ರಷ್ಯಾದಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಿದ ಐಕಿಯಾ
ರಷ್ಯಾ, ಅ. 13: ಸ್ವೀಡಿಷ್‌ನ ಗೃಹೋಪಕರಣಗಳ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ಐಕಿಯಾ, ರಷ್ಯಾದಲ್ಲಿ 10,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಹಣದುಬ್ಬರ ಮತ್ತು ರಷ್ಯಾದ ಆರ್ಥಿಕ ಕುಸಿತದ ಕಾರಣ ಇದು ಸವಾಲಿನ ವರ್ಷ ಎಂದು ಕರೆದಿದ್ದು, ಪೂರ್ಣ-ವರ್ಷದ ಮಾರಾಟದಲ್ಲಿ ಗುರುವಾರ 6.5% ಹೆಚ್ಚಳವನ್ನು ವರದಿ ಮಾಡಿದೆ.
ವಿಶ್ವದ ಅತಿದೊಡ್ಡ ಪೀಠೋಪಕರಣ ಬ್ರ್ಯಾಂಡ್ ಈಗಾಗಲೇ ರಷ್ಯಾದ 17 ಮಳಿಗೆಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆ ರಫ್ತು ಮತ್ತು ಆಮದುಗಳನ್ನು ನಿಲ್ಲಿಸಿದೆ. ಇದು ರಷ್ಯಾದ ಮಿತ್ರರಾಷ್ಟ್ರವಾಗಿರುವ ಬೆಲಾರಸ್‌ನಲ್ಲಿ ಕೂಡ ತನ್ನ ಮಳಿಗೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಐಕಿಯಾ ರಷ್ಯಾದಲ್ಲಿ ತನ್ನ 12,000 ಉದ್ಯೋಗಿಗಳಲ್ಲಿ ಸುಮಾರು 10,000 ಉದ್ಯೋಗಿಗಳಿಗೆ ವಿದಾಯ ಹೇಳಬೇಕಾಗಿ ಬಂದಿದೆ ಎಂದು ಐಕಿಯಾದ ಹೆಚ್ಚಿನ ಮಳಿಗೆಗಳನ್ನು ನಿರ್ವಹಿಸುವ ಹೋಲ್ಡಿಂಗ್ ಕಂಪನಿ ಇಂಗ್ಕಾ (Ingka)ದನ ಮುಖ್ಯ ಕಾರ್ಯನಿರ್ವಾಹಕ ಜೆಸ್ಪರ್ ಬ್ರೋಡಿನ್ ಹೇಳಿದ್ದಾರೆ.
ಐಕಿಯಾ ಮಾರಾಟದಲ್ಲಿ 6.5% ಏರಿಕೆಯನ್ನು ಕಂಡಿದೆ ಮತ್ತು ವರದಿಯ ಪ್ರಕಾರ ರಷ್ಯಾದಲ್ಲಿ ಹಣದುಬ್ಬರ ಮತ್ತು ಆರ್ಥಿಕ ಕುಸಿತದ ಕಾರಣದಿಂದಾಗಿ ಇದು ಸವಾಲಿನ ವರ್ಷ ಎಂದು ವರದಿಯಲ್ಲಿ ವಿವರಿಸಿದೆ.
ಇದಕ್ಕೂ ಮೊದಲು, ರಷ್ಯಾ ಮತ್ತು ಬೆಲಾರಸ್‌ಗೆ ಉತ್ಪನ್ನಗಳ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಲಾಗುವುದು ಮತ್ತು ಮಾಸ್ಕೋ ಮತ್ತು ಮಿನ್ಸ್ಕ್‌ನಲ್ಲಿನ ಖರೀದಿ ಮತ್ತು ಲಾಜಿಸ್ಟಿಕ್ಸ್ ಕಚೇರಿಗಳು ಶಾಶ್ವತವಾಗಿ ಮುಚ್ಚಲ್ಪಡುತ್ತವೆ ಎಂದು ಐಕಿಯಾ ತಿಳಿಸಿತ್ತು.

ಹಣದುಬ್ಬರದ ಹೆಚ್ಚಿನ ದರದಿಂದಾಗಿ, ಹಿಂದಿನ ಕೆಲವು ವರ್ಷಗಳಲ್ಲಿ ಬೆಲೆ ಸ್ಥಿರತೆಯ ನೀತಿಯನ್ನು ಕೊನೆಗೊಳಿಸಲು ಮತ್ತು ಈ ವರ್ಷ ಬೆಲೆಗಳನ್ನು ಹೆಚ್ಚಿಸಲು ಒತ್ತಡ ಉಂಟು ಮಾಡಿದೆ ಎಂದು ಫ್ಲಾಟ್-ಪ್ಯಾಕ್ ಪೀಠೋಪಕರಣಗಳ ಉದ್ಯಮದ ಪ್ರಮುಖರು ಹೇಳಿದ್ದಾರೆ.
ಇಂಟರ್ ಐಕಿಯಾ ಸಿಇಒ ಜಾನ್ ಅಬ್ರಹಾಮ್ಸನ್ ರಿಂಗ್ ಸಂದರ್ಶನವೊಂದರಲ್ಲಿ ಚಿಲ್ಲರೆ ವ್ಯಾಪಾರಿಗಳ ಮಾರಾಟದ ಪ್ರಮಾಣವು ವರ್ಷದಲ್ಲಿ ಹೆಚ್ಚಿಲ್ಲ ಎಂದು ಹೇಳಿದ್ದಾರೆ. ಇಂಟರ್ ಐಕಿಯಾ ಎಲ್ಲಾ ಇನ್‌ಪುಟ್ ವೆಚ್ಚದ ಹೆಚ್ಚಳವನ್ನು ಚಿಲ್ಲರೆ ವ್ಯಾಪಾರಿಗಳಿಗೆ ವರ್ಗಾಯಿಸಿಲ್ಲ ಎಂದೂ ತಿಳಿಸಿದ್ದಾರೆ.











Click it and Unblock the Notifications