ಇಸ್ರೇಲ್ ರಾಜಧಾನಿಯಾಗಿ ಜರುಸಲೇಂ: 128 ದೇಶಗಳ ವಿರೋಧ

Posted By:
Subscribe to Oneindia Kannada

ನ್ಯೂಯಾರ್ಕ್, ಡಿಸೆಂಬರ್ 22: ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿಯಾಗಿ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಯ ವಿರುದ್ಧ ಭಾರತ ಸೇರಿದಂತೆ 128 ದೇಶಗಳು ವಿಶ್ವಸಂಸ್ಥೆಯಲ್ಲಿ ಮತಚಲಾಯಿಸಿವೆ.

ಇಸ್ರೇಲ್ ರಾಜಧಾನಿ ಜೆರುಸಲೇಂ: ಟ್ರಂಪ್ ಘೋಷಣೆಗೆ ಐಸಿಸ್ ಆಕ್ರೋಶ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ ನಡೆಯ ವಿರುದ್ಧವೇ ಹೆಚ್ಚು ಮತ ಚಲಾವಣೆಯಾಗಿದೆ. ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಡಿ.6 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸುತ್ತಿದ್ದಂತೆಯೇ ಹಲವು ದೇಶಗಳು ಈ ನಿರ್ಧಾರದ ವಿರುದ್ಧ ದನಿ ಎತ್ತಿದ್ದವು.

India and 127 countries vote against US’ move on Jerusalem as capital of Israel

ಇಸ್ರೇಲ್ ಮಾತ್ರವೇ ಈ ನಡೆಯನ್ನು ಸ್ವಾಗತಿಸಿದ್ದು, ಐಸಿಸ್ ಸೇರಿದಂತೆ ಇನ್ನಿತರ ಉಗ್ರ ಸಂಘಟನೆಗಳು ಟ್ರಂಫ್ ನಿರ್ಧಾರದಿಂದ ಭಾರೀ ಬೆಲೆತೆರಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದ್ದವು.

'ಪೂರ್ವ ಜೆರುಸಲೇಂ ಅನ್ನು ತಮ್ಮ ರಾಜಧಾನಿಯನ್ನಾಗಿ ಪ್ಯಾಲಿಸ್ತೇನ್ ಎಂದೋ ಮಾಡಿಕೊಂಡಿದೆ. ಈಗ ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸುವುದರಿಂದ ಪ್ಯಾಲಿಸ್ತೇನ್ ಮತ್ತು ಇಸ್ರೇಲ್ ನಡುವೆ ಮತ್ತಷ್ಟು ವೈಮನಸ್ಯ ಬೆಳೆಯುತ್ತದೆ' ಎಂಬುದು ಹಲವು ದೇಶಗಳ ಅಂಬೋಣ.

ಆದರೆ ಅಮೆರಿಕ ಮಾತ್ರ ತನ್ನ ನಿಲುವಿಗೆ ಬದ್ಧವಾಗಿದ್ದು, ತನ್ನ ನಿರ್ಧಾರದ ವಿರುದ್ಧ ಮಾತನಾಡುವ ದೇಶಗಳು ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indias decision to vote against American recognition of Jerusalem as the Israeli capital comes a day after Trump warned countries against opposing the US position. India did not speak on the floor of the Assembly in New York, but after Trump recognised the holy city of Jerusalem as the capital of Israel, it had said that its Palestine position was independent and consistent.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ