ಫೀಫಾ ವಿಶ್ವಕಪ್ : ಗೋಲ್ಡನ್ ಬೂಟ್ ವಿಜೇತರು
ಬೆಂಗಳೂರು, ಜೂ.5: ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸುವ ಆಟಗಾರನಿಗೆ 'ಗೋಲ್ಡನ್ ಬೂಟ್' ಪುರಸ್ಕಾರ ನೀಡಲಾಗುತ್ತದೆ. 1930ರ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯಿಂದಲೇ ಇದು ಆರಂಭವಾಗಿದೆ.
ವಿಶ್ವಯುದ್ಧದ ಕಾರಣ 1942 ಮತ್ತು 1946 ರಲ್ಲಿ ಈ ಪಂದ್ಯಾವಳಿ ನಡೆದಿರಲಿಲ್ಲ. ಕಳೆದ ಬಾರಿ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ಪಂದ್ಯಾವಳಿಗಳು ನಡೆದಿತ್ತು. ಸ್ಪೇನ್ ಶಿಸ್ತಿನ ಆಟವಾಡಿ ಕಪ್ ಗೆದ್ದು ಎಲ್ಲರ ಮನಸೂರೆ ಮಾಡಿತ್ತು.
ವಿಶ್ವಕಪ್ ಟೂರ್ನಿಯ ಅತ್ಯುತ್ತಮ ಆಟಗಾರನಾಗಿ ಉರುಗ್ವೆ ತಂಡದ ಡಿಯಾಗೊ ಫೊರ್ಲಾನ್ ಆಯ್ಕೆಯಾಗಿದ್ದರು. ಫೊರ್ಲಾನ್ ಗೆ ಹಾಲೆಂಡ್ ನ ಸ್ನೈಡರ್ ಹಾಗೂ ಸ್ಪೇನ್ ನ ಡೇವಿಡ್ ವಿಲ್ಲಾ ಭಾರಿ ಪೈಪೋಟಿ ನೀಡಿದ್ದರು.[ವಿಶ್ವಕಪ್ ಚಿನ್ನದ ಬೂಟಿನ ಬೇಟೆ : ಯಾರು ಮುಂದೆ?]
ಫೊರ್ಲಾನ್ ಟೂರ್ನಿಯಲ್ಲಿ 5 ಗೋಲುಗಳನ್ನು ಬಾರಿಸಿದ್ದೆ ಅಲ್ಲದೆ ಟೂರ್ನಿಯಲ್ಲಿ ಉರುಗ್ವೆ ನಾಲ್ಕನೇ ಸ್ಥಾನ ಗಳಿಸಲು ಕಾರಣರಾದರು. ಸಹಜವಾಗಿ ಮಾಧ್ಯಮದವರು ಚಿನ್ನದ ಚೆಂಡು ಪಡೆಯುವ ಅರ್ಹತೆ ಫೊರ್ಲಾನ್ ಗೆ ಮಾತ್ರ ಇದೇ ಎಂದು ಅಭಿಮತ ವ್ಯಕ್ತಪಡಿಸಿದರು.
ಚಿನ್ನದ ಬೂಟು : ಫೈನಲ್ ಪಂದ್ಯಕ್ಕೂ ಮುನ್ನ ಜರ್ಮನಿಯ ಮುಲ್ಲರ್, ಉರುಗ್ವೆಯ ಫೊರ್ಲಾನ್, ಹಾಲೆಂಡ್ ನ ಸ್ನೈಡರ್, ಸ್ಪೇನ್ ನ ಡೇವಿಡ್ ವಿಲ್ಲಾ ಕೂಡಾ ಚಿನ್ನದ ಬೂಟು ಸ್ಪರ್ಧೆಯಲ್ಲಿದ್ದರು. ಆದರೆ, ಮುಲ್ಲರ್ ಉರುಗ್ವೆಯ ವಿರುದ್ಧದ ಪಂದ್ಯದಲ್ಲಿ ಮಹತ್ವದ ಗೋಲು ಗಳಿಸಿದ್ದು ಚಿನ್ನದ ಬೂಟು ಗೆಲ್ಲಲು ಕಾರಣವಾಯಿತು. 1930 ರಿಂದ 2010ರ ತನಕ ಚಿನ್ನದ ಬೂಟು ಧರಿಸಿದ ಆಟಗಾರರು ಹಾಗೂ ಗಳಿಸಿದ ಗೋಲುಗಳ ವಿವರ ಹೀಗಿದೆ:
| ಸಂಖ್ಯೆ | ಇಸವಿ | ಆಟಗಾರ | ದೇಶ | ಗಳಿಸಿದ ಗೋಲು |
| 1 | 1930 | ಗುಲ್ಲಿರ್ಮೋ ಸ್ಟಾಬಿಲ್ | ಅರ್ಜೆಂಟಿನಾ | 8 |
| 2 | 1934 | ಒಲ್ದರಿಚ್ ನೆಜೆಡ್ಲೆ | ಚೆಕೊಸ್ಲೋವಾಕಿಯಾ | 5 |
| 3 | 1938 | ಲಿಯೋನಿಡಾಸ್ ಡ ಸಿಲ್ವಾ | ಬ್ರೆಜಿಲ್ | 7 |
| 4 | 1950 | ಅಡೆಮಿರ್ ಮರ್ಕೂಸ್ ಡಿ ಮೆಂಜಿಸ್ | ಬ್ರೆಜಿಲ್ | 9 |
| 5 | 1954 | ಸ್ಯಾ ನ್ಡೊರ್ ಕೊಸಿಸ್ | ಹಂಗೇರಿ | 11 |
| 6 | 1958 | ಜಸ್ಟ್ ಫಾನ್ ಟೆನ್ | ಫ್ರಾನ್ಸ್ | 13 |
| 7 | 1962 | ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವಾಲೆಂಟಿನ್ ಇವನಾವ್ ( ಸೋವಿಯತ್ ಒಕ್ಕೂಟ), ಗರಿಂಚಾ ಮತ್ತು ವಾವಾ ( ಬ್ರೆಜಿಲ್), ಡ್ರೆಜನ್ ಜೆರ್ಕೊವಿಕ್ (ಯುಗೋಸ್ಲಾವಿಯಾ), ಲಿಯೋನೆಲ್ ಸಾಂಚೆಸ್ (ಚಿಲಿ) | ತಲಾ 4 | |
| 8 | 1966 | ಯೂಸೆಬಿಯೋ ಸಿಲ್ವಾ ಫೆರಿರಾ | ಪೋರ್ಚುಗಲ್ | 9 |
| 9 | 1970 | ಗೆರ್ಡ್ ಮುಲ್ಲರ್ | ಜರ್ಮನಿ | 10 |
| 10 | 1974 | ಗ್ರೆಗೊರ್ಜ್ ಲ್ಯಾಟೋ | ಪೋಲಂಡ್ | 7 |
| 11 | 1978 | ಮಾರಿಯೋ ಕೆಂಪ್ಸ್ | ಅರ್ಜೆಂಟಿನಾ | 6 |
| 12 | 1982 | ಪಾಲೋ ರೋಸಿ | ಇಟಲಿ | 6 |
| 13 | 1986 | ಗ್ಯಾರಿ ಲಿನೆಕೆರ್ | ಇಂಗ್ಲೆಂಡ್ | 6 |
| 14 | 1990 | ಸಾಲ್ವಟಾರ್ ಸ್ಕಿಲಾಚಿ | ಇಟಲಿ | 6 |
| 15 | 1994 | ಒಲೆಗ್ ಸಲೆಂಕೋ (ರಷ್ಯಾ), ಹ್ರಿಸ್ಟೋ ಸ್ಟಾಚಿಕೊವ್ (ಬಲ್ಗೇರಿಯಾ) | ತಲಾ 6 | |
| 16 | 1998 | ಡೆವರ್ ಸುಕರ್ | ಕ್ರೋಷಿಯಾ | 6 |
| 17 | 2002 | ರೋನಾಲ್ಡೋ ಡಿ ನಿಮಾ | ಬ್ರೆಜಿಲ್ | 8 |
| 18 | 2006 | ಮಿರೊಸ್ಲಾವ್ ಕ್ಲೋಸ್ | ಜರ್ಮನಿ | 5 |
| 19 | 2010 | ಥಾಮಸ್ ಮುಲ್ಲರ್ | ಜರ್ಮನಿ | 5 |













Click it and Unblock the Notifications