Swiss bank: ಭಾರತೀಯ ನಾಗರಿಕರ ಹಣಕಾಸು ಖಾತೆಗಳ ವಿವರ ನೀಡಿದ ಸ್ವಿಸ್ ಬ್ಯಾಂಕ್, ಮಹತ್ವದ ಮಾಹಿತಿ, ವಿವರ
ವಾರ್ಷಿಕ ಸ್ವಯಂಚಾಲಿತ ಮಾಹಿತಿ ವಿನಿಮಯದ ಭಾಗವಾಗಿ ಭಾರತೀಯ ನಾಗರಿಕರ ಹಣಕಾಸು ಖಾತೆಗಳ ವಿವರಗಳನ್ನು ಸ್ವಿಸ್ ಬ್ಯಾಂಕ್ ನೀಡಿದೆ. ಭಾರತೀಯ ನಾಗರಿಕರು ಹಾಗೂ ಸಂಸ್ಥೆಗಳ ಹೊಸ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸ್ವೀಕರಿಸಿದೆ.
ವಾರ್ಷಿಕ ಸ್ವಯಂಚಾಲಿತ ಮಾಹಿತಿ ವಿನಿಮಯದ ಅಡಿಯಲ್ಲಿ ಸ್ವಿಟ್ಜರ್ಲೆಂಡ್ ಸುಮಾರು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು 104 ದೇಶಗಳೊಂದಿಗೆ ಹಂಚಿಕೊಂಡಿದೆ.

ಈ ಖಾತೆಗಳು ಕೆಲವು ಪ್ರಮುಖ ವ್ಯಕ್ತಿಗಳು, ಕಾರ್ಪೊರೇಟ್‌ಗಳು ಮತ್ತು ಟ್ರಸ್ಟ್‌ಗಳಿಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ. ಭಾರತದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ವಿವರಗಳು ನೂರಾರು ಹಣಕಾಸು ಖಾತೆಗಳಿಗೆ ಸಂಬಂಧಿಸಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳನ್ನು ಬಹಿರಂಗ ಪಡಿಸಿದ್ದಾರೆ.
ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವೆ ಈಗ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ.
ನೀಡಲಾಗಿರುವ ವಿವರಗಳಲ್ಲಿ ಹೆಸರು, ವಿಳಾಸ, ವಾಸವಿರುವ ದೇಶ ಮತ್ತು ತೆರಿಗೆ ಗುರುತಿನ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ಕೊಡಲಾಗಿದೆ. ಐಡೆಂಟಿಟಿ, ಖಾತೆ ಮತ್ತು ಹಣಕಾಸಿನ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ.
ಹಣಕಾಸು ಸಂಸ್ಥೆ, ಖಾತೆಯ ಬಾಕಿ ಮತ್ತು ಬಂಡವಾಳ ಆದಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ವಿವರಗಳು ಒಳಗೊಂಡಿವೆ ಎಂದು ತಿಳಿದುಬಂದಿದೆ.
ಮಾಹಿತಿ ವಿನಿಮಯದ ಗೌಪ್ಯತೆಯ ಷರತ್ತು ಮತ್ತು ಮುಂದಿನ ತನಿಖೆಗಳ ಮೇಲೆ ಅದು ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ಈ ವಿವರಗಳಲ್ಲಿ ಉಲ್ಲೇಖಿಸಲಾಗಿದೆ.
ವಿನಿಮಯಗೊಂಡ ಮಾಹಿತಿಯಲ್ಲಿ ಖಾತೆಗಳು ಒಳಗೊಂಡಿರುವ ಮೊತ್ತ ಅಥವಾ ಯಾವುದೇ ನಿರ್ದಿಷ್ಟತೆಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲವೆಂದು ತಿಳಿದುಬಂದಿದೆ. ಆದರೆ, ಶಂಕಿತ ತೆರಿಗೆಯ ತನಿಖೆಗಳಲ್ಲಿ ಡೇಟಾವನ್ನು ವ್ಯಾಪಕವಾಗಿ ಬಳಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಶಂಕಿತ ತೆರಿಗೆ ಅಪರಾಧಗಳಲ್ಲಿ ಮನಿ ಲಾಂಡರಿಂಗ್, ಭಯೋತ್ಪಾದನೆ ನಿಧಿ ಸೇರಿದಂತೆ ಹಲವು ಆರೋಪಗಳು ಒಳಗೊಂಡಿವೆ.
ಈ ಮಾಹಿತಿ ವಿನಿಮಯವು ಕಳೆದ ತಿಂಗಳು ನಡೆದಿದೆ. ಮುಂದಿನ ಮಾಹಿತಿಯನ್ನು ಸ್ವಿಟ್ಜರ್ಲೆಂಡ್ ಸೆಪ್ಟೆಂಬರ್ 2024 ರಲ್ಲಿ ಹಂಚಿಕೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿನಿಮಯಗೊಂಡ ಮಾಹಿತಿಯ ಮೂಲಕ ತೆರಿಗೆದಾರರು ಹಣಕಾಸು ಖಾತೆಗೆ ಸೇರಿದ ಮಾಹಿತಿಯನ್ನು ಸರಿಯಾಗಿ ಘೋಷಿಸಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬಹುದು.
ಈ ವರ್ಷ, ಕಝಾಕಿಸ್ತಾನ್, ಮಾಲ್ಡೀವ್ಸ್ ಮತ್ತು ಓಮನ್ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಣಕಾಸು ಖಾತೆಗಳ ಸಂಖ್ಯೆ ಸುಮಾರು ಎರಡು ಲಕ್ಷ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications