'ಭಾರತದತ್ತ ಬೊಟ್ಟು'; ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣದ ಹಿಂದಿನ ಕೈ ಯಾವುದು?
ನವದೆಹಲಿ, ಜೂನ್ 16: 'ನೆರೆಯ ಡೊಮಿನಿಕಾ ಜೈಲಿನಿಂದ ಆಂಟಿಗುವಾ ಮತ್ತು ಬರ್ಬುದಾಗೆ ವಾಪಸ್ ಆಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಮತ್ತೊಮ್ಮೆ ಭಾರತೀಯ ಅಧಿಕಾರಿಗಳು ತಮ್ಮನ್ನು ಅಪಹರಿಸಿದ್ದರು ಎಂದ ಆರೋಪವನ್ನು ಮುಂದುವರಿಸಿದ್ದಾರೆ,' ಎಂದು ಎಎನ್ಐ ವರದಿ ಮಾಡಿದೆ.
ತೀವ್ರ ಅನಾರೋಗ್ಯದ ಹಿನ್ನೆಲೆ ಕೆರಿಬಿಯನ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಆಂಟಿಗುವಾ ಮತ್ತು ಬರ್ಬುದಾಗೆ ಗುರುವಾರ ಹಿಂತಿರುಗಿದ್ದಾರೆ.
ಹೀಗೆ ವಾಪಸ್ ಆಗಿರುವ ಚೋಕ್ಸಿ ಭಾರತೀಯ ಅಧಿಕಾರಿಗಳೇ ತಮ್ಮನ್ನು ಅಪಹರಿಸಿದ್ದರು ಎಂದ ಆರೋಪ ಮಾಡುತ್ತಿದ್ದಾರೆ. ಭಾರತದ ಕಾನೂನಾತ್ಮಕ ಸಂಸ್ಥೆಗಳ ಸಿಬ್ಬಂದಿಯ ನಡೆಯಿಂದ ನನ್ನಲ್ಲಿ ಭಯ ಎನ್ನುವುದು ಶಾಶ್ವತವಾಗಿ ನೆರೆಯೂರಿದೆ ಎಂದಿದ್ದಾರೆ.

ಮೆಹುಲ್ ಚೋಕ್ಸಿ ಹೇಳಿಕೆಯಲ್ಲಿ ಇರುವುದೇನು?
"ನಾನು ಮನೆಗೆ ಹಿಂತಿರುಗಿದ್ದೇನೆ, ಆದರೆ ಈ ಹಿಂದೆ ನೀಡಿರುವ ಚಿತ್ರಹಿಂಸೆಯು ನನ್ನನ್ನು ಮಾನಸಿಕ ಹಾಗೂ ದೈಹಿಕವಾಗಿ ಅಲ್ಲದೇ ಮನಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ನನ್ನ ಎಲ್ಲಾ ವ್ಯವಹಾರಗಳನ್ನು ಮುಚ್ಚಿ, ನನ್ನ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಂಡ ನಂತರವೂ ಭಾರತೀಯ ಏಜೆನ್ಸಿಗಳು ನನ್ನ ಮೇಲೆ ಅಪಹರಣ ಪ್ರಯತ್ನ ಮಾಡುತ್ತವೆ ಎಂದು ಊಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ," ಎಂದು ಚೋಕ್ಸಿ ಹೇಳಿದ್ದಾರೆ.

ಚೋಕ್ಸಿಗೆ ಕೋರ್ಟ್ ಷರತ್ತುಬದ್ಧ ಜಾಮೀನು
ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 51 ದಿನಗಳಿಂದ ಸೆರೆವಾಸದಲ್ಲಿದ್ದ ಮೆಹುಲ್ ಚೋಕ್ಸಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಜೊತೆ ಸಿಟಿ ಸ್ಕ್ಯಾನ್ ವರದಿ ಸೇರಿದಂತೆ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ವೈದ್ಯರಿಂದ ವೈದ್ಯಕೀಯ ಶಿಫಾರಸ್ಸು ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಹಿನ್ನೆಲೆ ಕಳೆದ ವಾರವಷ್ಟೇ ಕೆರಿಬಿಯನ್ ಕೋರ್ಟ್ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಜಾಮೀನು ಮಂಜೂರು ಮಾಡಿತ್ತು. ಆಂಟಿಗುವಾ ಮತ್ತು ಬರ್ಬುದಾದಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಅವಕಾಶ ನೀಡಿತ್ತು. 10,000 ಕೆರಿಬಿಯನ್ ಡಾಲರ್ ಬಾಂಡ್(2.7 ಲಕ್ಷ ರೂ.) ಸಲ್ಲಿಸುವುದು ಹಾಗೂ ಚಿಕಿತ್ಸೆ ನಂತರದಲ್ಲಿ ಡೊಮಿನಿಕಾಗೆ ವಾಪಸ್ ಆಗುವಂತೆ ಷರತ್ತು ವಿಧಿಸಲಾಗಿತ್ತು.

ಚೋಕ್ಸಿ ಪರ ವಕೀಲರಿಂದಲೂ ಅಪಹರಣ ಆರೋಪ
"ನಮ್ಮ ಕಕ್ಷಿದಾರ ಮೆಹುಲ್ ಚೋಕ್ಸಿ ಸುರಕ್ಷಿತವಾಗಿ ಆಂಟಿಗುವಾದ ತಮ್ಮ ನಿವಾಸಕ್ಕೆ ವಾಪಸ್ ಆಗಿದ್ದಾರೆ. ಆಂಟಿಗುವಾಗೆ ಹಿಂತಿರುಗುವ ವೇಳೆ ಯಾವುದೇ ಸಮಸ್ಯೆಗಳು ಆಗಲಿಲ್ಲ. ಚೋಕ್ಸಿ ಸದ್ಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ. ಆದರೆ ಅಪಹರಣಕ್ಕೊಳಗಾದ ಸಂದರ್ಭದಲ್ಲಿ ತೀವ್ರ ಚಿತ್ರಹಿಂಸೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ. ಎಲ್ಲವೂ ಸುಖಾಂತ್ಯ ಕಂಡಿದೆ. ಡೊಮಿನಿಕಾದಲ್ಲಿ ಯಶಸ್ಸಿನ ನಂತರ, ಈಗ ಆಂಟಿಗುವಾದಲ್ಲಿ ಕಾನೂನು ಹೋರಾಟಕ್ಕೆ ನಮ್ಮ ತಂಡವು ಸಜ್ಜಾಗಿದೆ," ಎಂದು ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.

ಡೊಮಿನಿಕಾಗೆ ಪ್ರೇಯಸಿ ಜೊತೆ ಚೋಕ್ಸಿ ಪ್ರಣಯ ಪ್ರವಾಸ?
ಭಾರತದಿಂದ ನಾಪತ್ತೆಯಾಗಿದ್ದ ಉದ್ಯಮಿ ಮೆಹುಲ್ ಚೋಕ್ಸಿ 2018ರಿಂದ ಆಂಟಿಗುವಾ ಮತ್ತು ಬರ್ಬುದಾದಲ್ಲಿ ವಾಸವಾಗಿದ್ದರು. ಕಳೆದ ಮೇ 23ರಂದು ಅಲ್ಲಿಂದ ನಾಪತ್ತೆಯಾಗಿದ್ದ ಚೋಕ್ಸಿ ತಮ್ಮ ಪ್ರೇಯಸಿ ಜೊತೆ ಡೊಮಿನಿಕಾಗೆ ಪ್ರಯಣ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಆದರೆ ಚೋಕ್ಸಿ ಪರ ವಕೀಲರು ಹೇಳುವುದೇ ಬೇರೆಯಾಗಿದೆ. ಕಳೆದ ಮೇ 23ರಂದು ರಾತ್ರಿ ವೇಳೆ ಆಂಟಿಗುವಾದ ಜಾಲಿ ಹಾರ್ಬರ್ ನಿಂದ ಭಾರತೀಯ ಮೂಲದ ಪುರುಷರು ಹಾಗೂ ಮಹಿಳೆ ಜಬಾರಿಕಾ ಸೇರಿದಂತೆ ನಾಲ್ವರು ಸೇರಿಕೊಂಡು ಮೆಹುಲ್ ಚೋಕ್ಸಿ ಅಪಹರಣ ಮಾಡಿದ್ದಾರೆ. "ಯುವತಿಯನ್ನು ಬಳಸಿಕೊಂಡು ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ವ್ಹೀಲ್ ಚೇರ್ ಹಾಗೂ ಬೋಟ್ ಮೂಲಕ ಅಂಟಿಗುವಾದಿಂದ ಡೊಮಿನಿಕಾಗೆ ಕರೆದುಕೊಂಡು ಹೋಗಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.

13,500 ಕೋಟಿ ರೂಪಾಯಿ ವಂಚಿಸಿರುವ ಚೋಕ್ಸಿ
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದರು.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications