ಜನಾಂಗೀಯ ದ್ವೇಷ: ಆಸ್ಟ್ರೇಲಿಯಾದಲ್ಲಿ ಭಾರತೀಯ ಚಾಲಕನ ಮೇಲೆ ಹಲ್ಲೆ

ಶುಕ್ರವಾರ ರಾತ್ರಿ 10: 30ರ ಸುಮಾರಿಗೆ ಕಾರನ್ನು ಬಾಡಿಗೆಗೆ ಪಡೆದ ದಂಪತಿ ತಾಸ್ಮೇನಿಯಾದಿಂದ ಅದರಲ್ಲಿ ಪ್ರಯಾಣ ಬೆಳೆಸಿದ ದಂಪತಿ, ಕಾರು ಚಲಿಸುತ್ತಿದ್ದಾಗ ಪದೇ ಪದೇ ಬಾಗಿಲು ತೆರೆಯುತ್ತಿದ್ದನ್ನು ಆಕ್ಷೇಪಿಸಿದ್ದಕ್ಕೆ ಭಾರತ ಮೂಲದ ಚಾಲಕನಿಗೆ ಥಳಿತ

ಸಿಡ್ನಿ, ಮೇ 22: ತೆರಳುತ್ತಿದ್ದ ಕಾರಿನ ಬಾಗಿಲನ್ನು ಪದೇ ಪದೇ ತೆರೆಯಬೇಡೆಂದು ಬಲವಾಗಿ ಆಗ್ರಹಿಸಿದ ಭಾರತೀಯ ಮೂಲದ ಕ್ಯಾಬ್ ಚಾಲಕನೊಬ್ಬನನ್ನು ಹಿಂಬದಿಯ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ, ಹಿಗ್ಗಾಮುಗ್ಗ ಥಳಿಸಿದ ಘಟನೆ ಆಸ್ಟ್ರೇಲಿಯಾದ ಮೆಕ್ ಡೊನಾಲ್ಡ್ ಡ್ರೈ ತ್ರೂ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಾರು ಚಾಲಕನ ವಿವರ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ 10: 30ರ ಸುಮಾರಿಗೆ ಕಾರನ್ನು ಬಾಡಿಗೆಗೆ ಪಡೆದ ದಂಪತಿ ತಾಸ್ಮೇನಿಯಾದಿಂದ ಅದರಲ್ಲಿ ಪ್ರಯಾಣ ಬೆಳೆಸಿದ್ದಾರೆ.[ಬೋಸ್ಟನ್ ನಲ್ಲಿ ಭಾರತೀಯನೊಬ್ಬ ನಾಪತ್ತೆ: ಜನಾಂಗೀಯ ದ್ವೇಷಕ್ಕೆ ಬಲಿ?]

Indian Cabbie Attacked In Australia

ಕಾರು ಮೆಕ್ ಡಾನಾಲ್ಡ್ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ತಮ್ಮಲ್ಲಿನ ಯಾವುದೇ ಪದಾರ್ಥವನ್ನು ಹೊರಗೆಸೆಯಲು ಪ್ರಯತ್ನಿಸಿದ ದಂಪತಿ ಪದೇ ಪದೇ ಕಾರಿನ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಅಕ್ಕಪಕ್ಕದಲ್ಲೇ ಇತರ ಕಾರುಗಳು ಅತಿ ವೇಗವಾಗಿ ಅದೇ ದಾರಿಯಲ್ಲಿ ಹೋಗುತ್ತಿದ್ದರಿಂದ ಚಾಲಕನು ಬಾಗಿಲನ್ನು ತೆರೆಯ ಕೂಡದೆಂದು ಸೂಚಿಸಿದ್ದಾನೆ.

ಚಾಲಕ ಮಾತನ್ನು ನಿರ್ಲಕ್ಷಿಸಿದ ದಂಪತಿ ಪದೇ ಪದೇ ಬಾಗಿಲು ತೆರೆಯುವುದನ್ನೇ ಮುಂದುವರಿಸಿದ್ದಾರೆ. ಇದರಿಂದ ಆತ ಕೊಂಚ ರೇಗಿದ್ದಾನೆ. ಅಷ್ಟಕ್ಕೇ ದಂಪತಿಗೂ ಹಾಗೂ ಚಾಲಕನ ನಡುವೆ ಜಗಳವಾಗಿದೆ. ತಕ್ಷಣವೇ ಕಾರು ನಿಲ್ಲಿಸಲು ಸೂಚಿಸಿದ ದಂಪತಿ ಕಾರಿನಿಂದ ಇಳಿದು ಆತನನ್ನೂ ಕೆಳಗಿಳಿಸಿ ಜಗಳವಾಡಿದ್ದಾರೆ.[ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಯುವಕನ ಬರ್ಬರ ಹತ್ಯೆ]

ಆಗ, ಗೃಹಿಣಿಯ ಬಳಿ ಚಾಲಕ ವಾದಕ್ಕಿಳಿದಿದ್ದಾಗ ಹಿಂದಿನಿಂದ ಹೊಡೆದ ಪತಿರಾಯ ಡ್ರೈವರ್ ನನ್ನು ಕೆಳಕ್ಕೆ ಕೆಡವಿಕೊಂಡು ಝಾಡಿಸಿ ಪದೇ ಪದೇ ಒದ್ದಿದ್ದಾನೆ. ಆತನ ದಾಳಿಗೆ ಕೈ ಪತ್ನಿಯೂ ಕೈ ಜೋಡಿಸಿದ್ದಾಳೆ. ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರೂ ಭಾರತೀಯರೇ ನೀವು ಇದಕ್ಕೇ (ಪೆಟ್ಟುಗಳಿಗೇ) ಲಾಯಕ್ಕು ಎಂದು ಬಡಿದಿದ್ದಾರೆ.

ಆಗ, ಚಾಲಕನ ಪರಿಸ್ಥಿತಿ ಗಮನಿಸಿದ ಕೆಲವರು ತಮ್ಮ ವಾಹನಗಳನ್ನು ನಿಲ್ಲಿಸಿ ಆಗಮಿಸಲು ಶುರು ಮಾಡಿದಾಗ ದಾಳಿ ಮಾಡಿದ ದಂಪತಿ ಪರಾರಿಯಾಗಿದ್ದಾರೆ.

ಇದೀಗ, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣವನ್ನು ಜನಾಂಗೀಯ ದ್ವೇಷದ ಪ್ರಕರಣವೆಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ, ಏತನ್ಮಧ್ಯೆ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಚಾಲಕ, ಮೆಕ್ ಡೊನಾಲ್ಡ್ ಹೆದ್ದಾರಿಯ ಸಿಸಿಟಿವಿ ಫೂಟೇಜ್ ಗಳನ್ನು ನೋಡಿದರೆ, ಆರೋಪಿಗಳ ಗುರುತು ಪತ್ತೆ ಹಚ್ಚಬಹುದು. ಆದರೆ, ಪೊಲೀಸರು ಈ ಕೆಲಸ ಮಾಡಿಲ್ಲ ಎಂದು ದೂರಿದ್ದಾನೆ.

ಆದರೆ, ಘಟನೆ ನಡೆದ ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಯೊಬ್ಬ ತಾನು ಸೆರೆ ಹಿಡಿದಿದ್ದ ದಾಳಿಯ ವಿಡಿಯೋವೊಂದನ್ನು ಪೊಲೀಸರಿಗೆ ನೀಡಲು ಮುಂದೆ ಬಂದಿದ್ದಾನೆ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+