ಮಧುಚಂದ್ರ ಮರಣ: ಸೆಕ್ಸ್ ನಿರಾಕರಿಸಿದ ದೆವಾನಿ ಕೊಲೆಗಾರನಲ್ಲ
ಕೇಪ್ ಟೌನ್, ಡಿ.8: ಮಧುಚಂದ್ರದ ವೇಳೆ ಸೆಕ್ಸ್ ನಿರಾಕರಿಸಿದ ಬ್ರಿಟಿಷ್ ಇಂಡಿಯನ್ ಉದ್ಯಮಿ ಶಿರೀನ್ ದೆವಾನಿಗೆ ಈಗ ರಿಲೀಫ್ ಸಿಕ್ಕಿದೆ. 2010ರಲ್ಲಿ ಹನಿಮೂನ್ ವೇಳೆಯಲ್ಲಿ ಇಂಡೋ ಸ್ವೀಡಿಷ್ ಪತ್ನಿ ಕೊಲೆ ಸಂಚು ಆರೋಪ ಹೊತ್ತಿದ್ದ ದೆವಾನಿಗೆ ದಕ್ಷಿಣ ಆಫ್ರಿಕಾದ ಕೋರ್ಟ್ ಆರೋಪ ಮುಕ್ತಗೊಳಿಸಿದೆ.
ಹನಿಮೂನ್ ವೇಳೆ ಸೆಕ್ಸ್ ನಿರಾಕರಿಸುತ್ತಾ ಬಂದ ಪತಿ ಶ್ರಿಯನ್ ದೆವಾನಿ, ಸಲಿಂಗಿ ಎಂಬ ಸತ್ಯ ಅನ್ನಿ ದೆವಾನಿಗೆ ಗೊತ್ತಾಗಿತ್ತು. 28ವರ್ಷ ವಯಸ್ಸಿನ ಅನ್ನಿ 34 ವರ್ಷ ವಯಸ್ಸಿನ ಪತಿಯಿಂದ ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಳು. ಅದರೆ, ಅನ್ನಿ ಕೊಲೆಯಾಗಿತ್ತು. ದೆವಾನಿ ತನ್ನ ಗೇ ನೆಟ್ವರ್ಕ್ ಬಳಸಿ ಆಕೆಯನ್ನು ಕೊಲೆ ಮಾಡಿಸಿದ ಆರೋಪ ಹೊತ್ತಿದ್ದ.
ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಟ್ಯಾಕ್ಸಿ ಡ್ರೈವರ್ ಜೋಲಾ ಟಾಂಗೋ ನೀಡಿದ ಹೇಳಿಕೆಗಳು ದೆವಾನಿಯನ್ನು ಆರೋಪಿ ಎಂದು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ವಿಚಾರಣೆ ಆರಂಭದಲ್ಲೇ ದೆವಾನಿ ತಾನು ಬೈ ಸೆಕ್ಸುಯಲ್, ಸಲಿಂಗಿ ವಿಟರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಅದರೆ, ನನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದ. [ಮಧುಚಂದ್ರದಲ್ಲಿ ಮರಣ: ಎನ್ನಾರೈ ಪತ್ನಿ ಕೊಂದ ಗಂಡ ಗೇ]

ಈ ಪ್ರಕರಣದಲ್ಲಿ ಸಹ ಆರೋಪಿಗಳಾದ ಟ್ಯಾಕ್ಸಿ ಚಾಲಕ ಟಾಂಗೋಗೆ 18 ವರ್ಷ ಜೈಲು, ಮಿವಾಮಾಡೊಡಾ ಕ್ವಾಬೆಗೆ 25 ವರ್ಷ ಹಾಗೂ ಜೊಲಿಲೆ ಗೆನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ಗೆನಿ ಜೈಲಿನಲ್ಲೇ ಮೃತಪಟ್ಟಿದ್ದಾನೆ. ಯುಕೆಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಕೇಸ್ ಗಳಲ್ಲಿ ಹಿನ್ನಡೆ ಪಡೆದಿರುವ ದೆವಾನಿಗೆ ಸದ್ಯಕ್ಕೆ ದಕ್ಷಿಣ ಆಫ್ರಿಕಾದ ಕೇಸಿನಿಂದ ಮುಕ್ತಿ ಸಿಕ್ಕಿದ್ದು, ಬ್ರಿಟನ್ನಿಗೆ ಹಾರಬಹುದಾಗಿದೆ.
ಏನಿದು ಪ್ರಕರಣ: ಅನ್ನಿ ಜೊತೆಗೂಡಿ ಕೇಪ್ ಟೌನ್ ನಲ್ಲಿ ಮಧುಚಂದ್ರಕ್ಕೆಂದು ಬಂದಿದ್ದ. ಆದರೆ, ಹೋಗುವಾಗ ಒಬ್ಬನೇ ಇಂಗ್ಲೆಂಡ್ ಗೆ ತೆರಳಿದ್ದ. ಅನ್ನಿ ಸೆಕ್ಸ್ ಮನವಿಯನ್ನು ನಿರಾಕರಿಸಿದ ಶ್ರಿಯಾನಿ ಮುಂಬೈನಲ್ಲಿ ಆರತಕ್ಷತೆ ಆದ ಮೇಲೆ ಇದೆಲ್ಲ ಇಟ್ಟುಕೊಳ್ಳೋಣ ಎಂದಿದ್ದ. ಆದರೆ, ಅನ್ನಿಗೆ ತನ್ನ ಗಂಡ ಆತನ ಸಲಿಂಗಿ ಗೆಳೆಯನಿಗೆ ಕಳಿಸಿದ್ದ ಸರಸ ಸಂದೇಶಗಳು ಸಿಕ್ಕಿಬಿಟ್ಟಿದ್ದವು. ಅನ್ನಿ ತಕ್ಶಣ ವಿಚ್ಛೇದನಕ್ಕೆ ತಯಾರಿ ನಡೆಸಿದ್ದಳು. ಅದರೆ, ಮರುದಿನವೇ ಅನ್ನಿ ಕೊಲೆ ನಡೆದಿತ್ತು. (ಪಿಟಿಐ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications