ವಿಪರೀತ ಸಂಶಯ: ಪತ್ನಿ ಗುಪ್ತಾಂಗಕ್ಕೆ ಅಂಟು ತುಂಬಿದ ಪತಿರಾಯ
ಕೀನ್ಯಾ, ಫೆಬ್ರವರಿ 19: ಪತ್ನಿಯ ಮೇಲಿನ ಸಂಶಯ ಹೆಚ್ಚಾಗಿ ಕೊನೆಗೆ ಆಕೆಯ ಗುಪ್ತಾಂಗಕ್ಕೆ ಅಂಟು ತುಂಬಿರುವ ಕೀನ್ಯಾದಲ್ಲಿ ನಡೆದಿದೆ.
ಡೆನ್ನೀಸ್ ಮುಮೊ ಎಂಬಾಕೆ ಅನುಮಾನ ಪಡುವ ಪತಿಯಿಂದ ಹಿಂಸೆ ಅನುಭವಿಸಿದ ಮಹಿಳೆ. ಘಟನೆ ನಡೆದು ದಿನ ಕಳೆದ ಬಳಿಕ ಮಹಿಳೆ ತೀವ್ರವಾಗಿ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ವಿಚಾರಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಮಹಿಳೆಯನ್ನು ಪರೀಕ್ಷೆಗೊಳಪಡಿಸಿದಾಗ ಈ ವಿಷಯ ತಿಳಿದುಬಂದಿದೆ. ಬಳಿಕ ವೈದ್ಯರ ತಂಡ ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದು ಈಗ ಚೇತರಿಸಿಕೊಳ್ಳುತ್ತಿದ್ದಾಳೆ.

ಇತ್ತೀಚೆಗಷ್ಟೇ ಲಕ್ನೋದಲ್ಲಿ ಸಹೋದರನೇ ತಂಗಿಯ ಗುಪ್ತಾಂಗಕ್ಕೆ ಗನ್ ಇಟ್ಟು ಶೂಟ್ ಮಾಡಿರುವ ಘಟನೆ ನಡೆದಿತ್ತು. ಯುವತಿ ಅನ್ಯ ಕೋಮಿನ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ವಿಷಯವೇ ಕೊಲೆಗೆ ಕಾರಣ ಎಂದು ತಿಳಿಸಿದ್ದು, ಯುವತಿಯ ಮನೆಯವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿತ್ತು.
ಇದೀಗ ಈ ವಿಕೃತ ಮನಸ್ಸುಳ್ಳ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಬೇರೊಬ್ಬನೊಟ್ಟಿಗೆ ಸಂಬಂಧವಿದೆ ಎಂದು ಭಾವಿಸಿ ಈ ಕೆಲಸ ಮಾಡಿದ್ದಾನೆ.












Click it and Unblock the Notifications