ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ

|
Google Oneindia Kannada News

ನಾರಾ, ಜುಲೈ 8: ಜಪಾನ್‌ನ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆದಿದೆ. ಶುಕ್ರವಾರ ಪಶ್ಚಿಮ ಜಪಾನ್‌ನ ನಾರಾದಲ್ಲಿ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದಾನೆ.

ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Former Prime Minister Shinzo Abe has been shot in the city of Nara

ನಾರಾದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಿಂದ ಶಿಂಜೋ ಅಬೆ ಸ್ಥಳದಲ್ಲಿಯೇ ಕುಸಿದು ಬಿದ್ದರು, ತಕ್ಷಣ ಅವರನ್ನು ನಾರಾದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಶುಕ್ರವಾರ ನಾರಾದ ರಸ್ತೆಯಲ್ಲಿ ಸ್ಟಂಪ್ ಭಾಷಣ ಮಾಡುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ. ಬೆಳಗ್ಗೆ 11.30ರ ಸುಮಾರಿಗೆ ಅಬೆ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾಜಿ ನಾಯಕ ಸ್ಟಂಪ್ ಭಾಷಣದ ವೇಳೆ ಗುಂಡೇಟಿನ ಸದ್ದು:
ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸ್ಟಂಪ್ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಬಂದಿದೆ ಎಂದು ರಾಷ್ಟ್ರೀಯ ಪ್ರಸಾರಕ NHK ಮತ್ತು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ.
67 ವರ್ಷದ ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ದಿಢೀರನೇ ಕುಸಿದುಬಿದ್ದರು, ಈ ವೇಳೆ ಅವರ ಕುತ್ತಿಗೆಯಲ್ಲಿ ರಕ್ತಸ್ರಾವವಾಗುತ್ತಿತ್ತು ಎಂದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಮೂಲವೊಂದು ಜಿಜಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್:
"ನನ್ನ ಆತ್ಮೀಯ ಸ್ನೇಹಿತ ಅಬೆ ಶಿಂಜೋ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ. ಅವರು ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಜಪಾನ್ ಜನರು ಮತ್ತು ಅವರ ಕುಟುಂಬವು ಅವರೊಂದಿಗಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಸುದೀರ್ಘ ಅವಧಿ ಸೇವೆ ಸಲ್ಲಿಸಿದ ಶಿಂಜೋ ಅಬೆ:
ಜಪಾನ್‌ನ ಪ್ರಧಾನಮಂತ್ರಿ ಆಗಿ ಶಿಂಜೋ ಅಬೆ ಸುದೀರ್ಘ ಅವಧಿಯವರೆಗೂ ಸೇವೆ ಸಲ್ಲಿಸಿದ್ದಾರೆ. ಅವರು 2006ರಲ್ಲಿ ಒಂದು ವರ್ಷ ಮತ್ತು 2012 ರಿಂದ 2020ರವರೆಗೂ ಅಧಿಕಾರದಲ್ಲಿ ಇದ್ದರು.

English summary
Former Prime Minister Shinzo Abe has been shot in the city of Nara. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X