ಗೆಳೆಯ ಇಸ್ರೇಲ್ ಪರ ಪರೋಕ್ಷವಾಗಿ ನಿಂತ ಭಾರತ? ಹಮಾಸ್ ಉಗ್ರರ ಬಗ್ಗೆ ಹೇಳಿದ್ದೇನು?
ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಜಗತ್ತಿನ ಶಕ್ತಿಶಾಲಿ ದೇಶಗಳು ಕೂಡ ಭಾರತದ ಬೆಂಬಲ ಪಡೆಯಲು ಪ್ರಯತ್ನ ಮಾಡುತ್ತವೆ. ಹೀಗಿದ್ದಾಗಲೇ ಇಸ್ರೇಲ್ VS ಹಮಾಸ್ ಉಗ್ರರ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ಬಗ್ಗೆ ಭಾರತ ಮಹತ್ವದ ಹೇಳಿಕೆಯನ್ನ ಇದೀಗ ನೀಡಿದೆ. ಹಾಗಾದರೆ ಭಾರತ ಹೇಳಿದ್ದು ಏನು? ಇಸ್ರೇಲ್ ಮತ್ತು ಗಾಜಾ ಯುದ್ಧದ ಕುರಿತು ಭಾರತದ ಅಭಿಪ್ರಾಯ ಏನು?
ಅದು ಅಕ್ಟೋಬರ್ 7, 2023 ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಹಾಗೂ ಹಮಾಸ್ ದಿಢೀರ್ ಯುದ್ಧದ ಬೆಂಕಿ ಹೊತ್ತಿಸಿದ್ದವು. ಬಡಿದಾಟ ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 3 ತಿಂಗಳು ಕಳೆದು ಹೋಗಿದೆ. ಹೀಗಿದ್ದಾಗ ಭಾರತ ನೀಡಿರುವ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಹಾಗಾದರೆ ಭಾರತ ಹೇಳಿದ್ದೇನು? ಮುಂದೆ ಓದಿ.

ಭಾರತ ಯುದ್ಧದ ಬಗ್ಗೆ ಹೇಳಿದ್ದಿಷ್ಟು!
ಹೌದು ಭಾರತ ಇದೀಗ ಇಸ್ರೇಲ್ ಹಾಗೂ ಹಮಾಸ್ ಯುದ್ಧದ ಬಗ್ಗೆ ಮುಕ್ತವಾಗಿ ಹೇಳಿಕೆಯ ನೀಡಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತ ಶಾಂತಿಯ ಪಾಠ ಮಾಡಿದೆ. ವಿದೇಶಾಂಗ ಸಚಿವ ಜೈಶಂಕರ್, ಇದೀಗ ನೀಡಿರುವ ಹೇಳಿಕೆ ಪ್ರಕಾರ 'ಯುದ್ಧದ ಪರಿಣಾಮ ಜರ್ಜರಿತವಾದ ಗಾಜಾಗೆ, ಸೂಕ್ತ ಪರಿಹಾರ ಅಗತ್ಯವಿದ್ದು ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತೆ ಇರಬೇಕು' ಎಂದು ಹೇಳಿದ್ದಾರೆ.
3 ತಿಂಗಳು ಮುಗಿಸಿರುವ...
ಅಂದಹಾಗೆ ಉಗಾಂಡ ಕಂಪಾಲದಲ್ಲಿ ನಡೆದ ಅಲಿಪ್ತ ಚಳವಳಿ ಶೃಂಗ ಸಭೆಯಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವ ಜೈಶಂಕರ್ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಶುರುವಾಗಿ 3 ತಿಂಗಳು ಕಳೆದ ಹಿನ್ನೆಲೆಯಲ್ಲಿ ಜೈಶಂಕರ್ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ಗಾಜಾ ಸಂಘರ್ಷ ಪರಿಣಾಮ ಏನು ಎಂಬುದು ಇದೀಗ ನಮಗೆ ಅರ್ಥವಾಗುತ್ತಿದೆ. ಇದಕ್ಕೆ ಈಗ ಸೂಕ್ತ ಪರಿಹಾರ ಅಗತ್ಯವಿದೆ ಎಂದಿದ್ದಾರೆ ವಿದೇಶಾಂಗ ಸಚಿವ ಜೈಶಂಕರ್ ಅವರು.

ಇಸ್ರೇಲ್ ಪರವಾಗಿ ಪರೋಕ್ಷ ಬೆಂಬಲ?
ಭಾರತ ಮತ್ತು ಇಸ್ರೇಲ್ ನಡುವೆ ಸಂಬಂಧ ತುಂಬಾ ಗಟ್ಟಿಯಾಗಿದೆ. ಹಾಗೇ ಭಾರತ ಕೂಡ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಸದಾ ವಿರೋಧಿಸುತ್ತಿದೆ. ಇದೀಗ ಅದೇ ರೀತಿಯ ಹೇಳಿಕೆ ನೀಡಿದೆ ಭಾರತ. ವಿದೇಶಾಂಗ ಸಚಿವ ಜೈಶಂಕರ್ ಅವ್ರು ಹೇಳಿದಂತೆ ಭಯೋತ್ಪಾದನೆ ಮತ್ತು ಒತ್ತೆಯಾಳು ಮೂಲಕ ಬೆದರಿಕೆ ಒಡ್ಡುವ ಕ್ರಮಗಳು ಸರಿಯಲ್ಲ ಎಂಬುದನ್ನು ಮೊದಲು ನಾವು ಸ್ಪಷ್ಟಪಡಿಸಬೇಕು. ಅಂತಾರಾಷ್ಟ್ರೀಯ ಕಾನೂನನ್ನ ಎಲ್ಲ ದೇಶ ಗೌರವಿಸಬೇಕು ಅಂತಾ ಜೈಶಂಕರ್ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications