ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲ್ಬೋರ್ನ್ ಮ್ಯಾಚ್ : ರವಿ ಫ್ಯಾನ್ಸ್ ನ್ಯಾಯಕ್ಕಾಗಿ ಆಗ್ರಹ

By Mahesh
|
Google Oneindia Kannada News

ಮೆಲ್ಬೋರ್ನ್, ಮಾ.19: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುವ ವೇಳೆ ಕನ್ನಡಿಗರ ಐಎಎಸ್ ಅಧಿಕಾರಿ ಡಿಕೆ ರವಿ ಚಿತ್ರ ಕಾಣಿಸಿಕೊಂಡಿದೆ. ಸ್ಟಾರ್ ಸ್ಪೋರ್ಟ್ಸ್, ಸುವರ್ಣ ಪ್ಲಸ್, ದೂರದರ್ಶನ ಸೇರಿದಂತೆ ಅನೇಕ ವಾಹಿನಿಗಳಲ್ಲಿ ಪ್ರಸಾರವಾದ ಈ ಪಂದ್ಯದ ನಡುವೆ ಪ್ರತಿಭಟನೆ ನಡೆದಿದೆ.

ಲ್ಯಾಂಡ್, ಸ್ಯಾಂಡ್ ಮಾಫಿಯಾಕ್ಕೆ ಬಲಿಯಾದ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ದೊಡ್ಡಕೊಪ್ಪಲು ಕರಿಯಣ್ಣ ರವಿ ಅವರ ಸಾವಿನ ಪ್ರಕರಣ ಸಿಬಿಐಗೆ ವಹಿಸಬೇಕು. ಅವರ ಸಾವು ನಮಗೆ ನೋವು ತಂದಿದೆ.

ಅವರ ಕುಟುಂಬಕ್ಕೆ ನಮ್ಮಂಥ ಅಭಿಮಾನಿಗಳಿಗೆ ನ್ಯಾಯ ಸಿಗಬೇಕಿದೆ ಎಂದು ರವಿ ಭಾವಚಿತ್ರವಿರುವ ಫಲಕ ಹಿಡಿದುಕೊಂಡಿರುವ ಇಬ್ಬರು ಯುವಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.[ಸಿಐಡಿ ತನಿಖೆ ಎತ್ತ ಸಾಗಿದೆ?ಯಾರು ಟಾರ್ಗೆಟ್ ]

IAS Officer's death: India vs Bangladesh match is on but fans demand justice for DK Ravi

35 ವರ್ಷ ವಯಸ್ಸಿನ ರವಿ ಅವರು ವಾಣಿಜ್ಯ ಇಲಾಖೆ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದರು. ಇದು ಅನಿವಾಸಿ ಭಾರತೀಯರನ್ನು ಸೆಳೆದಿತ್ತು. ಹೆಮ್ಮೆಯಿಂದ ರವಿ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದರು.[ರವಿ ತಾಯಿ ಗೌರಮ್ಮನವರ ಸಂದರ್ಶನ]

India vs Bangladesh match is on but fans demand justice for DK Ravi

ಅದರೆ, ರವಿ ಅವರ ಹಠಾತ್ ನಿಧನ ಹಾಗೂ ಸಾವಿನ ಸುತ್ತ ಹುಟ್ಟಿಕೊಂಡಿರುವ ಅನುಮಾನದ ಹುತ್ತ, ಸಿಬಿಐ ತನಿಖೆ ವಹಿಸಲು ಹಿಂದು ಮುಂದು ನೋಡುತ್ತಿರುವ ಸರ್ಕಾರ ಇದೆಲ್ಲವೂ ಎನ್ನಾರೈಗಳನ್ನು ಕೆರಳಿಸಿದೆ. [ಡಿಕೆ ರವಿ ಸಾವು : ಗುರುವಾರದ ಪ್ರಮುಖ ಬೆಳವಣಿಗೆ]

ಸಾಮಾಜಿಕ ಜಾಲ ತಾಣಗಳಲ್ಲಿ ರವಿ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗುರುವಾರ ಕೂಡಾ ಮುಂದುವರೆದಿದೆ.

ತುಮಕೂರಿನಲ್ಲಿ ಪ್ರತಿಭಟನೆ:


ಬೆಂಗಳೂರಿನಲ್ಲಿ ಪ್ರತಿಭಟನೆ:

ಎಬಿವಿಪಿ ಸಂಘಟನೆ ಪ್ರತಿಭಟನೆ:

English summary
Today all eyes are glued to television as India is playing against Bangladesh in the quarter final match in ICC World Cup 2015 in Melbourne on Thursday, March 19. While people are enjoying the cricket match, two young Indians outside the venue of the World Cup match are demanding justice for IAS officer DK Ravi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X