UK-India Global Forum: ಯುಕೆ ವಾಣಿಜ್ಯ ಅಧಿವೇಶನದಲ್ಲಿ ಸಚಿವ ಪಿಯೂಷ್ ಗೋಲ್, ರೆಹಮಾನ್..
ಬೆಂಗಳೂರು, ಜೂನ್ 19: ಇಂಗ್ಲೆಂಡ್ (ಯುಕೆ) ಹಾಗೂ ಭಾರತ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಜರುಗಿದ ನಂತರ ಯುಕೆ ಹಾಗೂ ಭಾರತದ ಇಬ್ಬರು ಪ್ರಮುಖ ಸಚಿವರು ಮುಖಾಮುಖಿ ಆಗುತ್ತಿದ್ದಾರೆ. ಪ್ರಮುಖ ಒಪ್ಪಂದ ಬಳಿಕ ವಾಣಿಜ್ಯ ಸಚಿವರ ನಡುವಿನ ಮೊದಲ ಜಂಟಿ ಸಾರ್ವಜನಿಕ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಜೂನ್ 20ರವರೆಗೆ 'ಐಜಿಎಫ್ ಲಂಡನ್ 2025' ನಡೆಯಲಿದ್ದು, ಭಾರತದಿಂದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಪಾಲ್ಗೊಂಡಿದ್ದಾರೆ.
ಹೌದು, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇಂಡಿಯಾ ಗ್ಲೋಬಲ್ ಫೋರಂ (ಐಜಿಎಫ್)ನ ಪ್ರಮುಖ ಕಾರ್ಯಕ್ರಮವಾದ ;ಐಜಿಎಫ್ ಲಂಡನ್ 2025' ಈಗಾಗಲೇ ಶುರುವಾಗಿದೆ. ಇದೇ ಜೂನ್ 18ರ ಮಂಗಳವಾರದಿಂದಲೇ ಅಧಿವೇಶನ ಆರಂಭವಾಗಿದ್ದು, ನಾಳೆ ಶುಕ್ರವಾರವರೆಗೆ ಜರುಗಲಿದೆ. ಈ ಅಧಿವೇಶನದಲ್ಲಿ ಯುಕೆ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಜೋನಾಥನ್ ರೆನಾಲ್ಡ್ಸ್ ಹಾಗೂ ಪಿಯುಷ್ ಗೋಯೆಲ್ ಮಧ್ಯ ಮಹತ್ವದ ಸಂವಾದದೊಂದಿಗೆ ಅಧಿವೇಶನ ಆರಂಭವಾಗಿದೆ. ಉನ್ನತ ಮಟ್ಟದ ಚರ್ಚೆಗಳು ಆಗುತ್ತಿವೆ.

ಯುಕೆ ಮತ್ತು ಭಾರತ ಒಪ್ಪಂದವು ಹೊಸ ಆರ್ಥಿಕ ಸಾಮರ್ಥ್ಯ ವೃದ್ಧಿಸುತ್ತದೆ. ಈ ಕುರಿತು ಒಂದಷ್ಟು ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಒಪ್ಪಂದದಡಿ ಎರಡು ಕಡೆ ದ್ವಿಪಕ್ಷೀಯ ಸಹಕಾರದ ಕಾರ್ಯತಂತ್ರದ ದೃಷ್ಟಿಕೋನ ಇರಲಿದ್ದು,ವ್ಯಾಪಾರ, ನಾವೀನ್ಯತೆ ಮತ್ತು ರಾಜತಾಂತ್ರಿಕತೆಯಲ್ಲಿ ಜಾಗತಿಕ ಮಾನದಂಡಗಳ ಪರಿಗಣಿಸುವ ನಿರೀಕ್ಷೆ ಇದೆ.
ಇನ್ನೂ ಇಂಡಿಯಾ ಗ್ಲೋಬಲ್ ಫೋರಂನ ಸಂಸ್ಥಾಪಕ ಮತ್ತು ಅಧ್ಯಕ್ಷ ಮನೋಜ್ ಲಾಡ್ವಾ ಅವರು, ಯುಕೆ-ಭಾರತ ಸಂಬಂಧವು ಈ ಒಪ್ಪಂದ ಮುಖೇನ ಹೊಸ ಯುಗ ಆರಂಭಿಸುತ್ತದೆ. ಯೋಜನೆಗಳನ್ನು ತ್ವರಿತ ಅನುಷ್ಠಾನಕ್ಕೆ ಬದ್ಧವಾಗಿದ್ದೇವೆ. ಎರಡು ದೇಶಗಳ ಮಧ್ಯದ ಮುಕ್ತ ವ್ಯಾಪಾರ ಒಪ್ಪಂದವು ಅಭಿವೃದ್ಧಿಗೆ, ಆರ್ಥಿಕತೆಗೆ ವೇಗ ನೀಡುತ್ತದೆ. ನಮ್ಮ ಪಾಲುದಾರಿಕಗೆಯಿಂದ ವಾಣಿಜ್ಯ ಶಕ್ತಿ, ವಿಚಾರಗಳು ವಿಲೀನಗೊಳ್ಳುತ್ತವೆ ಎಂದರು.
ಒಟ್ಟು ಮೂರು ದಿನಗಳ ಈ ಜಾಗತಿಕ ಅಧಿಕವೇಶವನು ಸಿಐಐ (CII) ಮತ್ತು ಇಂಡಿಯಾ ಗ್ಲೋಬಲ್ ಫೋರಂ ಸಹಯೋಗದಲ್ಲಿ ನಡೆಯುತ್ತಿದೆ. ಯುಕೆಯಲ್ಲಿ ಭಾರತ ಒಡೆತನದ ವ್ಯವಹಾರ, ವ್ಯಾಪಾರಗಳು ವೇಗವಾಗಿ ಬೆಳೆಯುತ್ತವೆ. ಮುಂದಿನ ದಿನಗಳಲ್ಲಿ ಹೂಡಿಕೆ ಪ್ರವೃತ್ತಿ ಹೆಚ್ಚಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications