10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್, ಕೆಲಸ ಕಳೆದುಕೊಳ್ಳುವ ಭಯ... Government Jobs
ಸರ್ಕಾರಿ ಕೆಲಸ ಸಿಕ್ಕರೆ ಸಾಕು ಜೀವನ ಸೆಟಲ್, ಇನ್ನುಮುಂದೆ ಯಾವುದೇ ಟೆನ್ಷನ್ ಇರೋದಿಲ್ಲ ಅನ್ನೋ ಮಾತು ಇದೆ. ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಮಾತ್ರವಲ್ಲ ಸರ್ಕಾರಿ ಕೆಲಸ ಬೇಕು ಅಂತಾ ಇಡೀ ಜಗತ್ತಿನಾದ್ಯಂತ ಜನರು ಕಷ್ಟಪಡುತ್ತಾರೆ. ಹೀಗೆ ಸರ್ಕಾರಿ ಕೆಲಸ ಅಂದ್ರೆ ಒಂದು ಗ್ಯಾರಂಟಿ ಅನ್ನೋ ಭಾವನೆಯು ಜನರಲ್ಲಿ ಇದೆ. ಹೀಗಿದ್ದಾಗಲೇ, 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್, ಕೆಲಸ ಕಳೆದುಕೊಳ್ಳುವ ಭಯ...
ಸರ್ಕಾರಿ ಕೆಲಸ ಸಿಗಬೇಕು ಅಂದ್ರೆ ಪುಣ್ಯ ಮಾಡಿರಬೇಕು, ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿ ಬಂದರೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತೆ ಅನ್ನೋ ಮಾತು ಕೂಡ ಇದೆ. ಆದರೆ ಸರ್ಕಾರಿ ಕೆಲಸ ಸಿಗಲು ಕಷ್ಟಪಟ್ಟು ಓದಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಬರೆದು ಪಾಸ್ ಆಗಬೇಕು ಎಂಬುದು ಸತ್ಯ. ಆದರೆ ಇಷ್ಟೆಲ್ಲಾ ಕಷ್ಟಪಟ್ಟು ಸರ್ಕಾರಿ ಕೆಲಸ ಪಡೆದುಕೊಂಡ ನೌಕರರಿಗೆ ದಿಢೀರ್, ಸರ್ಕಾರವೇ ಕೆಲಸದಿಂದ ಕಿತ್ತು ಹಾಕುವ ನಿರ್ಧಾರ ಕೈಗೊಂಡರೆ ಹೇಗೆ ಇರಬೇಡ? ಅದೇ ರೀತಿ ಇದೀಗ 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್, ಅಂದ್ರೆ ಕೆಲಸದಿಂದ ಕಿತ್ತು ಹಾಕುವುದು ಗ್ಯಾರಂಟಿ ಆಗಿದೆ.

10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್!
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸಾಲು ಸಾಲು ವಿವಾದ ಸೃಷ್ಟಿಯಾಗುತ್ತಿವೆ. ಅದೇ ರೀತಿ ಇದೀಗ ಅಮೆರಿಕದ ಸರ್ಕಾರಿ ನೌಕರರಿಗೂ ದೊಡ್ಡ ಸಮಸ್ಯೆ ಎದುರಾಗಿದೆ. ಇದೀಗ ಅಮೆರಿಕದ ಸಾವಿರಾರು ಸರ್ಕಾರಿ ನೌಕರರಿಗೂ ನಡುಕ ಶುರುವಾಗಿದೆ. ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಸರ್ಕಾರಿ ನೌಕರರು ನಲುಗಿ ಹೋಗಿದ್ದಾರೆ. ಮೈತುಂಬಾ ಸಾಲ ಮಾಡಿಕೊಂಡು ಬೀದಿಗೆ ಬೀಳುವ ಪರಿಸ್ಥಿತಿಗೆ ತಲುಪಿರುವ ಅಮೆರಿಕದಲ್ಲಿ ಬರೋಬ್ಬರಿ 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್ ಗ್ಯಾರಂಟಿ ಆಗಿದೆ!
ಒಟ್ಟು 23 ಲಕ್ಷ ಸರ್ಕಾರಿ ನೌಕರರು
ಡೊನಾಲ್ಡ್ ಟ್ರಂಪ್ & ಎಲಾನ್ ಮಸ್ಕ್ ಜೊತೆಯಾಗಿ ಇದೀಗ ಅಮೆರಿಕದಲ್ಲಿ ದೊಡ್ಡ ಕ್ರಾಂತಿ ಮಾಡುತ್ತೇವೆ ಅಂತಿದ್ದಾರೆ. ಆದರೆ ಹೀಗೆ ದೊಡ್ಡ ದೊಡ್ಡ ಬದಲಾವಣೆ ತರುವಾಗ ಸಂಚಲನ ಸೃಷ್ಟಿಯಾಗುತ್ತಿದೆ. ಇಂತಹ ಸಮಯದಲ್ಲೇ, ಸರ್ಕಾರಿ ನೌಕರರನ್ನು ಕೂಡ ವಜಾ ಮಾಡಲು ಮುಂದಾಗಿದ್ದಾರೆ ಡೊನಾಲ್ಡ್ ಟ್ರಂಪ್. ಅಮೆರಿದಲ್ಲಿ ಬರೋಬ್ಬರಿ 23 ಲಕ್ಷ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ.
23 ಲಕ್ಷ ಸರ್ಕಾರಿ ನೌಕರರ ಪೈಕಿ, ಹತ್ತಾರು ಸಾವಿರ ಸರ್ಕಾರಿ ನೌಕರರು ಸ್ವಯಂ ನಿವೃತ್ತಿಗೆ ಒಪ್ಪಿದ್ದಾರೆ. ಆದರೆ ಇದೀಗ ಸುಮಾರು 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ. ಒಟ್ನಲ್ಲಿ ಅಮೆರಿಕ ಸರ್ಕಾರದ ಈ ನಿರ್ಧಾರ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತಾರೋ ಟ್ರಂಪ್? ಅನ್ನೋದನ್ನ ಕಾದು ನೋಡಬೇಕಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications