ಸಿಡ್ನಿ ಉಗ್ರರ ದಾಳಿ : ಕ್ಷಣ-ಕ್ಷಣದ ಮಾಹಿತಿ
ಸಿಡ್ನಿ, ಡಿ.15 : ಸಿಡ್ನಿಯಲ್ಲಿ ಉಗ್ರರು ದಾಳಿ ಮಾಡಿರುವ ಕಾಫಿಶಾಪ್‌ನಲ್ಲಿ ಭಾರತೀಯರೊಬ್ಬರು ಸಿಲುಕಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ ಮೂಲದ ವಿಶ್ವಕಾಂತ್ ರೆಡ್ಡಿ ಉಗ್ರರ ಬಳಿ ಒತ್ತೆಯಾಳಾಗಿದ್ದಾರೆ. ಇನ್ಫೋಸಿಸ್ ಸಹ ಇದನ್ನು ಖಚಿತಪಡಿಸಿದೆ.
ಸಮಯ 1 ಗಂಟೆ : ಸಿಡ್ನಿಯಲ್ಲಿರುವ ಕಾಫಿಶಾಪ್‌ಗೆ ಉಗ್ರರು ಬಾಂಬ್ ಇಟ್ಟಿದ್ದಾರೆ ಎಂದು ಉಗ್ರರ ಕೈಯಿಂದ ತಪ್ಪಿಸಿಕೊಂಡು ಬಂದ ಮಹಿಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಜೊತೆ ಮಾತನಾಡಲೇಬೇಕು ಎಂದು ಉಗ್ರರು ಪಟ್ಟು ಹಿಡಿದಿದ್ದು, ಪೊಲೀಸರು ಉಗ್ರರೊಂದಿಗೆ ಮಾತುಕತೆ ನಡೆಸಿದ್ದಾರೆ. [ಉಗ್ರರ ವಶದಲ್ಲಿ ಇನ್ಫೋಸಿಸ್ ಉದ್ಯೋಗಿ]
12 ಗಂಟೆ : ಸಿಡ್ನಿಯಲ್ಲಿ ಉಗ್ರರ ಒತ್ತಯಾಳಾಗಿದ್ದ ಇಬ್ಬರು ಮಹಿಳೆಯರು ಕಾಫಿಶಾಪ್‌ನಿಂದ ತಪ್ಪಿಸಿಕೊಂಡಿದ್ದು, ಪೊಲೀಸರ ಬಳಿ ಓಡಿ ಬಂದಿದ್ದಾರೆ.
UPDATE: A total of five hostages have fled the Lindt building in the dramatic #siege in #MartinPlace. #9News pic.twitter.com/wkPfJWlEof
— Nine News Sydney (@9NewsSyd) December 15, 2014 ಸಮಯ 11.30 : ಸಿಡ್ನಿಯಲ್ಲಿ ಉಗ್ರರ ದಾಳಿ ನಡೆದಿರುವ ಹಿನ್ನಲೆಯಲ್ಲಿ ಬಿಸಿಸಿಐ ಆಸಿಸಿ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದ್ದು, ಭಾರತೀಯ ಆಟಗಾರರಿಗೆ ನೀಡಿರುವ ರಕ್ಷಣೆ ಕುರಿತು ಮಾಹಿತಿ ಸಂಗ್ರಹಿಸಿದೆ. ಆಟಗಾರರಿರುವ ಹೋಟೆಲ್‌ಗೆ ಅಗತ್ಯ ಭದ್ರತೆ ನೀಡಲಾಗಿದೆ ಎಂದು ಆಸಿಸಿ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ತಿಳಿಸಿದೆ.

ಸಮು 11 ಗಂಟೆ : ಸಿಡ್ನಿ ಕಾಫಿಶಾಪ್‌ನಲ್ಲಿ ಉಗ್ರ ಕೈಗೆ ಸಿಲುಕಿದ್ದ ಇಬ್ಬರು ಗ್ರಾಹಕರು ಮತ್ತು ಒಬ್ಬ ಕಾಫಿಶಾಪ್ ನೌಕರ ತಪ್ಪಿಸಿಕೊಂಡು ಬಂದಿದ್ದಾರೆ.
Hostage situation ongoing in Sydney business district.LIVE: http://t.co/j1ljDbazOwUPDATES: http://t.co/PD7pVfU9pQ pic.twitter.com/KHoDrDWaeV
— ABC News (@ABC) December 15, 2014 ಸಮಯ 10.45 : ಸಿಡ್ನಿಯಲ್ಲಿನ ಕಾಫಿಶಾಪ್‌ಗೆ ನುಗ್ಗಿ ಉಗ್ರರು 15ಕ್ಕೂ ಹೆಚ್ಚು ಜನರನ್ನು ಒತ್ತೆಯಾಗಿರಿಸಿಕೊಂಡಿದ್ದರು. ಸದ್ಯ ಮೂವರು ಉಗ್ರರಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಉಗ್ರರು ಮತ್ತು ಸಂಧಾನಕಾರರ ನಡುವೆ ಮಾತುಕತೆ ಮುಂದುವರೆದಿದೆ.

ಬೆಳಗ್ಗೆ 10 ಗಂಟೆ : ಸಿಡ್ನಿಯಲ್ಲಿನ ಕಾಫಿಶಾಪ್‌ಗೆ ಉಗ್ರರು ನುಗ್ಗಿ ಅಮಾಯಕ ಜನರನ್ನು ಹಿಡಿದಿಟ್ಟುಕೊಂಡಿರುವ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಮೋದಿ ಎಲ್ಲರ ಸುರಕ್ಷಿತ ಬಿಡುಗಡೆಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
The incident in Sydney is disturbing. Such acts are inhuman & deeply unfortunate. I pray for everyone's safety.
— Narendra Modi (@narendramodi) December 15, 2014 ಹಿಂದಿನ ಸುದ್ದಿ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಕಾಫಿಶಾಪ್‌ಗೆ ನುಗ್ಗಿರುವ ಉಗ್ರರು 13 ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಉಗ್ರರು ಪ್ರಧಾನಿ ಜೊತೆ ಮಾತುಕತೆ ನಡೆಸಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಪೊಲೀಸರು ಕಾಫಿಶಾಪ್ ಸುತ್ತುವರೆದಿದ್ದಾರೆ.
ಐಎಸ್‌ಸಿಎಸ್ ಉಗ್ರರು ಕಾಫಿಶಾಪ್‌ಗೆ ನುಗ್ಗಿ ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆಸ್ಟ್ರೇಲಿಯಾದ ಕಾಲಮಾನ ಬೆಳಗ್ಗೆ 9.45ಕ್ಕೆ ಈ ದಾಳಿ ನಡೆದಿದ್ದು, ಒಟ್ಟು 13 ಜನರನ್ನು ಶಸ್ತ್ರಸಜ್ಜಿತ ಉಗ್ರರು ಹಿಡಿದಿಟ್ಟುಕೊಂಡಿದ್ದಾರೆ. ಪೊಲೀಸರು ಕಾಫಿಶಾಪ್ ಸುತ್ತುವರೆದಿದ್ದು, ಉಗ್ರರನ್ನು ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಪತ್ರಿಕಾಗೋಷ್ಠಿ ನಡೆಸಿದ್ದು, ಜನರು ದಾಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಉಗ್ರರು ಪ್ರಧಾನಿ ಜೊತೆ ಮಾತುಕತೆ ನಡೆಸಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಕಾಫಿಶಾಪ್‌ನಲ್ಲಿ ಎಷ್ಟು ಉಗ್ರರಿದ್ದಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.
Sydney hostage situation.LIVE VIDEO: http://t.co/j1ljDbazOwUPDATES: http://t.co/PD7pVfU9pQ pic.twitter.com/nxlnJR1tum
— ABC News (@ABC) December 15, 2014 ಕಾಫಿಶಾಪ್‌ನ ಕಿಟಕಿಗಳಲ್ಲಿ ಅರೆಬಿಕ್ ಭಾಷೆಯಲ್ಲಿ ಬರೆದ ಧ್ವಜಗಳು ಕಾಣಿಸಿಕೊಂಡಿದ್ದು, ಐಎಸ್ಐಎಸ್ ಉಗ್ರ ಸಂಘಟನೆ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಪರ ಕಾರ್ಯ ನಿರ್ವಹಿಸುತ್ತಿದ್ದ ಮೆಹದಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. [ಮೆಹದಿ ಬಿಡುಗಡೆ ಮಾಡಿ, ಐಎಸ್ಐಎಸ್ ಎಚ್ಚರಿಕೆ ಸಂದೇಶ]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications