ಪ್ರಧಾನಿ ನರೇಂದ್ರ ಮೋದಿಗೆ ಮತ್ತೆ ವಿಶ್ವದ ನಂಬರ್ 01 ಸ್ಥಾನ: ಮಾರ್ನಿಂಗ್ ಕನ್ಸಲ್ಟ್ ಫರ್ಮ್ ಪಟ್ಟಿ ಬಿಡುಗಡೆ
ಬೆಂಗಳೂರು, ಏಪ್ರೀಲ್ 02: ವಿಶ್ವದ ದೊಡ್ಡಣ್ಣ ರಾಷ್ಟ್ರವಾದ ಅಮೆರಿಕ ದೇಶದ ಅಧ್ಯಕ್ಷರಿಗೂ ಸಿಗದ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೊದಿಯವರು ಮತ್ತೊಮ್ಮೆ ಭಾಜನರಾಗಿದ್ದಾರೆ.
ವಿಶ್ವದ ಜನಪ್ರೀಯ ನಾಯಕರ ಪಟ್ಟಿಯನ್ನು ಮಾರ್ನಿಂಗ್ ಕನ್ಸಲ್ಟ್‌ಫರ್ಮ್ ಕಂಪನಿ ಭಾನುವಾರ ಬಿಡುಗಡೆಗೊಳಿಸಿದೆ. ಸದರಿ ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರಿ ಮೋದಿಯವರು ಶೇಕಡಾ 76ರಷ್ಟು ರೇಟಿಂಗ್ ಪಡೆದಿದ್ದಾರೆ. ಈ ಮೂಲಕ ಭಾರತದ ಪ್ರಧಾನಮಂತ್ರಿಗಳು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ ನಾಯಕ ಪಟ್ಟ ಕಾಯ್ದುಕೊಂಡಿದ್ದಾರೆ.

ಇದೇ ಪಟ್ಟಿಯಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಟ್ಟು 78 ಅಂಕಡಗಳನ್ನು ಪಡೆದಿದ್ದರು. ಈ ಸಲ ಅವರು ಶೇಕಡಾ 76ರಷ್ಟು ಅಂಕ ಗಳಿಸುವ ಮೂಲಕ ಜಗತ್ತಿನ ಅತ್ಯುತ್ತಮ ನಾಯಕರೆನಿಸಿಕೊಂಡಿದ್ದಾರೆ.
ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ?: ವಿವರ
ಮಾರ್ನಿಂಗ್ ಕನ್ಸಲ್ಟ್‌ಫರ್ಮ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಭಾರತದ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಗೆ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ. ಅವರೊಂದಿಗೆ ಮೆಕ್ಸಿಕೋ ದೇಶದ ಅಧ್ಯಕ್ಷರಾದ ಆಂಡ್ರೆಸ್ ಮ್ಯಾನುವೆಲ್ ಲೋಪೆಜ್ ಒಬ್ರಡಾರ್ ಅವರು ಪಟ್ಟಿಯಲ್ಲಿ ಶೇಕಡಾ 61ಅಂಕ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
Global Leader Approval: *Among all adults
— Morning Consult (@MorningConsult) April 2, 2023
Modi: 76%
López Obrador: 61%
Albanese: 55%
Meloni: 49%
Lula da Silva: 49%
Biden: 41%
Trudeau: 39%
Sánchez: 38%
Scholz: 35%
Sunak: 34%
Macron: 22%
*Updated 03/30/23https://t.co/Z31xNcDhTg pic.twitter.com/BUfFdwxEjv
ಮೆಕ್ಸಿಕೋ ಅಧ್ಯಕ್ಷರಿಗೂ ಮತ್ತು ಭಾರತದ ಪ್ರಧಾನಮಂತ್ರಿಗಳಿಗೂ ಬರೊಬ್ಬರಿ 15 ಅಂಕಗಳು ವ್ಯತ್ಯಾಸ ಇದೆ. ಉಳಿದಂತೆ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಆಲ್ಬನೀಸ್ ಮೂರನೆ ಸ್ಥಾನ, ಇಟಲಿ ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರೇಜಿಲಿಯನ್ ಅಧ್ಯಕ್ಷ ಲುಲ ಡೆ ಸಿಲ್ವ ನಾಲ್ಕು ಮತ್ತು ಟಾಪ್ ಐದರ ಸ್ಥಾನದಲ್ಲಿದ್ದಾರೆ ಎಂದು ಪಟ್ಟಿ ಮಾಹಿತಿ ನೀಡಿದೆ.
ಇನ್ನೂ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಶೇಕಡಾ 41ರಷ್ಟು ರೇಟಿಂಗ್ ಪಡೆಯುವ ಮೂಲಕ ಆರನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪಟ್ಟಿ ತಿಳಿಸಿದೆ.
ಪ್ರಧಾನಿ ಮೋದಿಯವರ ವರ್ಚಸ್ಸು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಂಬರ್ ಒನ್ ಪಟ್ಟಕ್ಕೇ ಏರುವ ಮೂಲಕ ಭಾರತದ ಪ್ರಧಾನಮಂತ್ರಿಯೋಬ್ಬರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರೊಂದಿಗೆ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಕಂಪನಿಯ ಹಿನ್ನೆಲೆ: ಪಟ್ಟಿಯ ಅಧ್ಯಯನ
ಅಮೆರಿಕಾ ಸೇರಿದಂತೆ ಜಾಗತಿಕವಾಗಿ ಒಟ್ಟು 22 ರಾಷ್ಟ್ರಗಳನ್ನು ಹಿಂದಿಕ್ಕಿದ್ದಾರೆ. ವಿಶ್ವದ ಅಗ್ರಗಣ್ಯ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡುವ ಈ ಮಾರ್ನಿಂಗ್ ಕನ್ಸಲ್ಟ್‌ಫರ್ಮ್ ಕಂಪನಿಯು ಜಾಗತಿಕ ಬಿಸಿನೆಸ್ ಇಂಟಲಿಜೆನ್ಸ ಕಂಪನಿಯಾಗಿದೆ.
ಈ ಕಂಪನಿಯು ಇದೇ ವರ್ಷ ಜನವರಿ 26ರಿಂದ ಜನವರಿ 31ರವರೆಗೆ ಒಟ್ಟು 20,000 ಸಂದರ್ಶನಗಳನ್ನು ನಡೆಸಿದೆ. ಜನಭಿಪ್ರಾಯ ಸಂಗ್ರಹದ ಮೇರೆಗೆ ವರದಿ ಸಿದ್ಧಪಡಿಸಿ, ಸೂಕ್ತವಾಗಿ ಪರಿಶೀಲಿಸಿ ಪಟ್ಟಿಯನ್ನು ತಯಾರಿಸಿ ಭಾನುವಾರ ಬಿಡುಗಡೆ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.












Click it and Unblock the Notifications