ಭಾರತ ಮೂಲದ ಹಲೀಮತ್ ಈಗ ಸಿಂಗಾಪುರದ ರಾಷ್ಟ್ರಾಧ್ಯಕ್ಷೆ

Posted By:
Subscribe to Oneindia Kannada

ಸಿಂಗಾಪುರ, ಸೆಪ್ಟೆಂಬರ್ 12: ಸಿಂಗಾಪುರದ ಮಾಜಿ ಸ್ಪೀಕರ್, ಭಾರತ ಮೂಲದ ಹಲೀಮತ್ ಯಾಕೂಬ್ ಅವರು ಸಿಂಗಾಪುರದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ, ಸಿಂಗಾಪುರದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆಯೆಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

63 ವರ್ಷದ ಯಾಕೂಬ್ ಅವರು, ಇದೇ ಬುಧವಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆಂದು ಸಿಂಗಾಪುರ ಸರ್ಕಾರಿ ಮೂಲಗಳು ತಿಳಿಸಿವೆ. ಯಾಕೂಬ್ ಅವರ ತಂದೆ ಭಾರತ ಮೂಲದವರು. ಇವರ ತಾಯಿ ಸಿಂಗಾಪುರದ ಮಲಾಯ್ ಮುಸ್ಲಿಂ ಸಮುದಾಯಕ್ಕೆ ಸೇರಿದವರು.

Indian-Malay Halimah Yacob set to be Singapore's first female President

ಇವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮಲಾಯ್ ಸಮುದಾಯದ ಎರಡನೇ ವ್ಯಕ್ತಿಯೊಬ್ಬರು ಈ ಮಹತ್ತರ ಹುದ್ದೆಗೆ ಕಾಲಿಟ್ಟಂತಾಗಿದೆ. ಈ ಹಿಂದೆ, 1965 ಹಾಗೂ 1970ರಲ್ಲಿ ಮಲಾಯ್ ಸಮುದಾಯದ ಯೂಸುಫ್ ಇಶಾಕ್ ಅವರು ಸಿಂಗಾಪುರದ ಅಧ್ಯಕ್ಷರಾಗುವ ಮೂಲಕ ರಾಷ್ಟ್ರಪತಿ ಹುದ್ದೆಗೆ ಏರಿದ ಹಿಂದುಳಿದ ಸಮುದಾಯದ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಂಗಾಪುರ ಸಂಸತ್ತಿನಲ್ಲಿ ಅನೇಕ ವರ್ಷಗಳ ಕಾಲ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Halimah Yacob, born to an Indian Muslim father and a Malay mother, is all set to assume charge as the first female president of the country. The leader -- a former speaker of Parliament -- belongs to the nation's poorest ethnic minority.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ