ಕೆರಿಬಿಯನ್ ದ್ವೀಪಗಳಲ್ಲಿ 14 ಜನರ ಬಲಿ ಪಡೆದ ಶತಮಾನದ ಭೀಕರ ಚಂಡಮಾರುತ

Subscribe to Oneindia Kannada

ಫ್ಲೋರಿಡಾ, ಸೆಪ್ಟೆಂಬರ್ 8: ಅಟ್ಲಾಂಟಿಕ್ ಮಹಾ ಸಾಗರದಲ್ಲೆದ್ದ ಶತಮಾನದ ಪ್ರಬಲ ಚಂಡಮಾರುತ ಇರ್ಮಾ ಹೊಡೆತಕ್ಕೆ ಕೆರಿಬಿಯನ್ ದ್ವೀಪಗಳು ತರಗೆಲೆಯಂತಾಗಿವೆ. ಇಲ್ಲಿಯವೆರೆಗೆ 14 ಜನರು ಪ್ರಬಲ ಚಂಡಮಾರುತಕ್ಕೆ ಬಲಿಯಾಗಿದ್ದಾರೆ.

ಗಂಟೆಗೆ 290 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದ ಇರ್ಮಾ ಚಂಡಮಾರುತದ ಹೊಡೆತಕ್ಕೆ ಕೆರಿಬಿಯನ್ ದ್ವೀಪಗಳಾದ ಟರ್ಕಸ್, ಕಾಯ್ಕೋಸ್, ಬರ್ಬುಟಾ, ಸೈಂಟ್ ಮಾರ್ಟಿನ್, ಬ್ರಿಟಿಷ್ ಮತ್ತು ಅಮೆರಿಕಾ ವರ್ಜಿನ್ ದ್ವೀಪಗಳು ಅಕ್ಷರಶಃ ತರಗೆಲೆಯಾಗಿವೆ. ಇಲ್ಲಿನ ಮನೆಗಳ ಸೂರು ಪೂರ್ತಿ ಹಾರಿ ಹೋಗಿದ್ದು, ಕಂಬಗಳು, ಮರಗಳು, ಬೋಟ್ ಸೇರಿದಂತೆ ಎಲ್ಲವೂ ನಾಶವಾಗಿವೆ. ಅಪಾರ ಹಾನಿಯ ಜತೆಗೆ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು ಬಟಾಬಯಲಿನಲ್ಲಿ ದಿನಕಳೆಯುವಂತಾಗಿದೆ.

Hurricane Irma heads to Florida, kills 14 in Caribbean islands

ಶುಕ್ರವಾರದ ವೇಳೆಗೆ ಚಂಡಮಾರುತದ ವೇಗ ಗಂಟೆಗೆ 241 ಕಿಲೋಮೀಟರ್ ಗೆ ಇಳಿದಿದ್ದು ಕ್ಯೂಬಾ ಮತ್ತು ಬಹಾಮಸ್ ದ್ವೀಪಗಳ ಮಧ್ಯೆ ಹಾದು ಅಮೆರಿಕಾದ ರಾಜ್ಯ ಫ್ಲೋರಿಡಾದತ್ತ ಧಾವಿಸಿದೆ. ಶನಿವಾರ ಸಂಜೆ ವೇಳೆಗೆ ಚಂಡ ಮಾರುತದ ಆರಂಭಿಕ ಹಂತಗಳು ಫ್ಲೋರಿಡಾ ತಲುಪಲಿದ್ದು ಭಾನುವಾರ ಪೂರ್ಣಪ್ರಮಾಣದ ಚಂಡಮಾರುತ ಫ್ಲೋರಿಡಾಗೆ ಅಪ್ಪಳಿಸಲಿದೆ ಎಂದು ಅಂದಾಜು ಮಾಡಲಾಗಿದೆ.

Hurricane Irma heads to Florida, kills 14 in Caribbean islands

ಚಂಡಮಾರುತ ಇರ್ಮಾ ಹಿನ್ನಲೆಯಲ್ಲಿ ಫ್ಲೋರಿಡಾದಲ್ಲಿ 1 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸದ್ಯ ಚಂಡಮಾರುತ ಅಮೆರಿಕಾದ ಫ್ಲೋರಿಡಾ ರಾಜ್ಯದತ್ತ ಹೊರಳಿದೆ ಅಷ್ಟೆ. ಮುಂದೆ ಇಲ್ಲಿ ಯಾವ್ಯಾವ ಅನಾಹುತಗಳನ್ನು ಸೃಷ್ಟಿಸಲಿದೆಯೋ ಗೊತ್ತಿಲ್ಲ.

ಕಾದಿದೆ ಮತ್ತೊಂದು ಚಂಡಮಾರುತ

ಇರ್ಮಾದ ಕತೆ ಹೀಗಾದರೆ ಸದ್ಯ ಇನ್ನೊಂದು ಚಂಡಮಾರುತ ಜೋಸ್ ಕೂಡ ಧಾವಿಸುತ್ತಿದೆ. ಚಂಡಮಾರುಗಳ ಪರಿಭಾಷೆಯಲ್ಲಿ ಇದು ಕೆಟಗರಿ 3ರ ತೀವ್ರತೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಯೂ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The eye of Hurricane Irma, one of the most powerful Atlantic storms in a century, grazed the Turks and Caicos Islands, rattling buildings after it smashed a string of Caribbean islands and killed 14 people on its way to Florida.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ