US Elections 2024: ಡೊನಾಲ್ಡ್ ಟ್ರಂಪ್ ಆಯ್ಕೆ ಬೆನ್ನಲ್ಲೇ ಕೆನಡಾ ಗಡಿಯಲ್ಲಿ ಭಾರಿ ಕಟ್ಟೆಚ್ಚರ!
ಕೆನಡಾ ಗಡಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಜನ ಆಯ್ಕೆ ಮಾಡಿದ್ದಾರೆ. ಈ ಬೆನ್ನಲ್ಲೇ ಅಮೆರಿಕದಲ್ಲಿ ಈಗ ಪರಿಸ್ಥಿತಿ ಸೂಕ್ಷ್ಮವಾಗಿದೆ. ಅದರಲ್ಲೂ ಅಕ್ರಮ ವಲಸಿಗರ ವಿರುದ್ಧ ಈಗ ಟ್ರಂಪ್ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಂಡು, ಅಕ್ರಮವಾಗಿ ಅಮೆರಿಕದಲ್ಲಿ ವಾಸವಿರುವ ಜನರನ್ನು ಹೊರಗೆ ಹಾಕಲು ಸಿದ್ಧತೆ ನಡೆಸಿದೆ. ಇದೇ ಸಮಯದಲ್ಲಿ ಕೆನಡಾ ಸರ್ಕಾರ ಕೂಡ ಗಡಿ ಭಾಗದಲ್ಲಿ ಹೈಅಲರ್ಟ್ ಘೋಷಣೆ ಮಾಡಿದೆ. ಯಾಕೆ ಗೊತ್ತೆ?
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಅಕ್ಕಪಕ್ಕದ ದೇಶಗಳಿಗೆ ಕೂಡ ಭಯವೋ ಭಯ ಶುರುವಾಗಿದೆ. ಅರೆ ಹಾಗಿದ್ರೆ ಡೊನಾಲ್ಡ್ ಟ್ರಂಪ್ ಅವರು ಇದೀಗ ಅಕ್ಕಪಕ್ಕದ ದೇಶಗಳ ವಿರುದ್ಧ ಯುದ್ಧ ಮಾಡುತ್ತಾರಾ? ಅಂತಾ ಪ್ರಶ್ನೆ ಕೇಳಬೇಡಿ. ಆದರೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಅಕ್ರಮ ವಲಸಿಗರ ಎದೆಯಲ್ಲಿ ಭಾರಿ ಭಯ ಕಾಡುತ್ತಿದೆ. ಅವರೆಲ್ಲಾ ಇದೀಗ ಅಮೆರಿಕ ಬಿಟ್ಟು ಹೊರಗೆ ಹೋಗಬೇಕಿದೆ. ಆದರೆ ಹೀಗೆ ಹೊರಗೆ ಹೋಗಲು ಅವರು ಮತ್ತೆ ಕಳ್ಳದಾರಿ ಹುಡುಕುತ್ತಿದ್ದಾರೆ. ಅದರಲ್ಲೂ ಅಮೆರಿಕದ ಪಕ್ಕದಲ್ಲೇ ಇರುವ ಕೆನಡಾ ದೇಶ ಅಕ್ರಮ ವಲಸಿಗರ ಕಾಟಕ್ಕೆ ನಲುಗಿ ಹೋಗುತ್ತಿದೆ!

ಅಮೆರಿಕ ಟು ಕೆನಡಾಗೆ ನುಗ್ಗುತ್ತಿರುವ...
ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ನೀಡಿದ್ದ ಭರವಸೆ ಪ್ರಕಾರ, ಅಮೆರಿಕದ ನೆಲದಲ್ಲಿ ವಾಸ ಮಾಡುತ್ತಿರುವ ಅಕ್ರಮ ವಲಸಿಗರನ್ನು ಅಲ್ಲಿಂದ ಒದ್ದು ಹೊರಗೆ ಹಾಕುವುದು ಗ್ಯಾರಂಟಿ ಅಂತಿದ್ದಾರೆ ಟ್ರಂಪ್ ಬೆಂಬಲಿಗರು. ಆದರೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಳ್ಳುವುದು ಇನ್ನೂ ಕೆಲವು ತಿಂಗಳು ತಡವಾಗಲಿದೆ. ಜನವರಿ ನಂತರ ಡೊನಾಲ್ಡ್ ಟ್ರಂಪ್ ಕೈಗೆ ಅಮೆರಿಕದ ಅಧ್ಯಕ್ಷೀಯ ಅಧಿಕಾರ ಸಿಗಲಿದೆ. ಹೀಗಿದ್ದಾಗಲೇ ಕೆನಡಾ ಅಲರ್ಟ್ ಆಗಿಬಿಟ್ಟಿದೆ.
ಕೆನಡಾ & ಅಮೆರಿಕ ಅಕ್ಕಪಕ್ಕದಲ್ಲೇ ಇರುವ ದೇಶಗಳು, ಹೀಗಾಗಿ ಕೆನಡಾ & ಅಮೆರಿಕ ಗಡಿಗೆ ಯಾವುದೇ ದೊಡ್ಡ ಬೇಲಿ ಇಲ್ಲ. ಆದರೆ ಇದೀಗ ಅದನ್ನೇ ತಮ್ಮ ಬಂಡವಾಳ ಮಾಡಿಕೊಂಡು ಗಡಿ ದಾಟಿ ಕೆನಡಾಗೆ ನುಗ್ಗಲು ಅಮೆರಿಕದ ಅಕ್ರಮ ವಲಸಿಗರು ಸ್ಕೆಚ್ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಕೆನಡಾ ಸರ್ಕಾರ ಇದೀಗ ಅಮೆರಿಕದ ಜೊತೆಗೆ ಕೆನಡಾ ಗಡಿ ಬೆಸೆಯುವ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಭದ್ರತೆ ಒದಗಿಸುತ್ತಿದೆ. ಅಲ್ಲದೆ ತನ್ನ ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಈ ಬಗ್ಗೆ ಖಡಕ್ ಸೂಚನೆ ನೀಡಿದ ಕೆನಡಾ ಸರ್ಕಾರ.
ಆಸ್ಟ್ರೇಲಿಯಾ & ನ್ಯೂಜಿಲೆಂಡ್‌ಗೂ ಕಂಟಕ?
ಡೊನಾಲ್ಡ್ ಟ್ರಂಪ್ ಸರ್ಕಾರವು ಅಮೆರಿಕದ ಆಡಳಿತವನ್ನು ಕೈಗೆ ವಹಿಸಿಕೊಳ್ಳುವ ಮೊದಲು ಈ ಕೆಲಸ ಮಾಡಬೇಕಿದೆ. ಇಲ್ಲವಾದರೆ ಸಮಸ್ಯೆ ಗ್ಯಾರಂಟಿ ಎಂಬ ಮಾತು ಕೇಳಿಬಂದಿದೆ. ಹೀಗೆ, ವಲಸಿಗರು ಈಗ ಅಮೆರಿಕ ಬಿಟ್ಟು ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಬ್ರಿಟನ್ & ನ್ಯೂಜಿಲೆಂಡ್ ದೇಶಗಳಿಗೆ ಪಲಾಯನ ಮಾಡಲು ಹೊಂಚು ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿದೆ.












Click it and Unblock the Notifications