ಇಸ್ರೇಲ್ ಜೊತೆ ಶಾಂತಿ ಒಪ್ಪಂದಕ್ಕೆ ಹಿಜ್ಬುಲ್ಲಾ ನಿರ್ಧಾರ?
ಇಸ್ರೇಲ್ & ಮಧ್ಯಪ್ರಾಚ್ಯ ಭಾಗದ ಇತರ ದೇಶಗಳ ನಡುವೆ ಘೋರ ಯುದ್ಧ ನಡೆಯುತ್ತಿದ್ದು, ಆತಂಕದ ವಾತಾವರಣ ನಿರ್ಮಾಣ ಆಗಿದೆ. ಇಸ್ರೇಲ್ & ಗಾಜಾ ಪಟ್ಟಿ ನಡುವೆ ಶುರುವಾಗಿದ್ದ ಯುದ್ಧ ನಂತರ ಇಸ್ರೇಲ್ & ಲೆಬನಾನ್ ನಡುವೆ ಕೂಡ ಬೆಂಕಿ ಹೊತ್ತಿಸಿ, ಇಸ್ರೇಲ್ & ಸಿರಿಯಾ ಮಧ್ಯೆ ಕೂಡ ಕಿರಿಕ್ ತಂದಿದೆ. ಇನ್ನೊಂದು ಕಡೆ ಇರಾನ್ ಕೂಡ ಇಸ್ರೇಲ್ ವಿರುದ್ಧ ಇದೀಗ ಭೀಕರ ಕಾಳಗಕ್ಕೆ ಕಾದು ಕುಳಿತಿದೆ. ಆದರೆ ಇಂತಹ ಸಮಯದಲ್ಲೇ ಲೆಬನಾನ್ ನೆಲದಲ್ಲಿರುವ ಹಿಜ್ಬುಲ್ಲಾ ಮುಖ್ಯಸ್ಥ ಇಸ್ರೇಲ್ ಸೇನೆಗೆ ಶಾಂತಿ ಸಂದೇಶ ಕಳುಹಿಸಿದ್ದಾನೆ.
ಇಸ್ರೇಲ್ ಮಿಲಿಟರಿ & ಹಿಜ್ಬುಲ್ಲಾ ನಡುವೆ ಬೆಂಕಿ ಹೊತ್ತಿಕೊಂಡ ಕಾರಣಕ್ಕೆ ಲೆಬನಾನ್ ಈಗ ಅಕ್ಷರಶಃ ನರಕವಾಗಿ ಮಾರ್ಪಾಡು ಆಗುತ್ತಿದೆ. ಇಸ್ರೇಲ್ ಸೇನೆ ಲೆಬನಾನ್ ದೇಶದ ರಾಜಧಾನಿ ಸೇರಿದಂತೆ, ಲೆಬನಾನ್‌ನ ವಿವಿಧ ನಗರಗಳಲ್ಲಿ ಒಂದೊಂದು ಕಟ್ಟಡವನ್ನ ಕೂಡ ಟಾರ್ಗೆಟ್ ಮಾಡುತ್ತಾ ದಾಳಿ ಮಾಡುತ್ತಿದೆ. ಹಾಗೇ ಹಿಜ್ಬುಲ್ಲಾ ಬಂಡುಕೋರರ ಮುಖ್ಯಸ್ಥನ ಜೀವವನ್ನ ಕೂಡ ತೆಗೆದಿದೆ. ಈ ನಡುವೆ ಹಿಜ್ಬುಲ್ಲಾ ಬಂಡುಕೋರರ ಗುಂಪಿಗೆ ಹೊಸ ಮುಖ್ಯಸ್ಥನ ಎಂಟ್ರಿ ಆಗಿದ್ದು, ಇಸ್ರೇಲ್ ಜೊತೆಗೆ ಶಾಂತಿ ಮಾತುಕತೆಯ ಬಗ್ಗೆ ಪರೋಕ್ಷವಾಗಿ ಇದೀಗ ಮುನ್ಸೂಚನೆ ಸಿಕ್ಕಿದೆ.

ಹೊಸ ಮುಖಸ್ಥನ ಹೊಸ ಪ್ಲಾನ್!
ಹೌದು, ಇಸ್ರೇಲ್ ಮಿಲಿಟರಿ ಇತ್ತೀಚೆಗೆ ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ ಮಾಡಿತ್ತು. ಆ ನಂತರ ಲೆಬನಾನ್ & ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ ವಿರುದ್ಧ ಭಾರಿ ಆಕ್ರೋಶ ಮೊಳಗಿತ್ತು. ಅದರಲ್ಲೂ ಹಿಜ್ಬುಲ್ಲಾ ಬಂಡುಕೋರರಿಗೆ ಹೊಸ ಮುಖಸ್ಥನ ಆಯ್ಕೆ ಆಗಿದ್ದು, ಇದೀಗ ಹಿಜ್ಬುಲ್ಲಾ ಬಂಡುಕೋರರ ಹೊಸ ಮುಖ್ಯಸ್ಥ ಮಹತ್ವದ ಹೇಳಿಕೆ ನೀಡಿರುವುದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಲೆಬನಾನ್ ನೆಲದಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆ ಮಾಡುತ್ತಿದ್ದು, ಇದಕ್ಕೆ ಬ್ರೇಕ್ ಬೀಳುತ್ತಾ?
ಲೆಬನಾನ್ ಯುದ್ಧ ನಿಂತು ಹೋಗುತ್ತಾ?
ಹಿಜ್ಬುಲ್ಲಾ ಬಂಡುಕೋರರ ಹೊಸ ಮುಖಸ್ಥ ನಯೀಮ್ ಖಾಸಿಂ ಇದೀಗ ಇಸ್ರೇಲ್ ಜೊತೆಯಲ್ಲಿ ಸಂಧಾನದ ಮುನ್ಸೂಚನೆ ನೀಡಿದ್ದು, ಇಸ್ರೇಲ್ ಒಪ್ಪಿಗೆಗೆ ಕಾಯಲಾಗುತ್ತಿದೆ. ಸೂಕ್ತವಾಗಿರುವ ಷರತ್ತು ಹಾಕಿಕೊಂಡು ಇಸ್ರೇಲ್‌ನ ಜೊತೆಯಲ್ಲಿ ಕದನ ವಿರಾಮಕ್ಕೆ ಹಿಜ್ಬುಲ್ಲಾ ಸಿದ್ಧವಾಗಿದೆ ಎಂದು ನಯೀಮ್ ಖಾಸಿಂ ತಿಳಿಸಿದ್ದು, ಇಸ್ರೇಲ್ ಸೇನೆಯ ನಿರ್ಧಾರದ ಬಗ್ಗೆ ಕುತೂಹಲ ಕೂಡ ಮೂಡಿದೆ. ಅಲ್ಲದೆ ಇಸ್ರೇಲ್ ತನ್ನ ದಾಳಿ ನಿಲ್ಲಿಸಲು ನಿರ್ಧಾರ ಮಾಡಿದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿದ್ದು, ಆದರೆ ಸೂಕ್ತವಾದ ಷರುತ್ತು ಅಗತ್ಯ ಎಂದು ಕೂಡ ಹಿಜ್ಬುಲ್ಲಾ ನೂತನ ಮುಖ್ಯಸ್ಥ ನಯೀಮ್ ಖಾಸಿಂ ಹೇಳಿರುವುದು ಗಮನ ಸೆಳೆದಿದೆ.












Click it and Unblock the Notifications