Get Updates
Get notified of breaking news, exclusive insights, and must-see stories!

Rain: ಒಂದೆಡೆ ದಾರಾಕಾರ ಮಳೆ, ಮತ್ತೊಂದೆಡೆ ಬರಗಾಲ, ಹಿಮಪಾತ: ಪ್ರಕೃತಿಯಲ್ಲಿ ಏನಾಗುತ್ತಿದೆ?

ಒಂದೆಡೆ ದಾರಾಕಾರ ಮಳೆ, ಮತ್ತೊಂದೆಡೆ ಬರಗಾಲ, ಇನ್ನೊಂದೆಡೆ ಹಿಮಪಾತ ಹೀಗೆ ಪ್ರಕೃತಿಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದಾಗಿ ಜೀವ ಸಂಕುಲ ಪ್ರಾಣ ಕಳೆದುಕೊಳ್ಳುವ ಹಂತ ತಲುಪಿದೆ. ಹಾಗಾದರೆ ಯಾವೆಲ್ಲಾ ಭಾಗದಲ್ಲಿ ಹವಮಾನ ಸ್ಥಿತಿಗತಿ ಹೇಗಿದೆ ಅನ್ನೋದನ್ನು ತಿಳಿಯೋಣ.

ಹಿಂದೆ ಒಂದು ಕಾಲವಿತ್ತು. ಎಷ್ಟೇ ಬೇಸಿಗೆ ಬಿಸಿಲು ಇದ್ದರೂ, ಆಗಾಗ ಮಳೆಯಾಗಿ ಬೇಸಿಗೆ ಬಿಸಿಲಿನ ಪರಿವಾಗುತ್ತಿರಲಿಲ್ಲ. ಆದರೀಗ ಕಾಲ ಬದಲಾಗಿ ಹೋಗಿದೆ. ಬಿಸಿಲ ಬಿಸಿ ಎಷ್ಟೇ ನೆತ್ತಿ ಸುಟ್ಟರು ಮಳೆ ಮಾತ್ರ ಕಾಣಿಸುತ್ತಲೇ ಇಲ್ಲ. ಇದು ಪ್ರಕೃತಿಯಲ್ಲಿ ಆದ ಬಹುದೊಡ್ಡ ಬದಲಾವಣೆಯಾಗಿದೆ. ಇದರಿಂದಾಗಿ ಜೀವ ಸಂಕುಲ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ.

Heavy Rains in Pakistan s Balochistan Here is the rain information of many Indian states including Karnataka

ಹಲವೆಡೆ ತೀವ್ರ ಬಿಸಿಲಿನಿಂದಾಗಿ ಭೂಮಿ ನೀರಿಲ್ಲದೆ ಬರಿದಾಗಿ ಹೋಗಿದೆ. ಕೆರೆ, ಜಲಾಶಯಗಳು ಬತ್ತಿ ಪ್ರಾಣಿ ಪಕ್ಷಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಅದಲ್ಲದೇ ಜನ ಸಾಮಾನ್ಯರು ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಹವಾಮಾನ ಇಲಾಖೆ ಮಳೆಯಾಗುವ ಮುನ್ಸೂಚನೆ ನೀಡಿದರೂ ಆ ದಿನ ಮಳೆಯಾಗುತ್ತಿಲ್ಲ. ಇದರಿಂದಾಗಿ ಜನರಿಗೆ ಮುಂದಿನ ದಿನಗಳ ಬಗ್ಗೆ ಆತಂಕ ಶುರುವಾಗಿದೆ.

ವಿರ್ಯಾಸ ಅಂದರೆ ಕೆಲ ದೇಶಗಳಲ್ಲಿ ದಾರಾಕಾರ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ತೀವ್ರ ಹಿಮಪಾತವಾಗುತ್ತಿದೆ. ಹಾಗಾದರೆ ಯಾವ ದೇಶದಲ್ಲಿ ಮಳೆಯಾಗುತ್ತಿದೆ? ಭಾರತದಲ್ಲಿ ಮಳೆಯ ಸ್ಥಿತಿಗತಿ ಹೇಗಿದೆ? ಕರ್ನಾಟಕದಲ್ಲಿ ಮಳೆ ಆಗುತ್ತಾ? ಎಲ್ಲೆಲ್ಲಿ ಹಿಮಪಾತವಾಗುತ್ತಿದೆ ಎಂದು ತಿಳಿಯೋಣ.

Heavy Rains in Pakistan s Balochistan Here is the rain information of many Indian states including Karnataka


ಏಪ್ರಿಲ್ 29ರಿಂದ ಮೇ3ರವರೆಗೆ ಕರ್ನಾಟಕದಲ್ಲಿ ಮಳೆ:

ಕರ್ನಾಟಕದಲ್ಲಿ ಮಳೆ ಅಭಾವದಿಂದಾಗಿ ಜನ ಕಂಗಾಲಾಗಿದ್ದಾರೆ. ಚಿತ್ರದುರ್ಗ, ಬೆಳಗಾವಿ, ಬೆಂಗಳೂರು ನಗರ, ವಿಜಯಪುರ, ಹಾಸನ, ರಾಯಚೂರು, ಬಳ್ಳಾರಿ, ಬೀದರ್, ಕಲಬುರಗಿ, ದಾವಣಗೆರೆ, ಬೀದರ್, ಯಾದಗಿರಿ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ, ಮಂಡ್ಯ ಸೇರಿದಂತೆ ಒಟ್ಟು ಹನ್ನೊಂದು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳಲಿದೆ ಎಂದು ಮಾಹಿತಿ ನೀಡಲಾಗಿದೆ.

ರಾಯಚೂರು, ಬಳ್ಳಾರಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಚಿಕ್ಕಬಳ್ಳಾಪುರ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೊಡಗು, ಬೆಂಗಳೂರು ಜಿಲ್ಲೆಗಳಲ್ಲಿ ಮೇ 1 ರಂದು ಮಳೆಯಾಗಲಿದೆ. ಇನ್ನೂ ಯಾದಗಿರಿ, ಮಂಡ್ಯ, ಮೈಸೂರು, ಬಾಗಲಕೋಟೆ, ಬೀದರ್, ಕೊಪ್ಪಳ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಚಿತ್ರದುರ್ಗ, ಕೋಲಾರ, ಮೈಸೂರು, ವಿಜಯನಗರ ಜಿಲ್ಲೆಗಳಲ್ಲಿ ಮೇ 2ರಂದು ಅಧಿಕ ಮಳೆಯಾಗಲಿದೆ.

Heavy Rains in Pakistan s Balochistan Here is the rain information of many Indian states including Karnataka


ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಮಳೆ

ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳ ಮಳೆ ಮಾಹಿತಿ ಗಮನಿಸುವುದಾದರೆ ಶಿವಮೊಗ್ಗ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ ಮಳೆ ಪಕ್ಕಾ ಆಗಿದೆ.ಅದೇ ರೀತಿ ಕರಾವಳಿ ಪ್ರದೇಶ ಹೊಂದಿರುವ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೇಶದ ಹಲವೆಡೆ IMD ಯ ಮಳೆ ಮುನ್ಸೂಚನೆ:

ಮಂಗಳವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರ ಮತ್ತು ತಮಿಳುನಾಡಿನಲ್ಲಿ ಗುಡುಗು ಸಹಿತ ಲಘು ಮಳೆಯಾಗಲಿದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.

Heavy Rains in Pakistan s Balochistan Here is the rain information of many Indian states including Karnataka

ಮಧ್ಯಪ್ರದೇಶ, ಮಹಾರಾಷ್ಟ್ರದ ವಿದರ್ಭ ಪ್ರದೇಶ ಮತ್ತು ಉತ್ತರ ತೆಲಂಗಾಣದಲ್ಲಿ ಮಂಗಳವಾರ ಬೆಳಗಿನ ಜಾವದಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಪೂರ್ವ ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ.

ಹೆಚ್ಚುವರಿಯಾಗಿ ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಗುಡುಗು ಮತ್ತು ಆಲಿಕಲ್ಲುಗಳೊಂದಿಗೆ ಮಧ್ಯಂತರ ಮಳೆ ಸುರಿಯಲಿದೆ. ಜೊತೆಗೆ ಅಟಲ್ ಟನಲ್-ರೋಹ್ತಾಂಗ್ ಪಾಸ್, ಲೋಸರ್ ಮತ್ತು ದರ್ಚಾ-ಸರ್ಚು ಸೇರಿದಂತೆ 60 ಕ್ಕೂ ಹೆಚ್ಚು ರಸ್ತೆಗಳು ಹಿಮಪಾತದಿಂದಾಗಿ ಮುಚ್ಚಲ್ಪಟ್ಟಿವೆ. ಗುಡ್ಡಗಾಡು ಪ್ರದೇಶದಲ್ಲಿ ಮಂಗಳವಾರದಂದು ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

ಪಾಕಿಸ್ತಾನದಲ್ಲಿ ದಾರಾಕಾರ ಮಳೆ:

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಕಳೆದ ಹಲವು ದಿನಗಳಿಂದ ದಾರಾಕಾರವಾಗಿ ಮಳೆಯಾಗುತ್ತಿದೆ. ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲ ದಿನಗಳಿಂದ ಗುಡುಗು, ಮಿಂಚು, ತೀವ್ರ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಇದರಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸಾವಿನ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

ಭಾರೀ ಮಳೆ ಮತ್ತು ಚಂಡಮಾರುತದಿಂದಾಗಿ ರಾಜಧಾನಿ ಕ್ವೆಟ್ಟಾ ಸೇರಿದಂತೆ ಬಲೂಚಿಸ್ತಾನ್ ಪ್ರಾಂತ್ಯದ ಹಲವು ಜಿಲ್ಲೆಗಳು ಶನಿವಾರ ಹಠಾತ್ ಪ್ರವಾಹವನ್ನು ಎದುರಿಸಿವೆ. ಹಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿಯೂ ಉಂಟಾಗಿದೆ. ಇಲಾಖೆ ಪ್ರಕಟಣೆಯಲ್ಲಿ, "ಮಳೆ, ಚಂಡಮಾರುತ ಮತ್ತು ಆಲಿಕಲ್ಲು ಮಳೆಯಿಂದಾಗಿ ಇದುವರೆಗೆ ಸತ್ತವರ ಸಂಖ್ಯೆ 22 ಕ್ಕೆ ಏರಿದೆ. ಕಳೆದ 48 ಗಂಟೆಗಳಲ್ಲಿ ಈ ಸಾವುಗಳು ಸಂಭವಿಸಿವೆ.

ಕ್ವೆಟ್ಟಾ ಕಣಿವೆಯಲ್ಲಿ ಶನಿವಾರ ಭಾರೀ ಮಳೆ, ಬಿರುಗಾಳಿ ಮತ್ತು ಆಲಿಕಲ್ಲು ಮಳೆ ಸುರಿದಿದ್ದು, ಪ್ರಮುಖ ರಸ್ತೆಗಳು ಮತ್ತು ಬೀದಿಗಳು ಜಲಾವೃತಗೊಂಡಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. "ಹಠಾತ್ ಪ್ರವಾಹದಲ್ಲಿ ಅನೇಕ ಮನೆಗಳು ಕೊಚ್ಚಿಹೋಗಿವೆ. ನಗರಗಳು ಮತ್ತು ಪಟ್ಟಣಗಳಲ್ಲಿ ಮತ್ತು ಮುಖ್ಯ ಹೆದ್ದಾರಿಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ" ಎಂದು ಅಧಿಕಾರಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+