ಇಸ್ಲಾಂ ಕುರಿತು ಪ್ರಶ್ನಿಸಿ, ಭಾರತೀಯನ ಕೊಂದ ಉಗ್ರರು
ನೈರೋಬಿ, ಸೆ.23 : ಇಸ್ಲಾಂ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸದ ಕಾರಣ ಭಾರತೀಯರೊಬ್ಬರನ್ನು ಸೊಮಾಲಿಯಾದ ಶೆಬಾಬ್ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಉಗ್ರರ ವಶದಿಂದ ಪಾರಾಗಿ ಒಂದ ಜೋಶಾ ಹಕೀಮ್ ಎಂಬುದವವರು ಈ ಆ ಕರಾಳ ಘಟನೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.
ಶನಿವಾರ ಶೆಬಾಬ್ ಉಗ್ರಗಾಮಿಗಳು ಕೈಯಲ್ಲಿ ಎಕೆ 47 ಬಂದೂಕುಗಳನ್ನು ಹಿಡಿದು ಮಾಲ್ ನ ಎರಡನೇ ಮಹಡಿಯಲ್ಲಿ ಸಂಚರಿಸುತ್ತಾ, ಕಂಡಕಂಡವರ ಮೇಲೆ ಗುಂಡು ಹಾರಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ಹಕೀಮ್ ನೋಡಿದ್ದಾರೆ.

ದಾಳಿಯ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಉಗ್ರಗಾಮಿಗಳು ಮುಸ್ಲಿಂಮರು, ತಮ್ಮ ಗುರುತು ಹೇಳಿ ಹೊರನಡೆಯುವಂತೆ ಮನವಿ ಮಾಡಿದ್ದರು. ಮಾಲ್ ನಿಂದ ಹೊರಹೋಗುತ್ತಿದ್ದ ಜನರ ಹೆಸರು, ಗುರುತು ಕೇಳುತ್ತಾ ಉಗ್ರರು ನಿಂತಿದ್ದರು.
ಹಕೀಮ್ ಸರದಿ ಬಂದಾಗ ಉಗ್ರರು ಗುರುತಿಸ ಪತ್ರ ತೋರಿಸುವಂತೆ ಕೇಳಿದ್ದಾರೆ. ಹಕೀಮ್ ತಮ್ಮ ಬೆರಳಚ್ಚು ಇರುವ ಗುರುತಿನ ಚೀಟಿ ತೋರಿಸಿದ್ದಾರೆ. ಆಗ ಉಗ್ರರು ಹಕೀಮ್ ಅವರನ್ನು ಮಾಲ್ ನಿಂದ ಹೊರಹೋಗುವಂತೆ ಹೇಳಿದ್ದಾರೆ.
ಹಕೀಮ್ ಹಿಂಭಾಗದಲ್ಲಿ ಭಾರತೀಯರೊಬ್ಬರು ಬರುತ್ತಿದ್ದರು. ಅವರನ್ನು ತಡೆದ ಉಗ್ರರು ಮಹಮದ್ ತಾಯಿಯ ಹೆಸರೇನು? ಎಂದು ಕೇಳಿದ್ದಾರೆ. ಈ ಪ್ರಶ್ನಗೆ ಅವರು ಉತ್ತರಿಸಿಲ್ಲ. ತಕ್ಷಣ ಅವರನ್ನು ಕೊಂದು ಹಾಕಿದರು ಎಂದು ಹಕೀಮ್ ಮಾಧ್ಯಮಗಳಿಗೆ ಹೇಳಿದ್ದಾರೆ.
ನೈರೋಬಿ ಶಾಪಿಂಗ್ ಮಾಲ್ ನಲ್ಲಿನ ಉಗ್ರರ ಅಟ್ಟಹಾಸಕ್ಕೆ ಇದುವರೆಗೂ 68 ಜನರು ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ. ಸದ್ಯ ಉಗ್ರರ ಹಿಡಿತದಲ್ಲಿ 60ಕ್ಕೂ ಹೆಚ್ಚು ಜನರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೆಬಾಬ್ ಉಗ್ರಗಾಮಿಗಳ ಪರವಾಗಿ ಹೇಳಿಕೆ ನೀಡಿರುವ ಅಲಿ ಮೊಹಮ್ಮದ್ ರೇಜ್ ಎಂಬಾತ, "ನಮ್ಮ ಮೇಲೆ ಒತ್ತಡ ಹೆಚ್ಚಾದಷ್ಟೂ ಕಟ್ಟಡದ ಒಳಗೆ ಬಂಧಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಲು ಮುಜಾಹಿದ್ದೀನ್‌ಗಳಿಗೆ ನಾವು ಅಧಿಕಾರ ನೀಡುತ್ತೇವೆ" ಎಂದು ಹೇಳುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದ್ದಾರೆ.












Click it and Unblock the Notifications