ಗುಂಡೇಟಿಗೆ ಬಲಿಯಾದ ಭಾರತೀಯನ ಕುಟುಂಬಕ್ಕೆ ಸುಷ್ಮಾ ನೆರವು

Posted By:
Subscribe to Oneindia Kannada

ನವದೆಹಲಿ, ನವೆಂಬರ್ 13: ಅಮೆರಿಕದ ಉತ್ತರ‌ ಕರೋಲಿನಾದಲ್ಲಿ ದುಷ್ಕರ್ಮಿಯ ಗುಂಡೇಟಿಗೆ ಭಾರತ ಮೂಲದ ಹೋಟೆಲ್ ಮಾಲೀಕ ಮೃತಪಟ್ಟಿದ್ದಾರೆ. ಈ ಘಟನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

40 ವರ್ಷದ ಆಕಾಶ್ ಆರ್ ತಲಾಟಿ ಅವರು ಫಯೆಟ್ಟೆವಿಲ್ಲೆ ನಗರದ ನೈಟ್ಸ್ ಇನ್ ಮತ್ತು ಡೈಮಂಡ್ಸ್ ಜೆಂಟಲ್ಮೆನ್ಸ್ ಕ್ಲಬ್ ಒಡೆತನ ಹೊಂದಿದ್ದರು.

Indian-origin man shot dead at North Carolina, Sushma Swaraj assures family of help

ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದಾಗ ಆಕಾಶ್ ಮೃತ ಪಟ್ಟಿದ್ದರು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಗುಜರಾತಿನ ಆನಂದ್ ಜಿಲ್ಲೆಯವರಾದ ಆಕಾಶ್ ತಲಾಟಿ ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶೂಟೌಟ್ ನಲ್ಲಿ ಗಾಯಗೊಂಡಿದ್ದ ನಾಲ್ವರ ಪೈಕಿ ಇಬ್ಬರು ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Akash Talati a motel owner of Indian origin was shot dead and four others injured in a shooting in the American state of North Carolina. Sushma Swaraj assures family of help

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ