Gaza: ಗಾಜಾ ಜನರಿಗೆ ಪ್ರಕೃತಿಯ ಸಂಕಷ್ಟ, ಜೀವ ಉಳಿಸಿಕೊಳ್ಳಲು ಪರದಾಟ...
ಗಾಜಾ ಪಟ್ಟಿಯಲ್ಲಿ ಯುದ್ಧದ ಪರಿಣಾಮ ಜನರ ಬದಕು ಈಗಾಗಲೇ ನರಳಿ ನರಕವಾಗಿ ಹೋಗಿದೆ. ಈ ಸಮಯದಲ್ಲೇ ಪ್ರಾಕೃತಿಕ ವಿಕೋಪ ಕೂಡ ಗಾಜಾ ಪಟ್ಟಿ ನಿವಾಸಿಗಳನ್ನು ಕಾಡುತ್ತಿದೆ. ಹೀಗೆ, ಕಳೆದ ಕೆಲವು ದಿನಗಳಿಂದ ಪ್ರವಾಹದ ಒತ್ತಡಕ್ಕೆ ಸಿಲುಕಿ ಪರದಾಡಿರುವ ಗಾಜಾ ಜನರಿಗೆ ಕನಿಷ್ಠ ಅನ್ನ & ಆಹಾರ ಕೂಡ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಷ್ಟೆಲ್ಲಾ ಒತ್ತಡದ ನಡುವೆ ಇದೀಗ ಪ್ರಾಕೃತಿಕ ವಿಕೋಪದ ಕಾರಣ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿದೆ. ಜಾಗತಿಕವಾಗಿ ಈ ವಿಚಾರ ಮತ್ತೊಮ್ಮೆ ತಲ್ಲಣ ಸೃಷ್ಟಿ ಮಾಡುವ ಜೊತೆಗೆ, ಮಾನವೀಯ ನೆರವು ನೀಡಬೇಕು ಎಂಬ ಒತ್ತಾಯ ಕೂಡ ಶುರುವಾಗಿದೆ.
ಹೌದು, ಗಾಜಾ ಪಟ್ಟಿ ಜನರಿಗೆ ಒಂದಲ್ಲ ಒಂದು ವಿಚಾರಕ್ಕೆ ನೆಮ್ಮದಿ ಹಾರಿ ಹೋಗುತ್ತಿದೆ. ಹೀಗೆ ಒಂದು ಕಡೆ ಭೀಕರ ಹಿಂಸಾಚಾರದ ಕಾರಣಕ್ಕೆ ಸಂಕಷ್ಟ ಎದುರಾಗಿದ್ದರೆ, ಮತ್ತೊಂದು ಕಡೆಯಲ್ಲಿ ಪ್ರಕೃತಿ ಕೂಡ ಗಾಜಾ ಪಟ್ಟಿ ನಿವಾಸಿಗಳ ಪರವಾಗಿ ನಿಂತಿಲ್ಲ. ಹೀಗೆ ಗಾಜಾ ಪಟ್ಟಿ ಮತ್ತೊಮ್ಮೆ, ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಬಂದಿದೆ. ಭಾರಿ ಪ್ರವಾಹ ಉಂಟಾಗಿರುವ ಕಾರಣಕ್ಕೆ ಜನರು ಜೀವನ ಕಟ್ಟಿಕೊಂಡಿದ್ದ ಟೆಂಟ್‌ಗಳು ಹಾರಿ ಹೋಗಿದ್ದು, ಆಹಾರಕ್ಕೆ ಅಂತಾ ಸಂಗ್ರಹ ಮಾಡಿದ್ದ ವಸ್ತುಗಳು ಕೂಡ ನೀರುಪಾಲು ಆಗಿದೆ.

ಗಾಯದ ಮೇಲೆ ಬರೆ...
ಜಗತ್ತಿನ ಒಂದಲ್ಲ ಒಂದು ಭಾಗದಲ್ಲಿ ಪ್ರಾಕೃತಿಕ ವಿಕೋಪಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ. ಪ್ರಕೃತಿ ಮಾತೆ ಮುನಿದರೆ ಮುಂದೆ ಏನಾಗಬಹುದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಗುತ್ತಿದ್ದು, ಈ ವಾತಾವರಣದಲ್ಲಿ ಭೂಮಿ ತಾಯಿಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಾ ಇದೆ. ನೋಡ ನೋಡುತ್ತಿದ್ದಂತೆ ಇಡೀ ಭೂಮಿ ತುಂಬಾ ಮಳೆ, ಬಿಸಿಲು, ನೀರಿಗಾಗಿ ಹಾಹಾಕಾರ ಹೀಗೆ ಸಾವಿರಾರು ಪ್ರಾಕೃತಿಕ ಸಮಸ್ಯೆಗಳು ಎದುರಾಗುತ್ತಿವೆ. ಇದೀಗ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಭೀಕರ ಪ್ರವಾಹ ಎದುರಾಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಯುದ್ಧ ನಿಲ್ಲಿಸುವುದು ಅನುಮಾನ?
ಮತ್ತೊಂದು ಕಡೆ ಹಮಾಸ್ ನಾಯಕರನ್ನು ಸಂಪೂರ್ಣವಾಗಿ ನಾಶ ಮಾಡುವ ತನಕ ಯುದ್ಧಕ್ಕೆ ಬ್ರೇಕ್ ಹಾಕಲ್ಲ ಅಂತಾ ಇದೆ ಇಸ್ರೇಲ್. ಇನ್ನೊಂದು ಕಡೆ ಹಮಾಸ್ ಕೂಡ ಮಾತುಕತೆ ಮೂಲಕ ಈ ಯುದ್ಧ ಹಾಗೂ ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಸಿದ್ಧವಿಲ್ಲ. ಹೀಗಾಗಿ ಗಾಜಾ ಪಟ್ಟಿಯಲ್ಲಿನ ಸಾಮಾನ್ಯ ಜನರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಚಾರವಾಗಿ ಈಗ ದೊಡ್ಡ ಚರ್ಚೆ ಕೂಡ ಶುರುವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೈರೆಕ್ಟ್ ಎಂಟ್ರಿ ಕೊಟ್ಟಿದ್ದರೂ ಗಾಜಾ ಯುದ್ಧ ನಿಲ್ಲದೇ ಇರುವುದು ಹಲವು ರೀತಿಯಲ್ಲಿ ಗೊಂದಲ ಮೂಡಿಸಿದೆ.












Click it and Unblock the Notifications