ಭಾರತ & ಅಮೆರಿಕ ನಡುವೆ ವ್ಯಾಪಾರ ಒಪ್ಪಂದ, ಮತ್ತೊಂದು ಇತಿಹಾಸಕ್ಕೆ ವೇದಿಕೆ ಸಿದ್ಧ!
ಭಾರತ & ಅಮೆರಿಕ ನಡುವೆ ಇದೀಗ ಮಹತ್ವದ ಮಾತುಕತೆ ಆರಂಭವಾಗಿ, ವ್ಯಾಪಾರ ಒಪ್ಪಂದ ಬಹುತೇಕ ಅಂತ್ಯಕ್ಕೆ ಬಂದಿದೆ. ಇದು ಪ್ರಪಂಚದ ವ್ಯಾಪಾರ ವೇದಿಕೆಯಲ್ಲಿ ಭಾರತ & ಅಮೆರಿಕ ನಡುವೆ ಸಂಬಂಧ ಗಟ್ಟಿ ಮಾಡುವ ಜೊತೆಗೆ ಹೊಸ ಇತಿಹಾಸ ನಿರ್ಮಾಣ ಮಾಡುವ ಮುನ್ಸೂಚನೆ ಕೂಡ ನೀಡಿದೆ. ಭಾರತದ ಶತ್ರು ದೇಶಗಳಿಗೆ ಇದು ಉರಿ ತಂದರೂ, ಭವಿಷ್ಯದಲ್ಲಿ ಇಡೀ ಜಗತ್ತು ಈ ಒಪ್ಪಂದ ನೆನಪು ಇಡುವಂತಹ ವಾತಾವರಣ ಇದೀಗ ಸೃಷ್ಟಿಯಾಗಿದೆ. ಹಾಗಾದರೆ ಭಾರತ & ಅಮೆರಿಕ ವ್ಯಾಪಾರ ಒಪ್ಪಂದ ಏನೆಲ್ಲಾ ಬದಲಾವಣೆ ತರಬಹುದು?
ಅಮೆರಿಕ ಮತ್ತೆ ಮತ್ತೆ ತನ್ನ ಡಬಲ್ ಗೇಮ್ ನೀತಿಯನ್ನ ಮುಂದುವರಿಸಿ, ಒಂದು ಕಡೆ ಭಾರತಕ್ಕೆ ತೆರಿಗೆ ಹೇರಿಕೆ ಹೊರೆ ಹಾಕುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೊಂದು ಕಡೆ ಚೀನಾ & ರಷ್ಯಾ ಜೊತೆಗೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಭಾರತ ಕೂಡ ಚೆಕ್ ಇಟ್ಟು ಚೀನಾ & ರಷ್ಯಾ ಜೊತೆಗೆ ಸಂಬಂಧ ಇನ್ನಷ್ಟು ಗಟ್ಟಿ ಮಾಡಿಕೊಂಡು ಮುಂದೆ ನುಗ್ಗಿತ್ತು...

ಭಾರತಕ್ಕೆ ಇದೀಗ ಭರ್ಜರಿ ಲಾಭ?
ಇದರ ಫಲವಾಗಿ ಇದೀಗ ಟ್ರಂಪ್ ಅಧಿಕಾರಿಗಳೇ ನೇರ ಭಾರತದ ಅಧಿಕಾರಿಗಳ ಜೊತೆ ಸಭೆಯನ್ನ ನಡೆಸಿ, ತೆರಿಗೆ ಯುದ್ಧಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಗಮನ ಸೆಳೆದಿದೆ. ಇದು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದು, ಮಗು ಚಿವುಟುವುದು & ತೊಟ್ಟಿಲನ್ನು ಕೂಡ ತೂಗುವುದು ಅಮೆರಿಕದ ಬುದ್ಧಿ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಭಾರತಕ್ಕೆ ಲಾಭ ಆಗುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು. ಹಾಗಾದರೆ ದಿಢೀರ್ ತೆರಿಗೆ ಹೇರಿಕೆ ವಾಪಸ್ ಪಡೆಯುತ್ತಾ ಅಮೆರಿಕ? ಮುಂದೆ ಓದಿ.
ತೆರಿಗೆ ಪ್ರಮಾಣದಲ್ಲಿ ಭಾರಿ ಇಳಿಕೆ?
ಅಮೆರಿಕ ಎಂಬ ದೇಶವನ್ನು ಪೂರ್ತಿಯಾಗಿ ಯಾಕೆ ನಂಬಬಾರದು ಅನ್ನೋ ವಿಷಯ ಇದೀಗ ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಅದರಲ್ಲೂ ಅಮೆರಿಕ ಯಾವ ಕ್ಷಣದಲ್ಲಿ ಬೇಕಾದರೂ ಮತ್ತೊಂದು ದೇಶದ ಜೊತೆ ಹೋಗುವ ಮೂಲಕ ನಂಬಿದವರಿಗೆ ಕೈಕೊಡುತ್ತೆ ಅನ್ನೋದು ಮತ್ತೆ ಪ್ರೂವ್ ಆಗಿದೆ. ಇಂತಹ ವೇಳೆ ಭಾರತ ಕೂಡ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಭಾರತದ ಮೇಲೆ ಅಮೆರಿಕ ಹೇರಿಕೆ ಮಾಡಿರುವ ತೆರಿಗೆ ಪ್ರಮಾಣ ಶೇಕಡಾ 30ಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೀಗ ಮೂಡಿದೆ.












Click it and Unblock the Notifications