ಮಾರ್ಕ್ 80 ಬಾಂಬ್ ಎಷ್ಟು ಅಪಾಯಕಾರಿ? ಇಸ್ರೇಲ್‌ಗೆ ಈ ಬಾಂಬ್‌ಗಳನ್ನು ನೀಡಿ ಕೈ ಕೈ ಹಿಚಿಕೊಳ್ಳುತ್ತಿರುವ ಅಮೆರಿಕ

ಇಸ್ರೇಲ್‌, ಇತ್ತೀಚಿಗೆ ರಾಫಾದ ದಕ್ಷಿಣ ಭಾಗವನ್ನು ಕಬ್ಜಾ ಮಾಡಿಕೊಂಡಿದೆ. ಇದರಿಂದ ಇಸ್ರೇಲ್‌ ಹಾಗೂ ಪೈಲೇಸ್ಟಿನ್‌ ನಡುವಿನ ಯುದ್ಧ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಬೆನ್ನಲ್ಲೆ ಅಮೆರಿಕ ಸಹ ಇಸ್ರೇಲ್‌ ಮೇಲೆ ಒತ್ತಡವನ್ನು ಹೇರುತ್ತಿದೆ. ಅಲ್ಲದೆ ಅಮೆರಿಕಾ ಇಸ್ರೇಲ್‌ಗೆ ನೀಡುತ್ತಿದ್ದ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಇದೆಲ್ಲದರ ನಡುವೆ ಈಗ ಭಾರೀ ಸದ್ದು ಮಾಡುತ್ತಿರುವ ವಿಷಯ ಅಂದ್ರೆ ಮಾರ್ಕ್-80 ಬಾಂಬ್.

ಈ ಬಾಂಬ್‌ಗಳನ್ನು ಅಮೆರಿಕದ ಪೆಂಟಗನ್‌ನಲ್ಲಿ ಸರಣಿಯಲ್ಲಿ ಸಿದ್ಧಪಡಿಸಲಾಗಿದೆ. ಮಾರ್ಕ್-80 ಬಾಂಬ್‌ಗಳಿಂದಾಗಿ ಗಾಜಾದಲ್ಲಿ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಸ್ರೇಲ್‌ಗೆ ಅಂತಹ 3500 ಬಾಂಬ್‌ಗಳ ಪೂರೈಕೆಯನ್ನು ಅಮೆರಿಕ ವಿಳಂಬ ಮಾಡುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಏಕೆಂದರೆ ಇಸ್ರೇಲ್‌ ರಫಾದಲ್ಲಿ ಮಾರ್ಕ್ ಸರಣಿ ಬಾಂಬ್‌ಗಳನ್ನು ಬಳಸಬಹುದೆಂದು ಆತಂಕ ಅಮೆರಿಕದಲ್ಲಿ ಮನೆ ಮಾಡಿದೆ.

Exploring the Origins of the 2 000-Pound Bombs A Key Element in U S -Israeli Relations

ಮಾರ್ಕ್‌ ಬಾಂಬ್‌ ಎಷ್ಟು ಅಪಾಯಕಾರಿ

ಮಾರ್ಕ್‌ ಬಾಂಬ್‌ ಅಷ್ಟು ಅಪಾಯವೇ ಎಂದು ನೀವು ಯೋಚಿಸಬಹುದು. ಹೌದು.. ಈ ಬೌಂಬ್‌ ಹಾಕಿದ ಎರಡು ಕಿಲೋ ಮೀಟರ್‌ ವ್ಯಾಪ್ತಿಯ ಪ್ರದೇಶವು ನಾಶವಾಗುತ್ತದೆ. ಅಲ್ಲದೆ 500 ಮೀಟರ್‌ ವ್ಯಾಪ್ತಿಯಲ್ಲಿ ಬರುವೆ ಎಲ್ಲ ವಸ್ತುಗಳ ಮಟಾಶ್. ಈ ಬಾಂಬ್‌ಗಳಲ್ಲಿ ಹಲವು ವಿಧಗಳಿವೆ. ಮಾರ್ಕ್-84, ಮಾರ್ಕ್-81, ಮಾರ್ಕ್-82, ಮಾರ್ಕ್-83 ಬಾಂಬುಗಳನ್ನು ಒಳಗೊಂಡಿದೆ. ಮೊದಲು ಈ ಬಾಂಬ್‌ನ್ನು ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ ಮಾತ್ರ ಸಿದ್ಧ ಪಡೆಸುತ್ತಾ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳ ಶಸ್ತ್ರಾಗಾರದಲ್ಲೂ ಈ ವಿನಾಶಕಾರಿ ಬಾಂಬ್‌ಗಳಿವೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಗಾಜಾದಲ್ಲಿ ಹೆಚ್ಚಿನ ಸಾವುಗಳು 2000 ಪೌಂಡ್ ಮಾರ್ಕ್ -80 ಬಾಂಬ್‌ಗಳಿಂದ ಉಂಟಾಗಿದೆ. US ಸೇನೆಯ ಪ್ರಕಾರ, ಈ ಬಾಂಬುಗಳನ್ನು ಯುದ್ಧದ ಸಮಯದಲ್ಲಿ ರಂಗದಲ್ಲಿ ಯುದ್ಧ ಮಾಡುತ್ತಿರುವ ಯುದ್ಧ ಸೈನಿಕರನ್ನು ಬೆಂಬಲಿಸಲು ಬಳಸಲಾಗುತ್ತದೆ. ಇಂತಹ ಬಾಂಬ್‌ಗಳನ್ನು ಇಸ್ರೇಲ್‌ ಸಹ ತಯಾರಿಸುತ್ತದೆ. ಆದರೆ ಇಸ್ರೇಲ್‌ ಅಪಾಯಕಾರಿ ಮಾರ್ಕ್‌ 80 ಬಾಂಬ್‌ಗಳನ್ನು ಅಮೆರಿಕದಿಂದಲೇ ಆಮದು ಮಾಡಿಕೊಂಡಿದೆ.

Exploring the Origins of the 2 000-Pound Bombs A Key Element in U S -Israeli Relations

ಇದರ ಮೊದಲ ಪ್ರಯೋಗ ಆಗಿದ್ದು ಯಾವಾಗ?

ಇಸ್ರೇಲ್‌ ಯುದ್ಧ ಆರಂಭಿಸಿದಾಗಲೇ ಈ ಬಾಂಬ್‌ಗಳ ಉಡುವಾಣೆಯನ್ನು ಮಾಡಿದೆ. ಅಷ್ಟಕ್ಕು ಇಸ್ರೇಲ್‌ ಬಳಿ ಈ ಬಾಂಬ್‌ನ ಹಲವು ಸರಣಿಗಳು ಇವೆ. 1000 ಹಾಗೂ 2000 ಪೌಂಡ್‌ ಸರಣಿಯ ಬೌಂಬ್‌ಗಳು ಇಸ್ರೇಲ್‌ ಅಮೆರಿಕದಿಂದ ಪಡೆದಿದೆ. ಅಲ್ಲದೆ 250 ಪೌಂಡ್‌ ತೂಕದ ಬಾಂಬ್‌ಗಳನ್ನು ಸಹ ಇಸ್ರೇಲ್‌ ಹೊಂದಿದೆ. ಪೌಂಡ್‌ ಲೆಕ್ಕಾಚಾರದಲ್ಲಿ ಬಾಂಬ್‌ಗಳನ್ನು ಕರೆಯುವ ಉದ್ದೇಶ, ಇದರ ಪರಿಣಾಮ. 250 ಪೌಂಡ್‌ ಬಾಂಬ್‌ಗಳು ಅಷ್ಟು ಹಾನಿ ಮಾಡುವುದಿಲ್ಲ. ಆದರೆ ಎಚ್ಚರಿಕೆಯನ್ನು ನೀಡುವಂತೆ ಇವೆ. ಆದೆ ಇದರ ಗ್ರಾತ್ರ ಹೆಚ್ಚಾಗುತ್ತಾ ಸಾಗಿದಂತೆ ಇದರ ಪರಿಣಾಮ ಹೆಚ್ಚಾಗುತ್ತಾ ಸಾಗುತ್ತದೆ.

ಈ ಬಾಂಬ್‌ಗಳನ್ನು ಮೊದಲು ವಿಯೆಟ್ನಾಂ ಯುದ್ಧದ ಸಮಯದಲ್ಲಿ ಬೆಳಕಿಗೆ ಬಂದವು. 1964 ಮತ್ತು 1973 ರ ನಡುವೆ, ಹೆಚ್ಚಿನ ಬಾಂಬುಗಳನ್ನು ವಿಯೆಟ್ನಾಂ, ಕಾಂಬೋಡಿಯಾ ಮತ್ತು ಲಾವೋಸ್‌ನಲ್ಲಿ ಬೀಳಿಸಲಾಯಿತು. 2000 ಪೌಂಡ್‌ ಬಾಂಬ್‌ಗಳು ಆಗಸದಿಂದ ಬಿದ್ದರೆ, ಸುರಂಗದಲ್ಲಿ ಇದ್ದ ಜನರು ಇದರ ಟಾರ್ಗೆಟ್‌ ಆಗಿ ಬಿಡುತ್ತಾರೆ. ಹೀಗಾಗಿ ಅಮೆರಿಕ ಈಗ ಟೆನ್ಷನ್‌ ಮಾಡಿಕೊಂಡಿದೆ. ಒಂದು ವೇಳೆ ಇಸ್ರೇಲ್‌ ಅಮೇರಿಕ ಕೊಟ್ಟ ಎಲ್ಲ ಬಾಂಬ್‌ಗಳನ್ನು ಬಳಿಸಿ ಬಿಟ್ಟರೆ ಪರಿಸ್ಥಿತಿ ಏನಗಿ ಬಿಡುತ್ತದೆ ಎಂಬ ಆತಂಕ ವಿಶ್ವದ ದೊಡ್ಡಣನಿಗೆ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+