲ್ಬಣಗೊಂಡ ನಂತರ, ವೆಬ್‌ಸೈಟ್‌ಗಳನ್ನು ನಿರ್ಬಂಧಿಸುತ್ತಿರುವುದು ತಾಜಾ ಬೆಳವಣಿಗೆಯಾಗಿದೆ. ಭಾರತ, ಚೀನಾದ 59 ಆಪ್ ನಿಷೇಧಿಸಿದ ಕ್ರಮಕ್ಕೆ ತಿರುಗೇಟು ನೀಡಲು ವಿಪಿಎನ್ ಬ್ಲಾಕ್ ಮಾಡುವ ನಿರ್ಧಾರಕ್ಕೆ ಚೀನಾ ಬಂದಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

   ಜನಪ್ರಿಯ ಆಪ್ ಗಳಾದ ಟಿಕ್ ಟಾಕ್, ಯುಸಿ ಬ್ರೌಸರ್, ಶೇರ್ ಚಾಟ್, ವಿಚಾಟ್ ಸೇರಿದಂತೆ 59 ಆಪ್ ಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿತ್ತು.

   English summary
   Indian Websites Not Accessible In China As Xi Jinping Government Blocks VPN
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X