ಹಾಂಗ್ ಕಾಂಗ್; ವಂದೇ ಭಾರತ್ ಮಿಷನ್ ವಿಮಾನಗಳಿಗೆ ನಿರ್ಬಂಧ
ಹಾಂಗ್ ಕಾಂಗ್, ಆಗಸ್ಟ್ 18 : ಹಾಂಗ್ ಕಾಂಗ್ ಭಾರತದ 'ವಂದೇ ಭಾರತ್ ಮಿಷನ್' ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದೆ. ಕೋವಿಡ್ 19 ಕಾರಣಕ್ಕೆ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಭಾರತ ಸರ್ಕಾರ ಕೈಗೊಂಡ ಬೃಹತ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್.
Recommended Video
ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾದ ವಿಮಾನಗಳು ಹಾರಾಟ ನಡೆಸುತ್ತವೆ. ಹಾಂಗ್ ಕಾಂಗ್ ಏರ್ ಇಂಡಿಯಾ ವಿಮಾನಗಳು ಹಾಂಗ್ ಕಾಂಗ್‌ಗೆ ಆಗಮಿಸುವುದು ಮತ್ತು ಅಲ್ಲಿಂದ ನಿರ್ಗಮಿಸುವುದಕ್ಕೆ ನಿರ್ಬಂಧ ಹಾಕಿದೆ.

ಕೋವಿಡ್ 19 ಮಾರ್ಗಸೂಚಿಗಳ ಪಾಲನೆಗಾಗಿ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಹಾಂಗ್ ಕಾಂಗ್‌ನಿಂದ ಭಾರತೀಯರನ್ನು ಕರೆತರುವ ಪ್ರಕ್ರಿಯೆಯನ್ನು ಸದ್ಯಕ್ಕೆ ಏರ್ ಇಂಡಿಯಾ ಸ್ಥಗಿತಗೊಳಿಸುತ್ತಿದೆ.
ಕೋವಿಡ್ ಭೀತಿಯ ಸಂದರ್ಭದಲ್ಲಿ ಭಾರತ ಸರ್ಕಾರ ಕೈಗೊಂಡ ವಂದೇ ಭಾರತ್ ಮಿಷನ್ ವಿಶ್ವಮಟ್ಟದಲ್ಲಿ ಕಳೆದ 30 ವರ್ಷಗಳಲ್ಲಿ ನಡೆದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆಯಾಗಿದೆ. ಕೇಂದ್ರ ವಿದೇಶಾಂಗ ಇಲಾಖೆಯ ಮಾಹಿತಿಯಂತೆ ಇದುವರೆಗೂ ವಿವಿಧ ದೇಶಗಳಲ್ಲಿ ಸಿಲುಕಿದ್ದ 9.5 ಲಕ್ಷ ಭಾರತೀಯರು ಈ ಕಾರ್ಯಚರಣೆ ಮೂಲಕ ವಾಪಸ್ ಆಗಿದ್ದಾರೆ.
ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆಗ ವಿಮಾನಗಳ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತು. ವಿದೇಶದಲ್ಲಿದ್ದ ಭಾರತೀಯರು ದೇಶಕ್ಕೆ ವಾಪಸ್ ಆಗಲು ಕಷ್ಟ ಉಂಟಾಯಿತು.
ಏರ್ ಇಂಡಿಯಾ ವಿಮಾನಗಳ ಮೂಲಕ ಭಾರತ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆ ಆರಂಭಿಸಿತು. ಅಮೆರಿಕ, ಜರ್ಮನಿ, ಫ್ರಾನ್ಸ್‌ನಲ್ಲಿ ಸಿಲುಕಿದ್ದವರನ್ನು ಮೊದಲು ವಾಪಸ್ ಕರೆಸಲಾಯಿತು. ಬಳಿಕ ಕೆನಡಾ, ಯುಕೆ ಮುಂತಾದ ದೇಶಗಳು ವಂದೇ ಭಾರತ್ ಮಿಷನ್‌ಗೆ ಒಪ್ಪಿಗೆ ನೀಡಿದವು.












Click it and Unblock the Notifications