
ಚೀನಾದಲ್ಲಿ ಲಿಂಗ ತಾರತಮ್ಯ, ಲೈಂಗಿಕ ಕಿರುಕುಳ: ಮಹಿಳಾ ರಕ್ಷಣೆ ಕಾನೂನು ಪರಿಷ್ಕರಣೆ
ಬೀಚಿಂಗ್, ಅ. 27: ಚೀನಾದಲ್ಲಿ ಮೂವತ್ತು ವರ್ಷಗಳ ಬಳಿಕ ಮಹಿಳಾ ರಕ್ಷಣಾ ಕಾನೂನು ಪರಿಷ್ಕರಣೆ ಶಾಸನವನ್ನು ಗುರುವಾರ ಚೀನಾದ ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಕೆಲಸದಲ್ಲಿ ಲಿಂಗ ತಾರತಮ್ಯ ಮತ್ತು ಲೈಂಗಿಕ ಕಿರುಕುಳದ ವಿರುದ್ಧ ಚೀನಾದಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ಉದ್ದೇಶವನ್ನು ಹೊಂದಿರುವ ಶಾಸನವನ್ನು ಸಂಸತ್ತಿಗೆ ಸಲ್ಲಿಸಲಾಗಿದೆ.
ಹಾಂಕಾಂಗ್, ತೈವಾನ್ ಮೇಲೆ ಸಮಗ್ರ ನಿಯಂತ್ರಣ ಸಾಧಿಸಿದ್ದೇವೆ ಎಂದ ಚೀನಾ ಅಧ್ಯಕ್ಷ
ಮಹಿಳೆಯರ ಹಕ್ಕುಗಳಿಗೆ ಹಿನ್ನೆಡೆ ಮತ್ತು ಗರ್ಭಪಾತದ ಕಡೆಗೆ ಹೆಚ್ಚು ನಿರ್ಬಂಧದ ವರ್ತನೆಗಳ ಬಗ್ಗೆ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದರಿಂದ ಪರಿಷ್ಕೃತ ಶಾಸನದ ಕುರಿತು ಹೆಚ್ಚು ಒತ್ತಡ ಮೂಡಿತ್ತು. ಹೀಗಾಗಿ ಚೀನಾ ಸಂಸತ್ತಿನಲ್ಲಿ ಈ ಶಾಸನವನ್ನು ಮಂಡಿಸಲಾಗಿದೆ.
ಪರಿಷ್ಕರಣೆ ಶಾಸನವನ್ನೇನೋ ಮಂಡಿಸಲಾಗಿದೆ. ಆದರೆ, ಹೆಚ್ಚು ಸಂಪ್ರದಾಯವಾದಿ ಧೋರಣೆಗಳು ಪರಿಷ್ಕೃತ ಕಾನೂನಿನಲ್ಲಿ ಎಷ್ಟರ ಮಟ್ಟಿಗೆ ಪ್ರತಿಫಲಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಸುಮಾರು 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ರಕ್ಷಣೆಯ ಕಾನೂನು ಪರಿಷ್ಕರಣೆಯಾಗುತ್ತಿದೆ.
"ಮಹಿಳಾ ಹಕ್ಕುಗಳು ಮತ್ತು ಹಿತಾಸಕ್ತಿಗಳ ಸಂರಕ್ಷಣಾ ಕಾನೂನು" ಕರಡನ್ನು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (NPC) ಸ್ಥಾಯಿ ಸಮಿತಿಗೆ ಸಲ್ಲಿಸಲಾಗಿದೆ ಎಂದು ಅಧಿಕೃತ Xinhua (ಕ್ಸಿನ್ಹುವಾ) ಸುದ್ದಿ ಸಂಸ್ಥೆ ತಿಳಿಸಿದೆ.
ಶಾಸನ ಸಭೇಯಲ್ಲಿ ಮಂಡಿಸಲಾಗಿರುವ ಇತ್ತೀಚಿನ ಕರಡನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿಲ್ಲ. ಆದರೆ, ಹತ್ತಾರು ಜನರು ಶಾಸನದಲ್ಲಿ ಏನನ್ನು ನೋಡಲು ಬಯಸುತ್ತಾರೆ ಎಂಬುದರ ಕುರಿತು ಸಲಹೆಗಳನ್ನು ಕಳುಹಿಸಿದ್ದಾರೆ ಎಂದು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಈ ಕರಡು "ಬಡ ಮಹಿಳೆಯರು, ವೃದ್ಧೆಯರು ಮತ್ತು ಅಂಗವಿಕಲ ಮಹಿಳೆಯರಂತಹ ಅಸಹಾಯಕ ಗುಂಪುಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಯನ್ನು ಬಲಪಡಿಸುತ್ತದೆ" ಎಂದು ಹೇಳಿದೆ.

ಮಹಿಳೆಯರ ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಉಲ್ಲಂಘಿಸಿದರೆ ಉದ್ಯೋಗದಾತರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಳ್ಳಸಾಗಣೆ ಮತ್ತು ಅಪಹರಣಕ್ಕೊಳಗಾದ ಮಹಿಳೆಯರ ರಕ್ಷಣೆಗೆ ಅಡ್ಡಿಯುಂಟುಮಾಡುವ ಸಂದರ್ಭದಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಕಳ್ಳಸಾಗಣೆ ಮತ್ತು ಅಪಹರಣಕ್ಕೊಳಗಾದ ಮಹಿಳೆಯರನ್ನು ರಕ್ಷಿಸುವ ಸ್ಥಳೀಯ ಅಧಿಕಾರಿಗಳ ಜವಾಬ್ದಾರಿಯನ್ನು ಸಹ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದು ಕ್ಸಿನ್ಹುವಾ ಹೇಳಿದೆ.
ಈ ವರ್ಷದ ಆರಂಭದಲ್ಲಿ ಆನ್‌ಲೈನ್‌ನಲ್ಲಿ ವೈರಲ್ ಆದ ಸರಪಳಿಯಲ್ಲಿ ಬಂಧಿತರಾಗಿರುವ ಮಹಿಳೆಯ ಚಿತ್ರ ದೇಶದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಮಾನವ ಕಳ್ಳಸಾಗಣೆಯ ಬಗ್ಗೆ ಆಕ್ರೋಶ ಮತ್ತು ಚರ್ಚೆಯನ್ನು ಉಂಟುಮಾಡಿತ್ತು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಬಹಳ ವರ್ಷಗಳಿಂದ ಇದೆ ಎಂದು ಆರೋಪಿಸಲಾಗಿದೆ.
ಪರಿಷ್ಕರಣೆ ಕರಡು ಶಾಸನವನ್ನು ಕಾನೂನಾಗಿ ಅಂಗೀಕರಿಸಲು ಯಾವುದೇ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ.