Get Updates
Get notified of breaking news, exclusive insights, and must-see stories!

Fire Rains in Pakistan: ಭಾರತದಲ್ಲಿ ವಿಪರೀತ ಬಿಸಿ ವಾತಾವರಣ: ಪಾಕಿಸ್ತಾನದಲ್ಲಿ ಆಕಾಶದಿಂದ ಬೆಂಕಿಯ ಮಳೆ!

ಭಾರತದಲ್ಲಿ ಮಳೆಯ ಅಭಾವದಿಂದಾಗಿ ಅನೇಕ ರಾಜ್ಯಗಳು ಶಾಖದ ಅಲೆಯನ್ನು ಎದುರಿಸುವ ಆತಂಕ ಸೃಷ್ಟಿಯಾಗಿದೆ. ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಿದ್ದು 50 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ.

ಹೌದು... ದೆಹಲಿ ಸೇರಿದಂತೆ ಇಡೀ ಉತ್ತರ ಭಾರತ ಬಿಸಿಲಿನ ಝಳಕ್ಕೆ ತತ್ತರಿಸಿದೆ. ರಾಜಧಾನಿ ದೆಹಲಿಯಲ್ಲಿ ತಾಪಮಾನ 48 ಡಿಗ್ರಿಗಿಂತ ಹೆಚ್ಚಿದ್ದು ಹೀಟ್‌ ವೇವ್ ಹೊಡೆತದ ಅಪಾಯವಿದೆ. ಇನ್ನೂ ಬೇರೆ ಬೇರೆ ರಾಜ್ಯಗಳಲ್ಲಿ ಹೀಟ್ ವೇವ್ ಆತಂಕ ಶುರುವಾಗಿದೆ.

Extremely hot weather in India Fire rains from the sky in Pakistan

ರಾಜಸ್ಥಾನದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿನ ತಾಪಮಾನ 49 ಡಿಗ್ರಿಗಿಂತಲೂ ಹೆಚ್ಚಾಗಿದೆ. ಅಂದರೆ 50 ಡಿಗ್ರಿಗಳಿಗೆ ಹತ್ತಿರದಲ್ಲಿದೆ. ಪಶ್ಚಿಮ ಯುಪಿ, ಹರಿಯಾಣ ಮತ್ತು ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಇನ್ನೂ ನೆರೆಯ ರಾಷ್ಟ್ರ ಪಾಕಿಸ್ತಾನದ ಸ್ಥಿತಿ ಇನ್ನೂ ಗಂಭೀರವಾಗಿದೆ.

ಪಾಕಿಸ್ತಾನದಲ್ಲಿ 52 ಡಿಗ್ರಿ ದಾಟಿದ ತಾಪಮಾನ

ಪಾಕಿಸ್ತಾನದ ದಕ್ಷಿಣ ಪ್ರಾಂತ್ಯದ ಸಿಂಧ್‌ನಲ್ಲಿ ತಾಪಮಾನ 52 ಡಿಗ್ರಿ ಸೆಲ್ಸಿಯಸ್ (125.6 ಡಿಗ್ರಿ ಫ್ಯಾರನ್‌ಹೀಟ್) ಗಿಂತ ಹೆಚ್ಚಾಗಿದೆ. ಇಲ್ಲಿನ ಶಾಖದ ಅಲೆ ದಾಖಲೆಯನ್ನು ಸೃಷ್ಟಿಸಿದೆ.

ಮಾನವ-ಪ್ರೇರಿತ ಹವಾಮಾನ ಬದಲಾವಣೆಯ ಪರಿಣಾಮವಾಗಿ ಕಳೆದ ತಿಂಗಳು ಏಷ್ಯಾದಾದ್ಯಂತ ತಾಪಮಾನ ಕೆಟ್ಟದಾಗಿದೆ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಹೇಳಿದೆ.

Extremely hot weather in India Fire rains from the sky in Pakistan

ಸುಮಾರು 2500 BC ಯಲ್ಲಿ ನಿರ್ಮಿಸಲಾದ ಸಿಂಧೂ ಕಣಿವೆ ನಾಗರಿಕತೆಯ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹೆಸರುವಾಸಿಯಾದ ಸಿಂಧ್ ನಗರವಾದ ಮೊಹೆಂಜೋದಾರೋದಲ್ಲಿ, ಕಳೆದ 24 ಗಂಟೆಗಳಲ್ಲಿ ತಾಪಮಾನ 52.2 C (126 F) ಗೆ ಏರಿಕೆಯಾಗಿದೆ. ಮೊಹೆಂಜೊದಾರೊ ಒಂದು ಸಣ್ಣ ನಗರವಾಗಿದ್ದು, ಇಲ್ಲಿ ಕಠಿಣ ಬೇಸಿಗೆ ಇರಲಿದ್ದು ಸೌಮ್ಯವಾದ ಚಳಿಗಾಲ ಮತ್ತು ಕಡಿಮೆ ಮಳೆಯಾಗುತ್ತದೆ.

ಹವಾಮಾನ ಬದಲಾವಣೆಯ ಪರಿಣಾಮ

ಹವಾಮಾನ ಬದಲಾವಣೆಯ ಪ್ರಭಾವದ ವಿಷಯದಲ್ಲಿ ಪಾಕಿಸ್ತಾನ ಐದನೇ ಅತ್ಯಂತ ಸೂಕ್ಷ್ಮ ರಾಷ್ಟ್ರವಾಗಿದೆ ಎಂದು ಹವಾಮಾನ ಕುರಿತ ಪ್ರಧಾನ ಮಂತ್ರಿಗಳ ಸಂಯೋಜಕಿ ರುಬಿನಾ ಖುರ್ಷಿದ್ ಆಲಂ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Extremely hot weather in India Fire rains from the sky in Pakistan

ಪಾಕಿಸ್ತಾನದಲ್ಲಿ 2017 ರಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಬಲೂಚಿಸ್ತಾನ್‌ನ ನೈಋತ್ಯ ಪ್ರಾಂತ್ಯದಲ್ಲಿರುವ ಟರ್ಬತ್ ನಗರದಲ್ಲಿ ತಾಪಮಾನ 54 C (129.2 F) ಗೆ ಏರಿಕೆಯಾಗಿತ್ತು.

ಪಾಕಿಸ್ತಾನದ ಹವಾಮಾನ ಇಲಾಖೆಯ ಮುಖ್ಯ ಹವಾಮಾನಶಾಸ್ತ್ರಜ್ಞ ಸರ್ದಾರ್ ಸರ್ಫರಾಜ್ ಅವರ ಪ್ರಕಾರ, ಇದು ಏಷ್ಯಾದಲ್ಲಿ ಎರಡನೇ ಅತಿ ಹೆಚ್ಚು ತಾಪಮಾನ ಮತ್ತು ವಿಶ್ವದ ನಾಲ್ಕನೇ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಹೇಳಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ, ಮೊಹೆಂಜೊದಾರೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಖವು ಕಡಿಮೆಯಾಗುತ್ತದೆ. ಆದರೆ ರಾಜಧಾನಿ ಕರಾಚಿ (ಪಾಕಿಸ್ತಾನದ ದೊಡ್ಡ ನಗರ) ಸೇರಿದಂತೆ ಸಿಂಧ್‌ನ ಇತರ ಪ್ರದೇಶಗಳಲ್ಲಿ ಮತ್ತೊಮ್ಮೆ ಶಾಖದ ಸಾಧ್ಯತೆಯಿದೆ.

ಭಾರತದ ಅರ್ಧದಷ್ಟು ಭಾಗ ತೀವ್ರ ಶಾಖದ ಹಿಡಿತದಲ್ಲಿ...

ಭಾರತದ ಅರ್ಧದಷ್ಟು ಭಾಗವು ತೀವ್ರವಾದ ಶಾಖದ ಅಲೆಯ ಹಿಡಿತದಲ್ಲಿದೆ. ಇದರರ್ಥ ಈ ದಿನಗಳಲ್ಲಿ ಬೆಳಿಗ್ಗೆ ಬೆವರು ಮತ್ತು ತೇವಾಂಶದಿಂದ ಪ್ರಾರಂಭವಾಗುತ್ತದೆ.

ಮೇ 27 ರಂದು ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸಿವೆ. ಪಂಜಾಬ್‌ನ ಹಲವು ಭಾಗಗಳು, ಹರಿಯಾಣ-ಚಂಡೀಗಢ-ದೆಹಲಿ, ಮಧ್ಯಪ್ರದೇಶದ ಕೆಲವು ಭಾಗಗಳು ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ಇದೇ ಪರಿಸ್ಥಿತಿ ಕಂಡುಬಂದಿದೆ.

ನಿನ್ನೆ, ರಾಜಸ್ಥಾನದ ಫಲೋಡಿಯಲ್ಲಿ 49.4 ಡಿಗ್ರಿ, ದೆಹಲಿಯ ಮುಂಗೇಶ್‌ಪುರದಲ್ಲಿ 48.8 ಡಿಗ್ರಿ ತಾಪಮಾನ ದಾಖಲಾಗಿದೆ. ಮಧ್ಯಪ್ರದೇಶದ ನಿವಾರಿ, ಪಂಜಾಬ್‌ನ ಬಟಿಂಡಾ ಮತ್ತು ಯುಪಿಯ ಝಾನ್ಸಿಯಲ್ಲಿ ಇದೇ ರೀತಿಯ ಪರಿಸ್ಥಿತಿಗಳು ಕಂಡುಬಂದಿವೆ.

ಫಲೋಡಿಯಲ್ಲಿ 49.4 ಡಿಗ್ರಿ ಸೆಲ್ಸಿಯಸ್ ತಾಪಮಾನ

ರಾಜಸ್ಥಾನದಲ್ಲಿ ಬೇಸಿಗೆಯ ಸ್ಥಿತಿ ಹೇಗಿದೆಯೆಂದರೆ ಬಿಸಿಗಾಳಿಗೆ ಒಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿನ ಫಲೋಡಿ ಜಿಲ್ಲೆಯಲ್ಲಿ ತಾಪಮಾನ 50 ತಲುಪಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಬಿಸಿಲಿನ ತಾಪದಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಜೈಪುರದ ಹಲವು ರಸ್ತೆಗಳು ನಿರ್ಜನವಾಗಿವೆ.

ಸರ್ಕಾರದ ಪ್ರಕಾರ, ಇದುವರೆಗೆ ಅಜ್ಮೀರ್‌ನಲ್ಲಿ ಹೀಟ್ ಸ್ಟ್ರೋಕ್‌ನಿಂದ ಮೊದಲ ಸಾವು ಸಂಭವಿಸಿದೆ. ಜನರು ಹೀಟ್ ಸ್ಟ್ರೋಕ್ ಸಮಸ್ಯೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಸದ್ಯ ಬಿಸಿಲಿನ ತಾಪ ರಾತ್ರಿ ಕೂಡ ಮುಂದುವರೆದಿದೆ ಎಂದು ಜೈಪುರ ಹವಾಮಾನ ಇಲಾಖೆ ಹೇಳಿದೆ.

ಎರಡು ದಿನಗಳ ಕಾಲ ತಾಪಮಾನದಲ್ಲಿ ಗಮನಾರ್ಹ ಬದಲಾವಣೆಯಾಗುವುದಿಲ್ಲ. ಅಂದರೆ ಬಿಸಿಲಿನ ಶಾಖವು ಮುಂದುವರಿಯುತ್ತದೆ. ಆದರೆ ಮೇ 30 ಮತ್ತು 31 ರಿಂದ ರಾಜಸ್ಥಾನದಲ್ಲಿ ತಾಪಮಾನ 2 ರಿಂದ 3 ಡಿಗ್ರಿಗಳಷ್ಟು ಕಡಿಮೆಯಾಗಲಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು.

ಜೋಧ್‌ಪುರ, ಬಿಕಾನೇರ್, ಅಜ್ಮೀರ್, ಜೈಪುರ ವಿಭಾಗಗಳ ಕೆಲವು ಭಾಗಗಳಲ್ಲಿ ಎರಡು ದಿನಗಳ ಕಾಲ ಗಂಟೆಗೆ 25-35 ಕಿಮೀ ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ (ಚಂಡಮಾರುತ) ಬೀಸುವ ಸಾಧ್ಯತೆಯಿದೆ.

ಮೇ 29 ರಿಂದ ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮತ್ತು ಮೇ 30 ರಿಂದ ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆಯಿದೆ. ಇನ್ನೂ ಜೂನ್ ಮೊದಲ ವಾರದಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟಕ್ಕೆ ದಾಖಲಾಗುವ ಸಾಧ್ಯತೆ ಇದೆ.

ಸೈಕ್ಲೋನ್‌ನಿಂದಾಗಿ ಭಾರೀ ಮಳೆ: 35 ಮಂದಿ ಬಲಿ

ರೆಮಲ್ ಚಂಡಮಾರುತದಿಂದ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಈಶಾನ್ಯ ರಾಜ್ಯಗಳಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮಿಜೋರಾಂ ಅತಿ ಹೆಚ್ಚು ಹಾನಿಗೊಳಗಾಗಿದೆ. ಇದರಿಂದಾಗಿ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ.

ಮಳೆಯಿಂದ ಮನೆಗಳು ಧ್ವಂಸಗೊಂಡು ವಿದ್ಯುತ್ ತಂತಿಗಳು ನೆಲಕ್ಕುರುಳಿದ್ದರಿಂದ ನೂರಾರು ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 'ರೆಮಲ್' ಚಂಡಮಾರುತದ ನಂತರ ಮಂಗಳವಾರ ಮಿಜೋರಾಂನಲ್ಲಿ ಭೂಕುಸಿತ ಮತ್ತು ನಿರಂತರ ಮಳೆಯಿಂದಾಗಿ ಕಲ್ಲು ಕ್ವಾರಿ ಕುಸಿತದಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಅಸ್ಸಾಂನಲ್ಲಿ ಚಂಡಮಾರುತದ ನಂತರ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ನಾಲ್ಕು ಜನರು ಸಾವನ್ನಪ್ಪಿದ್ದು 18 ಜನರು ಗಾಯಗೊಂಡಿದ್ದಾರೆ.

ಇನ್ನೂ ನಾಗಾಲ್ಯಾಂಡ್‌ನಲ್ಲಿ ನಾಲ್ಕು ಜನ ಸಾವುನ್ನಪ್ಪಿದ್ದು 40 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಮೇಘಾಲಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚಂಡಮಾರುತದ ಪರಿಣಾಮ ಕರಾವಳಿಯಾದ್ಯಂತ ಗಾಳಿಯ ವೇಗ ಗಂಟೆಗೆ 135 ಕಿ.ಮೀ. ಇತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+