Ukraine: ಉಕ್ರೇನ್ ಸೇನೆಗೆ ಸಿಕ್ಕಿದೆ ಹೊಸ ಅಸ್ತ್ರ, ರಷ್ಯಾ ಡ್ರೋನ್‌ಗಳು ಉಡೀಸ್!
ಉಕ್ರೇನ್ ಮತ್ತು ರಷ್ಯಾ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕೂಡ ಇದೀಗ ಕಾಣುತ್ತಿಲ್ಲ, ಹೀಗಾಗಿಯೇ ಇಬ್ಬರ ನಡುವೆ ಜಗಳ ನಿಲ್ಲಿಸುವ ಪ್ರಯತ್ನವನ್ನು ಅಮೆರಿಕ ಕೂಡ ಭಾಗಶಃ ಕೈಬಿಟ್ಟಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಇನ್ನೂ 10 ವರ್ಷಗಳ ಕಾಲ ಈ ಯುದ್ಧ ಮುಂದುವರಿಯುವ ಆತಂಕ ಆವರಿಸುತ್ತಿದೆ. ಇಷ್ಟೆಲ್ಲಾ ನಡೆಯುತ್ತಿರುವ ಸಮಯದಲ್ಲೇ ಉಕ್ರೇನ್ ವಿರುದ್ಧ ರಷ್ಯಾ ಭಾರಿ ದೊಡ್ಡ ಪ್ರಮಾಣದ ದಾಳಿ ಮಾಡುತ್ತಾ, ಡ್ರೋನ್‌ಗಳ ಮೂಲಕ ವಿನಾಶ ಸೃಷ್ಟಿ ಮಾಡುತ್ತಿದೆ. ಈ ರೀತಿ ಕಷ್ಟದ ಪರಿಸ್ಥಿತಿ ಇರುವ ಸಮಯದಲ್ಲೇ ಉಕ್ರೇನ್ ಮಿಲಿಟರಿ ತನ್ನ ಬುದ್ಧಿ ಉಪಯೋಗಿಸಿದೆ!
ಉಕ್ರೇನ್ ಸೇನೆ ರಷ್ಯಾ ಕೊಟ್ಟಿರುವ ಏಟಿಗೆ ತಣ್ಣಗೆ ಕೂರುವ ಬದಲು ಮರುದಾಳಿ ಶುರು ಮಾಡುತ್ತಿದೆ. ರಷ್ಯಾ ಸೇನೆಯಿಂದ ಸರಿಯಾಗಿ ಒದೆ ತಿಂತಿದ್ದ ಉಕ್ರೇನ್ ದಿಢೀರ್ ತಿರುಗಿಬಿದ್ದು, ರಷ್ಯಾಗೆ ಬುದ್ಧಿ ಕಲಿಸಲು ಮುಂದಾಗಿದೆ. ಒಂದು ಕಡೆ ಉಕ್ರೇನ್ ದೇಶದ ವಿದ್ಯುತ್ ವ್ಯವಸ್ಥೆ ಜಾಲವನ್ನೇ ರಷ್ಯಾ ಉಡಾಯಿಸಿ ಆಘಾತ ನೀಡಿದ್ದು, ಇನ್ನೊಂದು ಕಡೆ ಜನವಸತಿ ಪ್ರದೇಶಗಳು ಕೂಡ ಇದೀಗ ಧೂಳ್ ಧೂಳ್ ಆಗುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಉಕ್ರೇನ್ ತನ್ನ ಬಳಿ ಇರುವ ಹೊಸ ಅಸ್ತ್ರವನ್ನು ಪ್ರಯೋಗ ಮಾಡುತ್ತಾ, ರಷ್ಯಾ ಸೇನೆಗೆ ಪೆಟ್ಟು ಕೊಡುತ್ತಿದೆ. ಹಾಗಾದ್ರೆ ಇದೀಗ ಉಕ್ರೇನ್ ಬಳಿ ಇರುವ ಆ ಹೊಸ ಅಸ್ತ್ರವಾದರೂ ಯಾವುದು? ಮುಂದೆ ಓದಿ.

ಉಕ್ರೇನ್ ಬಳಿ ಹೊಸ ಅಸ್ತ್ರ!
ಹೌದು ರಷ್ಯಾ ವಿರುದ್ಧ ಇದೀಗ ಡ್ರೋನ್ & ಮಿಸೈಲ್ ಬಳಸಿ ಉಕ್ರೇನ್ ಈ ರೇಂಜ್‌ಗೆ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಒಂದು ಬಲವಾದ ಅನುಮಾನ ಕಾಡುತ್ತದೆ. ಉಕ್ರೇನ್ ಸೇನೆಗೆ ದಿಢೀರ್ ಇಷ್ಟೊಂದು ಶಕ್ತಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಮೂಡುತ್ತೆ. ಯಾಕಂದ್ರೆ, ರಷ್ಯಾ ಕೈಲಿ ಒದೆ ತಿನ್ನುತ್ತಿದ್ದ ಉಕ್ರೇನ್ ದಿಢೀರ್ ಈ ರೀತಿ ತಿರುಗೇಟು ನೀಡುತ್ತಿರುವುದನ್ನ ನೋಡಿ ಇಡೀ ಜಗತ್ತೇ ಇದೀಗ ಶಾಕ್‌ಗೆ ಒಳಗಾಗಿದೆ. ಇಷ್ಟೆಲ್ಲದರ ನಡುವೆ ರಷ್ಯಾ ಹಾರಿಸಿರುವ ಡ್ರೋನ್‌ಗಳನ್ನ ಕೂಡ ಉಡಾಯಿಸುತ್ತಿರುವ ಉಕ್ರೇನ್ ಮಿಲಿಟರಿ, ಇದೇ ಸಮಯದಲ್ಲಿ ತನ್ನ ಬಳಿ ಇರುವ ಯಾಕ್-52 ಅರ್ಥಾತ್ Yak-52 ವಿಮಾನಗಳನ್ನ ಬಳಸಿಕೊಳ್ಳುತ್ತಿದೆ.
ಉಕ್ರೇನ್ ಬಳಸುತ್ತಿರುವ ಅಸ್ತ್ರ ಯಾವುದು?
ರಷ್ಯಾ ಕಡೆಯಿಂದ ಹಾರಿ ಬರುವ ಡ್ರೋನ್‌ಗಳನ್ನ ಗುರಿಯಾಗಿಸಿಕೊಂಡು ಯಾಕ್-52 ವಿಮಾನಗಳನ್ನ ಹಾರಿಸುತ್ತಿರುವ ಉಕ್ರೇನ್ ಮಿಲಿಟರಿ, ಅವುಗಳನ್ನ ಹೊಡೆದು ಉರುಳಿಸುತ್ತಿದೆ. ತಜ್ಞ ಪೈಲಟ್ ಮೂಲಕ ಯಾಕ್-52 ವಿಮಾನ ಹಾರಿಸಿ ಶಾಟ್ ಗನ್ ಬಳಸಿ ಅಟ್ಯಾಕ್ ಮಾಡಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಡ್ರೋನ್‌ಗಳಿಗೆ ವಿಮಾನ ತಾಗಿಸುವ ಮೂಲಕ ಕೂಡ ಶತ್ರು ಪಡೆಗೆ ಉಕ್ರೇನ್ ಇದೀಗ ಶಾಕ್ ಮೇಲೆ ಶಾಕ್ ಕೊಡುತ್ತಿದೆ.












Click it and Unblock the Notifications