ಪಾಕ್ ಚುನಾವಣೆ : ಇಸ್ಲಾಮಿಕ್ ಪಕ್ಷಗಳನ್ನು ತಿರಸ್ಕರಿಸಿದ ಜನರು!

ಇಸ್ಲಾಮಾಬಾದ್, ಜುಲೈ 26 : ಪಾಕಿಸ್ತಾನದ ಸಂಸತ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಮುನ್ನಡೆ ಕಾಯ್ದೆಕೊಂಡಿದೆ. ದೇಶದ ಜನರು ಚುನಾವಣೆಯಲ್ಲಿ ಇಸ್ಲಾಮಿಕ್ ಪಕ್ಷಗಳನ್ನು ತಿರಸ್ಕರಿಸಿದ್ದಾರೆ.

ಚುನಾವಣೆಯಲ್ಲಿ ಉಗ್ರ ಹಫೀಜ್​ ಸಯೀದ್​ ಬೆಂಬಲವಿರುವ ಅಲ್ಲಾಹ್‌-ಒ-ತಕಬೀರ್‌ ಪಕ್ಷದ ಅಭ್ಯರ್ಥಿಗಳನ್ನು ಜನರು ತಿರಸ್ಕಾರ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಪಡೆದಿಲ್ಲ. ಕನಿಷ್ಠ 2ನೇ ಸ್ಥಾನದಲ್ಲಿಯೂ ಇಲ್ಲ.

50 ಕ್ಷೇತ್ರಗಳಲ್ಲಿ ಅಲ್ಲಾಹ್‌-ಒ-ತಕಬೀರ್‌ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ, ಪಕ್ಷ ಹೀನಾಯವಾಗಿ ಸೋಲು ಕಂಡಿದೆ. ಹಫೀಜ್​ ಸಯೀದ್ ಮುಂಬೈನ 26/11 ದಾಳಿಯ ಪ್ರಮುಖ ರೂವಾರಿಯಾಗಿದ್ದಾನೆ. ಇಸ್ಲಾಮಿಕ್ ತತ್ವಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ ಹಫೀಜ್‌ಗೆ ಹಿನ್ನಡೆಯಾಗಿದೆ.

Has Pakistan rejected Islamist parties, not entirely

ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್-ತೇಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಜನರು ಬೆಂಬಲ ನೀಡಿದ್ದಾರೆ. ಚುನಾವಣೆಯಲ್ಲಿ ಪಿಟಿಐ 119 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಹುಮತ ಪಡೆಯಲು 137 ಸೀಟುಗಳನ್ನು ಗೆಲ್ಲಬೇಕಿದೆ.

ಜನರು ಈ ಬಾರಿಯ ಚುನಾವಣೆಯಲ್ಲಿ ಮುತ್ತಾಹಿದ್ ಮಜ್ಲೀಸ್-ಎ-ಅಮಾಲ್ (ಎಂಎಂಎ) ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಫಜಲುರ್ ರೆಹಮಾನ್ ನೇತೃತ್ವದ ಪಕ್ಷವಿದಾಗಿದ್ದು, ಬಹುಮತ ಪಡೆಯಲು ಪಿಟಿಐಗೆ ಬೆಂಬಲ ನೀಡಲಿದೆ. ಈಗಾಗಲೇ ರೆಹಮಾನ್ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+