France Protest: ಫ್ರಾನ್ಸ್ ನೆಲದಲ್ಲೂ ನೇಪಾಳ ರೀತಿ ಪ್ರತಿಭಟನೆ, ಅಧ್ಯಕ್ಷ ಪಟ್ಟಕ್ಕೆ ಕುತ್ತು?
ಪ್ರಪಂಚ ಮತ್ತೊಮ್ಮೆ ಹಿಂಸೆಯ ಕೂಪಕ್ಕೆ ಜಾರುತ್ತಿದೆ, ಎಲ್ಲೆಲ್ಲೂ ಬರೀ ಹಿಂಸೆಯ ವಿಚಾರ ಸದ್ದು ಮಾಡುತ್ತಿದೆ. ಯುರೋಪ್, ಅಮೆರಿಕ ಸೇರಿದಂತೆ ಜಗತ್ತಿನ ಯಾವುದೇ ದೇಶವನ್ನೂ ಬಿಡದೆ ಹೀಗೆ ಪ್ರತಿಭಟನೆಗಳು ಶುರುವಾಗಿವೆ. ಅದರಲ್ಲೂ ಭಾರತದ ನೆರೆಯ ದೇಶ ನೇಪಾಳ ಇದೀಗ ಭಾರಿ ಘೋರ ಪ್ರತಿಭಟನೆ ಹಿನ್ನೆಲೆ ನಲುಗಿ ಹೋಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ವಾತಾವರಣ ಕೂಡ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಫ್ರಾನ್ಸ್ ಕೂಡ ಪ್ರತಿಭಟನೆಯ ಕಿಚ್ಚಿಗೆ ಬಲಿ?
ಹೌದು, ಫ್ರಾನ್ಸ್ ದೇಶದಲ್ಲಿ ಬಲಪಂಥೀಯ & ಎಡಪಂಥೀಯ ಚಳವಳಿಗಳ ತೀವ್ರತೆ ಪರಿಣಾಮ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ವ್ಯಾಪಕ ಪ್ರತಿಭಟನೆಗಳು, ದಂಗೆ ಜೊತೆಗೆ ಪ್ರತಿಭಟನಾಕಾರರ ಅಟ್ಟಹಾಸ ಜೋರಾಗಿದೆ. ಫ್ರಾನ್ಸ್ ಒಂದು ವರ್ಷದಲ್ಲಿ 3ನೇ ಪ್ರಧಾನಿ ಕಾಣುವ ಸ್ಥಿತಿಯೇ ಬಂದಿದ್ದು, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವರ ಸರ್ಕಾರ ನೂರಾರು ಸಮಸ್ಯೆ ಎದುರಿಸುತ್ತಿದೆ. ಈಗ ಅಲ್ಲಿರುವ ವಾತಾವರಣ ನೋಡುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ನೆಲದಲ್ಲೂ ಅರಾಜಕತೆ ಸೃಷ್ಟಿ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್...
2024ರ ಸಮಯದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ತುರ್ತು ಚುನಾವಣೆಗೆ ಆದೇಶ ನೀಡಿದ ನಂತರ ಪರಿಸ್ಥಿತಿ ಕೈಮೀರುತ್ತಾ ಬಂದಿದೆ. ಒಂದು ಕಡೆ ಬಲಪಂಥೀಯ ಪ್ರತಿಭಟನೆ & ಹಾಗೇ ಇನ್ನೊಂದು ಕಡೆ ಎಡಪಂಥೀಯ ಪ್ರತಿಭಟನೆಗಳು ಇದೀಗ ತೀವ್ರವಾಗುತ್ತಿವೆ. ಇದರ ನಡುವೆ ಸಿಲುಕಿ ಮ್ಯಾಕ್ರೋನ್ ಅಪ್ಪಚ್ಚಿಯಾಗಿದ್ದಾರೆ. ಆರ್ಥಿಕ ಸಮಸ್ಯೆಗಳ ನಡುವೆ ಇದೀಗ ರಾಜಕೀಯ ತಿಕ್ಕಾಟ ಕೂಡ ಅಲ್ಲಿನ ಸರ್ಕಾರ ಅಲ್ಲಾಡಿ ಹೋಗುವಂತೆ ಮಾಡಿದೆ. ಹೀಗೆ ಈ ಪರಿಸ್ಥಿತಿ ಮುಂದುವರಿದರೆ ಫ್ರಾನ್ಸ್ ಕೂಡ ನೇಪಾಳ ರೀತಿ ಆಗುತ್ತಾ ಅನ್ನೋ ಆತಂಕ ಇದೀಗ ಯುರೋಪ್ ಭಾಗದಲ್ಲಿ ಆವರಿಸಿದೆ.
ಭಾರತದ ನೆರೆಯ ದೇಶದಲ್ಲೂ ಕಿರಿಕ್
ಫ್ರಾನ್ಸ್ ಮಾತ್ರವಲ್ಲ ಭಾರತದ ನೆರೆಯ ದೇಶವಾದ ನೇಪಾಳ ನೆಲದಲ್ಲೂ ಹಿಂಸಾಚಾರ ನಡೆದಿದೆ. ನೇಪಾಳ ಪ್ರತಿಭಟನೆ ಹೇಗಿದೆ ಅಂದ್ರೆ, ನೇಪಾಳದ ಸಂಸತ್ ಕಟ್ಟಡಕ್ಕೂ ಬೆಂಕಿಯನ್ನ ಹಚ್ಚಲಾಗಿದೆ. ಹೌದು, ನೇಪಾಳದಲ್ಲಿ ಶುರುವಾಗಿರುವ ಹೋರಾಟದ ಬೆಂಕಿ ಈಗ ಇಡೀ ದೇಶವನ್ನೇ ಸುಟ್ಟುಹಾಕಿದೆ. ದಿಢೀರ್ ಅಂತಾ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿದಂತೆ ಒಟ್ಟು 26 ದೊಡ್ಡ ಸೋಷಿಯಲ್ ಮೀಡಿಯಾ ಆಪ್ ಬ್ಯಾನ್ ಮಾಡಿತ್ತು. ಈ ಸುದ್ದಿಯನ್ನು ತಿಳಿದ ಲಕ್ಷಾಂತರ ನೇಪಾಳ ಯುವತಿಯರು & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications